ಚಾಟಿ ಏಟಿನ ಶರಣರೆಂದೆ ಖ್ಯಾತಿ ಪಡೆದವರು ಅಂಬಿಗರ ಚೌಡಯ್ಯನವರು

0
102

ಶಹಾಬಾದ: ಹನ್ನೇರಡನೇ ಶತಮಾನದ ಶರಣರಲ್ಲಿ ಚಾಟಿ ಏಟಿನ ಶರಣನೆಂದೆ ಖ್ಯಾತಿ ಪಡೆದ ಶರಣನೆಂದರೆ ಅಂಬಿಗರ ಚೌಡಯ್ಯನವರು ಎಂದು ಕೋಲಿ ಸಮಾಜದ ತಾಲೂಕಾಧ್ಯಕ್ಷ ಶಿವಕುಮಾರ ತಳವಾರ ಹೇಳಿದರು.

ಅವರು ಶುಕ್ರವಾರ ನಗರದ ಬಸವೇಶ್ವರ ಕಾಲೋನಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 8ನೇ ವಚನ ಜ್ಯೋತಿ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಇದ್ದದನ್ನು ಇದ್ದ ಹಾಗೇ ಹೇಳುವ ಎದೆಗಾರಿಕೆ ಅವರಲ್ಲಿತ್ತು. ಮೂಢನಂಬಿಕೆ ,ಕಂದಾಚಾರದ ವಿರುದ್ಧ ತಮ್ಮ ವಚನದಲ್ಲಿ ಕಟುವಾಗಿ ಖಂಡಿಸಿದ ಶರಣರು.ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ ಎಂದು ಹೇಳಿದರು.

ಕೋಲಿ ಸಮಾಜದ ಹಿರಿಯ ಮುಖಂಡ ನಿಂಗಣ್ಣ ಹುಳಗೋಳಕರ್, ಮಾತನಾಡಿ,ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಅಂಬಿಗೆ ಚೌಡಯ್ಯನವರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ. ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಪೀಠ ಸ್ಥಾಪನೆಯ ಉದ್ದೇಶದಿಂದ ಭಂಕೂರ ಗ್ರಾಮದ ನಿಂಗಣ್ಣ ನಂದೆಳ್ಳಿ ಅವರು ಕರ್ನಾಟಕದಾಧ್ಯಂತ ಈ ಯಾತ್ರೆಯನ್ನು ಕೈಗೊಂಡಿದ್ದಾರೆ.ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಲಕ್ಷ್ಮಿಕಾಂತ ಮಸಭೋ,ಲೋಹಿತ್ ಮಳಖೇಡ, ಮಹೇಶ ಯಲೇರಿ, ವಿಶ್ವನಾಥ, ಮೌನೇಶ ಕೊಡ್ಲಿ, ನಾಗೇಶ ಮಣ್ಣೂರ್,ವಿದ್ಯಾಸಾಗರ, ಮೋಹನ ತಳವಾರ,ಮೋಹನ ಘಂಟ್ಲಿ, ನಾಗರಾಜ ಯಲಗೋಡಕರ್,ಕಾಶಿ,ಶಶಿಕಾಂತ ನಂದೆಳ್ಳಿ, ನಾಗೇಶ ಬನ್ನೇರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here