ಆಳಂದ: ಆಡಳಿತ ಸೌಧದ ಆವರಣದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆ ಭೂಮಿ ಪೂಜೆ

0
15

ಆಳಂದ: ೧೨ನೇ ಶತಮಾನದಲ್ಲಿ ಸರ್ವ ಕಾಯಕ ಸಮಾಜಗಳಿಗೆ ಪ್ರಾಧಾನ್ಯತೆ ನೀಡಿ ಅವುಗಳಿಗೆ ಗೌರವಯುತ ಸ್ಥಾನಮಾನ ನೀಡಿದರವರು ಬಸವಣ್ಣನವರಾಗಿದ್ದಾರೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಸೋಮವಾರ ಪಟ್ಟಣದ ಹೊರವಲಯದಲ್ಲಿರುವ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಆಡಳಿತ ಭವನದಲ್ಲಿ ಈಗಾಗಲೇ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆ ಮಾಡಿದ್ದು ಈಗ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದೇವೆ ಇದು ತಾಲೂಕಿನ ಎಲ್ಲ ಜನರ ಕನಸಾಗಿತ್ತು. ಆ ಇಬ್ಬರು ಮಹಾನ ಚೇತನಗಳು ದೇಶದ ಚರಿತ್ರೆಯಲ್ಲಿ ಅಷ್ಟೇ ಅಲ್ಲದೇ ವಿಶ್ವದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಎಂದು ನುಡಿದರು.

ಈಗಾಗಲೇ ಪ್ರತಿಮೆ ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಅವರ ದಿನಾಂಕ ಖಾತ್ರಿ ಪಡಿಸಿಕೊಂಡು ಮೂರ್ತಿ ಉದ್ಘಾಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಯಳಸಂಗಿಯ ಪರಮಾನಂದ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಮುಖಂಡರಾದ ಹಣಮಂತರಾವ ಮಲಾಜಿ, ಅನಂತರಾಜ ಸಾಹು, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಸಿ ಕೆ ಪಾಟೀಲ, ಶರಣಬಸಪ್ಪ ಪಾಟೀಲ, ರಾಜಶೇಖರ ಮಲಶೆಟ್ಟಿ, ನಿಜಲಿಂಗ ಕೋರಳ್ಳಿ, ಮಲ್ಲಪ್ಪ ಹತ್ತರಕಿ, ಬಸವರಾಜ ಪಾಟೀಲ, ತಾ.ಪಂ ಮಾಜಿ ಉಪಾಧ್ಯಕ್ಷ ಗುರು ಪಾಟೀಲ, ಶಿವಪ್ರಕಾಶ ಹೀರಾ, ಚೇತನ ತಡಕಲ, ಯುವರಾಜ ಹತ್ತರಕಿ, ವೀರೇಂದ್ರ ಹತ್ತರಕಿ, ಶರಣು ಕುಮಸಿ, ಗೌರಿ ಚಿಚಕೋಟಿ ಸೇರಿದಂತೆ ಇತರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here