ಸಹಭಾಗಿತ್ವದ ಗ್ರಾಮೀಣ ಸಮೀಕ್ಷೆ-ಸ್ವಚ್ಛ ಭಾರತ ಮಿಶನ್ ಜಾಗೃತಿ ಸಾಕ್ಷ್ಯಚಿತ್ರಗಳ ಪ್ರದರ್ಶನ

0
95

ಕಲಬುರಗಿ: ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ ಸಮಾಜಕಾರ್ಯಅಧ್ಯಯನ ವಿಭಾಗ ಮತ್ತು ಕಲಿಕೆ, ಟಾಟಾಟ್ರಸ್ಟ್, ಯಾದಗಿರಿ ಹಾಗೂ ಗ್ರಾಮ ಪಂಚಾಯತ್ ಗೋಳಾ (ಬಿ) ಇವರ ಸಂಯುಕ್ತಾಶ್ರಯದಲ್ಲಿಒಂದು ದಿನದ ಸಹಭಾಗಿತ್ವದಗ್ರಾಮೀಣ ಸಮೀಕ್ಷೆ-ಸ್ವಚ್ಛ ಭಾರತ ಮಿಶನ್ ಮತ್ತುಜಾಗೃತಿ ಸಾಕ್ಷ್ಯಚಿತ್ರಗಳ ಪ್ರದರ್ಶನಕಾರ್ಯಕ್ರಮ ನಡೆಯಿತು. ದಿನವಿಡೀ ವಿವಿಧ ಚಟುವಟಿಕೆಗಳಲ್ಲಿ ವಿಧ್ಯಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳು ಜೊತೆಗೂಡಿ ಸಹಭಾಗಿತ್ವದಗ್ರಾಮೀಣ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೮ ಗಂಟೆಯಿಂದರಾತ್ರಿ೮ ಗಂಟೆಯವರೆಗೆ ವಿಶ್ವವಿದ್ಯಾಲಯದ ಸಮಾಜಕಾರ್ಯದ ವಿದ್ಯಾರ್ಥಿಗಳು ಗೋಳಾ (ಬಿ) ಗ್ರಾಮದಲ್ಲಿಟ್ರಾನ್ಸೆಕ್ಟ್ ವಾಕ್ (ಗ್ರಾಮದ ವಿವಿಧ ಬೀದಿಗಳಲ್ಲಿ ನಡಿಗೆ) ಮೂಲಕ ಸಮುದಾಯದಜನರನ್ನುಅವಲೋಕಿಸುವುದು, ಅಲ್ಲಿನ ಸಮಸ್ಯೆಗಳನ್ನು ಅರಿಯುವುದು, ಜನರ ನೋವು-ಮಿಡಿತಗಳನ್ನು ಆಲಿಸುವುದು, ಅಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸ್ಥಿತಿ-ಗತಿಗಳನ್ನು ಅವಲೋಕಿಸುವುದು ವಿವಿಧ ಸಮುದಾಯದಜನರೊಂದಿಗೆಚರ್ಚೆ, ಸಂವಾದ ಮತ್ತು ಭಾಗವಹಿಸುವಿಕೆಯ ಮೂಲಕ ಅನುಭವವನ್ನು ಪಡೆದರು.

Contact Your\'s Advertisement; 9902492681

ನಂತರ ಶಾಲಾ ಮಕ್ಕಳ ಜೊತೆಗೂಡಿಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ, ಪರಿಸರ ಸಂರಕ್ಷಣೆ, ಶೌಚಾಲಯದ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿದರು.ನಂತರ ಶಾಲಾ ಮಕ್ಕಳಿಗೆ ವಿವಿಧ ಆಟ, ಪಾಠ, ಚಿತ್ರಕಲಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಗ್ರಾಮೀಣ ಮಕ್ಕಳಲ್ಲಿ ಸ್ಪರ್ಧಾತ್ಮಕತೆಯನ್ನು ಪರಿಚಯಿಸಲಾಯಿತು.

ನಂತರ ಕಲಿಕೆ ಸಂಸ್ಥೆಯ ಸಿಬ್ಬಂದಿಗಳೂ ಒಳಗೊಂಡಂತೆ ಗ್ರಾಮದ ನಕ್ಷೆಯನ್ನುಜನರಿಂದಲೇಚಿತ್ರೀಕಸಲ್ಪಟ್ಟಿತ್ತು ಮತ್ತುಅವರುತಮ್ಮಗ್ರಾಮದ ಸಂಘ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಸ್ಥೆಗಳನ್ನು ಹೆಸರಿಸುದರ ಮೂಲಕ ಅಲ್ಲಿನ ಶೌಚಾಲಯದ ಸಮಸ್ಯೆಯನ್ನು ತಿಳಿಸುವುದರ ಮುಖೇನ ಅವರಲ್ಲಿಅರಿವನ್ನುಮೂಡಿಸಲಾಯಿತು.

ನೀರಿನಜಡತ್ವವನ್ನು ಹೇಗೆ ಕಂಡುಹಿಡಿಯುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು ನಂತರ ಶಾಲಾ ಮಕ್ಕಳಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಭಾಗವಾದಆರೋಗ್ಯ, ಪೌಷ್ಟಿಕ ಆಹಾರ  ಸೇವನೆ, ಶೌಚಾಲಯದ ಪ್ರಾಮುಖ್ಯತೆ ಮತ್ತು ನಿರ್ವಹಣೆ, ವೈಯಕ್ತಿಕ ಶುಚಿತ್ವ, ಮಳೆನೀರಿನ ಕೊಯ್ಲು, ಪ್ರಥಮಚಿಕಿತ್ಸೆ, ಶಾಲಾ ಆರೋಗ್ಯ ಮತ್ತು ಘನ, ದ್ರವತ್ಯಾಜ್ಯ ನಿರ್ವಹಣೆಕುರಿತುಜ್ಞಾನ ಮತ್ತುಅರಿವನ್ನು ಹೆಚ್ಚಿಸಿ ಸೂಕ್ತ ಮನೋಭಾವವನ್ನು ಬೆಳೆಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣಸಂಜೆಯಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜಕಾರ್ಯ ವಿಭಾಗವುಉತ್ತಮರೀತಿಯಲ್ಲಿ ಸಮುದಾಯದಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದ್ದುದರ ಬಗ್ಗೆ ಶ್ಲಾಘಿಸಿ, ಜೊತೆಗೆ ಭಾರತವು ಹಳ್ಳಿಗಳಿಂದ ಕೂಡಿದದೇಶವಾದ್ದರಿಂದ ವಿಶ್ವವಿದ್ಯಾಲಯಗಳು ಹಳ್ಳಿಗಳ ಕಡೆ ಮುಖ ಮಾಡಬೇಕಿದೆ, ಸಮುದಾಯದಕಡೆ ಮುಖಮಾಡಬೇಕಿದೆ ಆ ಮೂಕ ಸಮುದಾಯದ ಸಮಸ್ಯೆ ಮತ್ತು ಪರಿಹಾರಗಳನ್ನು ಸೂಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಜೊತೆಗೆಉತ್ತಮ ಸಂಶೋಧನೆಗಳಿಗೆ ಒತ್ತು ನೀಡಬೇಕಿದೆ ಎಂದರು.

ಕಾರ್ಯಕ್ರಮದಕೊನೆಯಲ್ಲಿ ಅನೇಕ ಸಾಕ್ಷ್ಯಚಿತ್ರಗಳನ್ನು ಗ್ರಾಮದಲ್ಲಿ ಪ್ರದರ್ಶಿಸಲಾಯಿತು.ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿಯ ಸದಸ್ಯರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರದಲ್ಲಿ ಸಮಾಜಕಾರ್ಯವಿಭಾಗದ ಮುಖ್ಯಸ್ಥರಾದ ಪೊ.ಚೆನ್ನವೀರ್, ಧನರಾಜ್‌ಚಿತ್ತಾಪುರ್, ಪ್ರೋಗ್ರಾಂಆಫೀಸರ್ – ಕಲಿಕೆ, ಗೋಳಾ ಗ್ರಾಮ ಪಂಚಾಯಿತಿಯಅಧ್ಯಕ್ಷರಾದ ಕಾಶೀನಾಥ್ ಬಿರಾದರ್ ಹಾಗೂ ಕಾರ್ಯಕ್ರಮದ ಸಂಯೋಜಕರುಗಳಾದ ಡಾ.ಶ್ರೀನಿವಾಸ ಡಿ., ಡಾ ಲಕ್ಷ್ಮಣ ಜಿ, ಮತ್ತು ಡಾ.ಶಿವಮೂರ್ತಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here