ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ

0
22

ಕಮಲಾಪುರ: ಕೋವಿಡ್ ಮಹಾಮಾರಿಯಿಂದ ಕುಂಠಿತಗೊಂಡಿರುವ ಮಕ್ಕಳ ಶಿಕ್ಷಣ ಸಧ್ಯ ಸಹಜ ಸ್ಥಿತಿಗೆ ಬಂದಿದ್ದು, ಈ ಹೊತ್ತಿನ ಮಕ್ಕಳ ಕೌಶಲ್ಯಭರಿತ ಪ್ರತಿಭಾ ಕಾರಂಜಿ ನಿಜಕ್ಕೂ ನನ್ನಲ್ಲಿ ಸಂತಸ ಮೂಡಿಸಿದೆ. ಆದರೂ ಗುರುಸ್ಥಾನ ಪಡದ ಶಿಕ್ಷಕರು, ಈ ಹಿಂದಿನ ಕಲಿಕಾ ನಷ್ಟವನ್ನು ತುಂಬಿಕೊಡುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ತಾಲೂಕಿನ ಡೊಂಗರಗಾಂವ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಿ.ಆರ್.ಪಿ. ಮಹಾದೇವ ಪಾಟೀಲ ನೇತೃತ್ವದಲ್ಲಿನ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸುವುದರೊಂದಿಗೆ ಈ ಭಾಗದಲ್ಲಿ ಪಿ.ಯು. ಕಾಲೇಜ ಆರಂಭಿಸಲಾಗುವುದು. ಈ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪ್ರೌಢಶಾಲೆಗೆ ಶೌಚಾಲಯ, ಸ್ಮಾರ್ಟಕ್ಲಾಸ್ ಉಪಕರಣ, ಗ್ರಾಮದಲ್ಲಿ ಸಿ.ಸಿ. ರಸ್ತೆ, ಚರಂಡಿ, ಕೊಳುವೆ ಬಾವಿ, ಹೈಮಾಸ್ಕ್‌ದೀಪ ಆದಿಯಾಗಿ ಮುಂತಾದ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾದ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬಮನಳ್ಳಿ ಮಾತನಾಡಿ ನಿರಂತರ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಾಲಾ ಮಕ್ಕಳಿಗೆ ಈ ಕಾರ್ಯಕ್ರಮ ನಿಜಕ್ಕೂ ಅವರಲ್ಲಿನ ಪ್ರತಿಭೆ ಅನಾವರಣಗೊಳಿಸಿ ಕಲಿಕೆಯಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ, ಗುಣಾತ್ಮಕ ಶಿಕ್ಷಣದ ಮೂಲ ಉದ್ದೇಶ ಸಾಕಾರಗೊಳಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಶಿಕ್ಷಕರ ಬೇಡಿಕೆಗಳನ್ನೆಲ್ಲ ಈಡೇರಿಸುತ್ತಿರುವ ಶಾಸಕರು ತಾಲೂಕಿನಲ್ಲಿಯೇ ಬಿ.ಇ.ಓ. ಕಛೇರಿ ಸ್ಥಾಪಿಸಲು ಮನವಿ ಮಾಡಿದರು.

ಡೊಂಗರಗಾಂವ ಕ್ಲಸ್ಟರ್‌ನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢದ ಹದಿನಾರು ಶಾಲೆಗಳ ಸುಮಾರು ವಿದ್ಯಾರ್ಥಿಗಳು ಪಾಲ್ಗೊಂಡ ಈ ಉತ್ಸವದಲ್ಲಿ ಭಾಷಾವಾರು ಕಂಠಪಾಠ, ರಸಪ್ರಶ್ನೆ, ಭಕ್ತಿಗೀತೆ, ಅಭಿನಯಗೀತೆ, ನೃತ್ಯ, ನಾಟಕ, ಚಿತ್ರಕಲೆ, ರಂಗೋಲಿ, ಛದ್ಮವೇಶ, ಅನಾವರಣಗೊಂಡು ಪಾಲಕ-ಪೋಷಕರಿಗೆ ಮುದ ನೀಡಿದವು, ವಿಜೇತರಾದ ತರಗತಿವಾರು ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರಗಳು ಪ್ರೇರಣೆಯಾದವು.

ಸಮಾರಂಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ, ಶ್ರೀಮತಿ ಅಶ್ವಿನಿ ಮೂಖಿ, ಉಪಾಧ್ಯಕ್ಷ ಬಸವರಾಜ ಬಾಪೂರೆ, ಸದಸ್ಯರಾದ ಅನಿಲಕುಮಾರ ಬೆಳಕೇರಿ, ಪಿ.ಡಿ.ಓ. ಶ್ರೀಮತಿ ಸಂಗೀತಾ ಬಿರಾದಾರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪ್ರಕಾಶ ನರೋಣಾ, ಮಿಠ್ಠೆಸಾಬ ಮುಲ್ಲಾ, ಮಹೆಬೂಬ ಮಡಕಿ, ಭೀಮಾಶಂಕರ ರಾಜೇಶ್ವರ, ಶ್ರೀಮತಿ ಮಹಾದೇವಿ, ಡಾ. ಸೂರ್ಯಕಾಂತ ಪಾಟೀಲ, ಅಂಗದರಾವ ಪಾಟೀಲ, ಮುಖ್ಯೋಪಾಧ್ಯಾಯರುಗಳಾದ ಸುನೀತಾ ಬಿರಾದಾರ, ಪ್ರೇಮಿಳಾ ವಿ. ಮಹಾದೇವಿ ಪ್ರಸನ್ನ, ಹೇಮಾ ಸ್ವಾಮಿ, ನಬಿಸಾಬ ಧರ್ಮಣ್ಣ ಚಿನ್ನಾ, ಡಾಕು ನಾಯಕ, ಮೋಹನ ಚವ್ಹಾಣ, ರಾಜಶೇಖರ, ಪದ್ಮಾವತಿ ಸೇರಿದಂತೆ ಶಿಕ್ಷಣ ಸಂಯೋಜಕರಾದ ಮಹಾದೇವಪ್ಪ ಚಿಂಚೋಳಿ, ಲಕ್ಷ್ಮೀಕಾಂತ ಮೇತ್ರಿ, ಪ್ರವೀಣ ಎಚ್.ವಿ. ಸಿ.ಆರ್.ಪಿ. ಗಳಾದ ಶರಣು ಮೂಲಿಮನಿ, ಕಾಶೀನಾಥ ಹಾಗೂ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಹರ್ಷೋಲ್ಲಾಸ ಚಪ್ಪಾಳೆ, ಕುಣಿತದೊಂದಿಗೆ ಸರ್ವರನ್ನೆಲ್ಲ ಆಕರ್ಷಣೆಗೊಳಿಸಿದ ಈ ಹಬ್ಬಕ್ಕೆ ಆರಂಭದಲ್ಲಿ ಕಾಳಮಂದರಗಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದ ಕೇಂದ್ರ ಬಿಂದು ಮಹಾದೇವ ಪಾಟೀಲ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here