ಬರಗೂರು ಮೇಲೆ ವಿನಾಕಾರಣ ದುರುದ್ದೇಶದಿಂದ ದೂರು: ಪ್ರಬುದ್ಧ ಭಾರತ, ದಲಿತ ಸಂಘಟನೆ ಖಂಡನೆ

0
103

ಕಲಬುರಗಿ: ಪಠ್ಯಪುರಿಷ್ಕರಣೆಯಲ್ಲಿ ಸೋತ ಬಿಜೆಪಿ ಸರ್ಕಾರ ಬರಗೂರು ರಾಮಚಂದ್ರಪ್ಪನವರ ವಿರುದ್ಧ ದ್ವೇಷ ಕಾರುತ್ತಾ ಬರಗೂರರು ತಮ್ಮ ಕಾದಂಬರಿ ‘ಭರತ್ ನಗರಿ’ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಹಸಿ ಸುಳ್ಳಿನ ವದಂತಿಯನ್ನು ಹಬ್ಬಿಸಿ, ತೇಜೋವಧೆ ಮಾಡುವ ಹೊನ್ನಾರದಿಂದ ಸುಳ್ಳು ಕೇಸು ದಾಖಲಿಸಿದ್ದು ಖಂಡಿನೀಯವಾಗಿದೆ ಎಂದು ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳು ತಿಳಿಸಿವೆ.

ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಅಶ್ವೀನಿ ಮದನಕರ್ ಅವರು ಭರತ ನಗರ ಕಾದಂಬರಿಯೂ 40 ವರ್ಷಗಳ ಹಿಂದೆ ರಚಿಸಿದ್ದು ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿಯ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಚಲನೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ,ದ ಲಯವನ್ನು ಬಳಸಿಕೊಳ್ಳುತ್ತಾನೆ. ಇದು ಆ ಪಾತ್ರದ ಸ್ವಭಾವ ಮತ್ತು ನಡುವಳಿಕೆಯಾಗಿದೆ. ಇಷ್ಟಕ್ಕೂ ಹೀಗೆ ಹಾಡಿದ ಯುವಕ ಗುಂಡೇಟಿನಿಂದ ಸಾಯುತ್ತಾನೆ ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ. ಇಲ್ಲಿ ಕೃತಿಕಾರರು ಆ ಪಾತ್ರದ ಗುಣ ಧರ್ಮ ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದು ಆಗಿರುವುದಿಲ್ಲ, ಅದು ಆ ಪಾತ್ರದ ಅಭಿಪ್ರಾಯ ಹೊರತು ಕೃತಿಕಾರರದಲ್ಲ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ದೂರು ನೀಡುವ ಧಾವಂತದಲ್ಲಿ ಬಿಜೆಪಿ ಸರ್ಕಾರದವರು ಇನ್ನೊಂದು ಹೊಸ ಬದಲಾವಣೆಯನ್ನು ಗಮನಿಸಿಲ್ಲ ಅನಿಸುತ್ತೆ ಕೆಲವು ತಿಂಗಳ ಹಿಂದೆ ಸಮಗ್ರ ಸಾಹಿತ್ಯ ಸಂಪುಟಗಳನ್ನು ಹೊರತಂದಿರುವ ಬರಗೂರರು ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದಾರೆ. ಅದರಲ್ಲಿ ಭರತನಗರಿ ಕಾದಂಬರಿಯು ಒಂದು. ರಾಷ್ಟ್ರಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದಾರೆ ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದಾರೆ. ಹೀಗಿರುವಾಗ 40 ವರ್ಷಗಳ ಹಿಂದಿನ ಸಾಲು ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ ಮತ್ತು ಬರಗೂರರ ಮೇಲೆ ಸುಳ್ಳು ಕೇಸ್ ಅನ್ನು  ದಾಖಲಿಸಿರುವುದು ನೇರವಾಗಿ ಅವರನ್ನು ತೇಜೋವದೆ ಮಾಡುವ  ಮತ್ತು ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಹುನ್ನಾರ ಇದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here