ಶಿಕ್ಷಕಿ ಮಮತಾ ಪುರಾಣಿಕಮಠಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

0
16

ಸುರಪುರ: ನಗರದ ಖುರೇಷಿ ಮೊಹಲ್ಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಮತಾ ಪುರಾಣಿಕಮಠಗೆ ರಾಯಚೂರನ ಕಲಾ ಸಂಕುಲ ಸಂಸ್ಥೆಯಿಂದ ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು, ಶಾಸಕ ಬಸನಗೌಡ ದದ್ದಲ, ಕಾಂಗ್ರೆಸ್ ಮುಖಂಡ ಎ,ವಸಂತಕುಮಾರ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ, ಚಿತ್ರನಟಿ ಪೂಜಾ ರಮೇಶ, ಮಾರುತಿ ಬಡಿಗೇರ, ರಾಮಣ್ಣ ಏಗನೂರು ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here