ಕಲಬುರಗಿ: ಉತ್ತರ ಮತಕ್ಷೇತ್ರದ ವಾರ್ಡ್ ೦೯ ರ ರಾಮತಿರ್ಥ ಬಡಾವಣೆಯಲ್ಲಿ ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಕೋಟಾದ ಸಾಮಾನ್ಯ ಯೋಜನೆ ಅಡಿಯಲ್ಲಿ ೩೦ ಲಕ್ಷದ ಸಿ ಸಿ ರಸ್ತೆ ಕಾಮಗಾರಿಗೆ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ನಗರ ಪ್ರದಾನ ಕಾರ್ಯದರ್ಶಿ ಉಮೇಶ ಪಾಟೀಲ್, ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ಅಶೊಕ ಮಾನಕರ, ಪಾಲಿಕೆ ಸದಸ್ಯ ಶಿವಾನಂದ ಪಿಸ್ತಿ, ಮುಖಂಡರಾದ ಚನ್ನು ದಿಗ್ಗಂವಿ, ಚನ್ನವಿರ ಲಿಂಗನವಾಡಿ, ಡಿ ಕೆ ಪಾಟೀಲ, ಸಿದ್ರಾಮ ಸಂಗೊಳಗಿ, ಸಂತೋಷ ಬನ್ನಶೆಟ್ಟಿ, ಎಸ್ ಕೆ ಕುಂಬಾರ, ಈರಣ್ಣ ಬಿರಾದಾರ, ಮಲ್ಲಿಕಾರ್ಜುನ ಖೆಮಜಿ, ಗಜೇಂದ್ರ ಸಾತಕೆಡ, ಬಿ ಎಸ್ ಪಾಟೀಲ ಪಡಸಾಲಗಿ, ಶಂಕರ ಉಜಳಂಬೆ, ಧನರಾಜ ಹಿಪ್ಪರಗಿ, ವಿಜಯರಾಜ ಹಾಗೂ ಬಡಾವಣೆಯ ಪ್ರಮುಖರು ಇದ್ದರು.