ಕಲಬುರಗಿ: ಮಾಡಬೂಳ ಗ್ರಾಮದಲ್ಲಿ ಸ್ವಾಭಿಮಾನಿ ರಾಮಸ್ವಾಮಿ ಪೆರಿಯಾರ್ ಹಾಗೂ ನಾರಾಯಣ ಗುರುಗಳ ಹುಟ್ಟು ಹಬ್ಬದ ಅಂಗವಾಗಿ ಪಾಯೋಸ್ ಮೇಡಿಲಿಂಕ್ಸ್ ಜಯಸಿಂಗಪೂರ , ಸ್ಪೂರ್ತಿ ಫೌಂಡೇಶನ್ ಟ್ರಸ್ಟ್ ಮಾಡಬೂಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬೂಳ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ಮಾಡಬೂಳ ಪೋಲಿಸ್ ಠಾಣೆಯ ಅಪರಾಧ ವಿಭಾಗದ ಪಿ ಎಸ್ ಐ ಆಗಿರುವ ವೆಂಕಟೇಶ ನಾಯಕ್ ಅವರು ಉದ್ಘಾಟಿಸಿದರು. ಶಿಬಿರದಲ್ಲಿ ಸುಮಾರು 200 ಜನರು ಭಾಗವಹಿಸಿದ್ದರು. ಇದರಲ್ಲಿ 100 ಕ್ಕಿಂತ ಹೆಚ್ಚಿನ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವೈಧ್ಯಾಧಿಕಾರಿಗಳಾದ ಡಾ. ಶರಣಬಸಪ್ಪ ಕೋಲಾರ್, ಡಾ.ದೀಪಕ್ ಪಾಟೀಲ್ ಹಾಗೂ ಡಾ.ಜಾಕೀರ್ ಸರ್ ಮತ್ತು ಮಾಡಬೂಳ ಗ್ರಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಪೂರ್ತಿ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಆನಂದ ಮಸ್ಕಿ , ಕಾರ್ಯದರ್ಶಿಗಳಾದ ಸಂಜೀವನ್ ಸಜ್ಜನ ಇನ್ನಿತರು ಭಾಗವಹಿಸಿದ್ದರು.