ತಡಕಲ ಗ್ರಾ.ಪಂ 3 ಜನ ಸದಸ್ಯರ ಸದಸ್ಯತ್ವ ರದ್ದತಿಗೆ ಆಗ್ರಹ

0
11

ಕಲಬುರಗಿ: ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಮತ್ತು ಸರಕಾರದ ಪ್ರಮುಖ ಯೋಜನೆಗಳ ಅನು?ನಕ್ಕೆ ಅಡಚಣೆ  ಉಂಟು ಮಾಡುತ್ತಿರುವ ತಡಕಲ ಗ್ರಾಮ ಪಂಚಾಯತನ ೩ ಜನ ಸದಸ್ಯರ ಸದಸ್ಯತ್ವ ರದ್ದು ಪಡಿಸುವಂತೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರೆ ೧೦ ಜನ ಸದಸ್ಯರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗವು, ತಡಕಲ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ ಪವಾಡಶೆಟ್ಟಿ, ನಾಗೇಂದ್ರಪ್ಪಾ ಥಂಬೆ, ಶರಣಬಸಪ್ಪ ಜಮಾದಾರ ಇವರುಗಳು ಮನೆ ಹಂಚಿಕೆ ವಿಷಯವಾಗಿ ಜಿ.ಪಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಗ್ರಾಮದಲ್ಲಿ ಸರಕಾರದ ನಿಯಮಗಳ ಪ್ರಕಾರ ಮುಂಚಿತವಾಗಿ ಡಂಗೂರ ಸಾರಿ ದಿನಾಂಕ ೧೭ನೇ ಜೂನ್ ೨೦೨೨ ರಂದು ತಡಕಲ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಗ್ರಾಮಸಭೆ ನಡೆಸಿ ಸಾರ್ವಜನಿಕರ ಎದುರಗಡೆ ಮನೆಗಳ ಹಂಚಿಕೆ ಮಾಡಲಾಗಿರುತ್ತದೆ ಅಲ್ಲದೇ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ ಪವಾಡಶೆಟ್ಟಿ, ನಾಗೇಂದ್ರ ತಂದೆ ಗುರುಲಿಂಗಪ್ಪ ಥಂಬೆ, ಶರಣಬಸಪ್ಪ ಜಮಾದಾರ ಕಲ್ಯಾಣಿ ತುಕಾಣೆ ಇವರುಗಳು ಖುದ್ದಾಗಿ ಭಾಗವಹಿಸಿದ್ದಾರೆ.( ವಿಡಿಯೋ ಸಿ.ಡಿ ಯಲ್ಲಿ ತಾವು ಪರಿಸೀಲಿಸಬಹುದು) ಇವರೆಲ್ಲರ ಎದುರಗಡೆ ಮನೆಗಳ ಹಂಚಿಕೆ ಪಾರದರ್ಶಕವಾಗಿ ನಡೆದಿದೆ. ಹೀಗಿರುವಾಗ ಅವ್ಯವಹಾರ ಮಾಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಮೂರು ಜನ ಸದಸ್ಯರು ಗ್ರಾಮ ಪಂಚಾಯತಗೆ ಮಂಜೂರಾಗಿ ಬಂದಿರುವ ಒಟ್ಟು ಮನೆಗಳನ್ನು ಸದಸ್ಯರಿಗೆ ಹಂಚಿಕೆ ಮಾಡುವಂತೆ ಕೇಳಿರುತ್ತಾರೆ ಇದಕ್ಕೆ ಸರಕಾರದ ನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ ಎಂದು ತಿಳಿ ಹೇಳಿರುತ್ತೇವೆ ಆದರೆ ಇವರುಗಳು. ಫಲಾನುಭವಿಗಳಿಂದ ಹಣ ಪಡೆದುಕೊಂಡು ಮನೆ ಹಂಚಿಕೆ ಮಾಡಬೇಕೆಂಬುದು ಇವರ ಮೂಲ ಉದ್ದೇಶವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

ತಡಕಲ ಗ್ರಾಮ ಪಂಚಾಯತ ಎದುರಗಡೆ ಇದೇ ಮನೆಗಳ ಹಂಚಿಕೆ ವಿ?ಯ  ಕುರಿತು  ಈ ಹಿಂದೆ ಧರಣಿ ಕುಳಿತಾಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಡಕಲಕ್ಕೆ ಬಂದು  ಧರಣಿ ಕುಳಿತ ಪಂಚಾಯತ ಸದಸ್ಯರಾದ ವಿಶ್ವನಾಥ  ಪವಾಡಶೆಟ್ಟಿ, ನಾಗೇಂದ್ರ ತಂದೆ ಗುರುಲಿಂಗಪ್ಪ ಥಂಬೆ ಮತ್ತು ಶರಣಬಸಪ್ಪ ಜಮಾದಾರ ಇವರುಗಳಿಗೆ ಖುದ್ದಾಗಿ ಬೇಟಿ ಮಾಡಿ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರವಾದರೆ ನಡೆಯಿರಿ ಫಲಾನುಭವಿಗಳ ಮನೆಗಳ ಸ್ಥಳ ಪರೀಶಿಲನೆ ಮಾಡೋಣ ಎಂದಾಗ ಓಡಿ ಹೋಗಲು ಕಾರಣವೇನು? ಅಂದು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಕೂಡ ಕೊಡಲಿಲ್ಲವೇಕೆ? ಈ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವೇ ಇಲ್ಲ. ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವುದು ಸರಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡುವುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಅರ್ಜಿಯನ್ನು ಮರಳಿ ಪಡೆಯುವುದು ಇವರ ಕಾಯಕವಾಗಿದೆ ಎಂದು ಕುಹಕವಾಡಿದ್ದಾರೆ.

೧೭ನೇ ಜೂನ್ ೨೦೨೨ರಂದು ಮಧ್ಯಾಹ್ನ ೨.೦೦ ಗಂಟೆಗೆ ವಾರ್ಡಸಭೆ ಮಾಡಲು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಣಮಸ ಗ್ರಾಮಕ್ಕೆ ಹೋದಾಗ ಗ್ರಾಮ ಪಂಚಾಯತ ಸದಸ್ಯರಾದ ನಾಗೇಂದ್ರ ಥಂಬೆ, ಪಾರ್ವತಿ ಥಂಬೆ, ಶರಣಬಸಪ್ಪಾ ಜಮಾದಾರ ಇವರು ಅಸಭ್ಯವಾಗಿ ವರ್ತಿಸಿ  ಕೆಲವು ಕುಡುಕ ಜನರನ್ನು ಕರೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಅಲ್ಲದೇ ಪಿ.ಡಿ.ಓ  ಕೈಯಲ್ಲಿನ ಸರಕಾರದ ಪತ್ರಗಳನ್ನು ಕಸಿದುಕೊಂಡು ರಸ್ತೆಗೆ ಎಸೆದಿರುತ್ತಾರೆ. ಸಾರ್ವಜನಿಕರಿಗೆ ಹೆದರಿಸಿ ಬೆದರಿಸಿ ವಾರ್ಡ ಸಭಗೆ ಅಡಚಣೆಯುಂಟು ಮಾಡಿರುತ್ತಾರೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದುರ್ನಡತೆಗೆ ಒಳಗಾಗಿರುವ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಸರಕಾರದ ಯೋಜನೆಗಳ ಅನು?ನಕ್ಕೆ ಅಡಚಣೆ ಉಂಟು ಮಾಡುತ್ತಿರುವ, ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್  ಮಾಡುವ ತಡಕಲ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ  ಪವಾಡಶೆಟ್ಟಿ, ನಾಗೇಂದ್ರ ಥಂಬೆ, ಶರಣಬಸಪ್ಪ ಜಮಾದಾರ  ಇವರುಗಳ ಸದಸ್ಯತ್ವ ರದ್ದು ಪಡಿಸುವಂತೆ ಸರಕಾರಕ್ಕೆ ವರದಿ ಸಲ್ಲಿಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಾರದಾ ಗುತ್ತೇದಾರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾನೋಳೆ, ಸದಸ್ಯರಾದ ರೂಪಾ ಗುಘರೆ, ಅಣವೀರಪ್ಪಾ ಪಾಟೀಲ, ಗೀತಾಂಜಲಿ ವಾಡೆ, ರುದ್ರಪ್ಪಾ ಚಿಮ್ಮನ್, ಲಲಿತಾ ವಡೆಯರ್, ಮಲ್ಲಿನಾಥ ಚಾಂಬರ, ಮಧುಮತಿ ಡಿಗ್ಗಿ, ನಾಗಮ್ಮ ಜಮಾದಾರ, ರತ್ನಾಬಾಯಿ ರಾಜೇರಿ, ಪಾರ್ವತಿ ಜಮಾದಾರ, ಪ್ರಿಯಾಂಕ ಮಾಂಜ್ರೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here