ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಮತ್ತು ಸಂಶೋಧನಾ ಅಧ್ಯಯನ ವಿಭಾಗದ ರಾಜಕುಮಾರ ತಿಪ್ಪಣ್ಣ ಅವರು ” ಸ್ಟೇಟಸ್ ಆಫ್ ಇನಿಫಾರಮೇಷನ್ ಆ್ಯಂಡ್ ಕಮ್ಯುನಿಕೇಶನ್ ಟೆಕ್ನಾಲಜೀಸ್ ಇನ್ ಗೌರ್ನಾಮೆಂಟ್ ಆ್ಯಂಡ್ ಏಡೇಡ್ ಕಾಲೇಜ್ ಲೈಬ್ರರಿಸ್ ಆಫ್ ಹೈದರಾಬಾದ್ ಕರ್ನಾಟಕ ರೀಜನ್ ಎ ಸ್ಟಡೀ ” ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿದಕ್ಕಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿ ನೀಡಿದೆ.
ರಾಜಕುಮಾರ ತಿಪ್ಪಣ್ಣ ಅವರು ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿ. ಟಿ ಕಾಂಬಳೆ ಮಾರ್ಗದರ್ಶನ ಮಾಡಿದರು.