ಯಾವ ಮಗು ಶಿಕ್ಷಣದಿಂದ ವಂಚಿತವಾಗಬಾರದು : ಭರತರಾಜ್ ಸಾವಳಗಿ

0
23

ಕಲಬುರಗಿ: ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ವಿಜಯನಗರ ಕಾಲೋನಿಯಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ವತಿಯಿಂದ ಉಚಿತ ಸರಣಿ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಡತನದಿಂದ ಯಾವ ಮಗು ಶಾಲೆಯಿಂದ ಹೊರ ಉಳಿಯಬಾರದು. ಬಡ ಮಕ್ಕಳಿಗೆ ಉಚಿತ ನೆರವು ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಹಾಗೂ ಗುರೂಜಿ ಡಿಗ್ರಿ ಕಾಲೇಜಿನ ಕಾರ್ಯವನ್ನು ಮೆಚ್ಚಿದರು. ಉತ್ತರ ವಲಯದ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗುರುಜಿ ಡಿಗ್ರಿ ಕಾಲೇಜಿನ ಅಧ್ಯಕ್ಷರು ಹಾಗೂ ದಾನಿಗಳಾದ ಕಲ್ಯಾಣಕುಮಾರ್ ಶೀಲವಂತ ಮಾತನಾಡಿ ನನಗೆ ಬಡ ಮಕ್ಕಳಿಗೆ ದಾನ ಮಾಡಲು ಅವಕಾಶ ನೀಡಿದ ಉತ್ತರ ವಲಯದ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಅವರಿಗೆ ಧನ್ಯವಾದಗಳು ತಿಳಿಸಿದರು.

Contact Your\'s Advertisement; 9902492681

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ್ ತೆಗಲತಿಪ್ಪಿ ಮಾತನಾಡಿ ಉತ್ತರ ವಲಯ ಎಲ್ಲಾ ವಲಯಗಳಿಗೆ ಮತ್ತು ತಾಲೂಕುಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ರೀತಿಯಾಗಿ ಉತ್ತರ ವಲಯ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮೂಲಗೆ ಕೆಲಸ ಮಾಡಲಿ ಎಂದು ಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ ಕೆಎಸ್ ಮಾಲಿಪಾಟೀಲ್ ಎಂ ಎಸ್ ಡಬ್ಲ್ಯೂ ವಿಭಾಗದ ನಿವೃತ್ತ ಮುಖ್ಯಸ್ಥರ ಮಾತನಾಡಿ ಉತ್ತರ ವಲಯದ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಸಹಕಾರವಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುಲಿಂಗ ಮಲಗೆ ವಹಿಸಿ ಮಾತನಾಡಿ ತಮ್ಮ ಸಹಕಾರವಿದ್ದರೆ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿ ಮಾಡುತ್ತೇನೆಂದು ಹೇಳಿದರು.

ವೇದಿಕೆ ಮೇಲೆ ಮುಖ್ಯ ಗುರು ಅಂಬಣ್ಣ ಬಿರಾದಾರ್, ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ್, ಕೃಷ್ಣ ನಾಯಕ್, ಕವಿತಾ ದೇಗೌವ್, ನಾಗೇಶ ಮೆಂಗಜಿ, ಗೌರವ ಕಾರ್ಯದರ್ಶಿ ಹನುಮಂತ ದಿಂಡರೆ, ಖಜಂಚಿ ಶ್ರೀಕಾಂತ ಪಾಟೀಲ್, ಡಾ. ಶರಣರಾಜ್ ಚಪ್ಪರಬಂಡಿ, ರಾಜೇಂದ್ರ ಮಾಡಬುಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನವಾಬ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಚೆನ್ನಮ್ಮ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಐದು ಜನ ಶಿಕ್ಷಕಕರಾದ ಸತೀಶಕುಮಾರ, ಶಿವಲೀಲಾ ಹಿರೇಮಠ, ಡಾ. ನಿರ್ಮಲಾ ಸಿರಗಾಪೂರ್, ಶಿವಲೀಲಾ, ಚೆನ್ನಮ್ಮ ಇವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here