ಸುರಪುರ: ನಗರದ ಶ್ರೀ ಪ್ರಭು ಕಲಾ ವಿಜ್ಞಾನ ಹಾಗೂ ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಶ್ರೀ ಮಹಾದೇವಪ್ಪ ರಾಪುಂರೆ ಅವರ ೯೭ನೇ ಜಯಂತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಉಪಪ್ರಾಚಾರ್ಯರಾದ ಪೊ. ವೇಣುಗೋಪಾಲ ನಾಯಕ ಜೇವರ್ಗಿ & ಪ್ರೊ. ಎಮ್.ಡಿ. ವಾರಿಸ್. ಪ್ರಾಚಾರ್ಯರು ಎಸ್.ಪಿ. ಮತ್ತು ಜೆ.ಎಮ್.ಬಿ ಪದವಿ ಪೂರ್ವ, ಕಾಲೇಜು ಮತ್ತು ಪ್ರೊ. ಎನ್.ಎಸ್.ಪಾಟೀಲ ವೇದಿಕೆಯಲ್ಲಿದ್ದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಾಯಿಬಣ್ಣ ಪ್ರಾಸ್ತಾವಿಕ ಮಾತನಡಿ, ಲಿಂ. ಶ್ರೀ ಮಹಾದೇವಪ್ಪ ರಾಂಪುರೆಯವರು ಲೋಕಸಭಾ ಸದಸ್ಯರಾಗಿ ಕಲಬುರಗಿ ವಿಭಾಗದ ಜನತೆಗೆ, ಕಾರ್ಮಿಕ ವರ್ಗಕ್ಕೆ ಧನಿಯಾಗಿ ಮಾಡಿದ ಕಾರ್ಯ ಅದ್ಭುತವಾದುದೆಂದರು. ಮುಖ್ಯ ಅತಿಥಿಗಳಾಗಿದ್ದ ಪ್ರೊ ವೆಣುಗೋಪಾಲ ಜೇವರ್ಗಿ ಮಾತನಾಡಿ, ಹಿಂದುಳಿದ ಹೈದರಾಬಾದ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಕರ್ನಾಟಕದ ಮದನ ಮೊಹನ ಮಾಳವೀಯಾ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.
ಡಾ. ಎಸ್.ಎಚ್. ಹೊಸಮನಿ, ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗೈಕ್ಯ ಮಹಾದೇವಪ್ಪ ರಾಂಪುರೆಯವರು ಹಿಂದುಳಿದ ಹೈ.ಕ. ಭಾಗದಲ್ಲಿ ಸಂಸ್ಥೆ ಕಟ್ಟಿ ಅದರಡಿಯಲ್ಲಿ ಅನೇಕ ವಿದ್ಯಾ ಸಂಸ್ಥೆಗಳನ್ನು ಅತಿ ಕಡಿಮೆ ಅವಧಿ ಹದಿನಾಲ್ಕು ವರ್ಷದಲ್ಲಿ ಕರ್ನಾಟಕದಲ್ಲಿ ಪ್ರತಿಷ್ಟಿತ ಸಂಸ್ಥೆಯ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದರು. ಅದರಲ್ಲೂ ವಿಶೇಷವಾಗಿ ಅತೀ ಹಿಂದುಳಿದ ಹಾಗೂ ನಗರ ಪ್ರದೇಶದಿಂದ ದೂರವಿದ್ದ ಸುರಪುರಿನಲ್ಲಿ ಮಹಾವಿದ್ಯಾಲಯವನ್ನು ಕಟ್ಟಿ ಅದು ಇಲ್ಲಿನ ಅನೇಕ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳುವಲ್ಲಿ ಮಾಡಿದ ಕಾರ್ಯ ಶ್ಲಾಘನೀಯ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಾಲರಾಜ ಸರಾಫ್, ಡಾ. ಎಸ್.ಎಮ್. ಹುನಗುಂದ, ಪ್ರೊ. ಸಿ.ಎಮ್. ಸುತಾರ, ಎಸ್. ಎಮ್. ಸಜ್ಜನ, ಪ್ರೊ. ಮುನೀಶಕುಮಾರ, ಶರಣಗೌಡ ಪಾಟಿಲ್, ಹಣಮಂತ ಸಿಂಗೆ, ವಿಜಯಕುಮಾರ ಬಣಗಾರ, ಕಾಳಪ್ಪ ಶಹಬಾದಿ, ಜ್ಯೊತಿ ಮಾಮಡಿ, ಮಲ್ಹಾರಾವ ಕುಲ್ಕರ್ಣಿ, ವೀರಣ್ಣಜಾಕಾ, ಯಲ್ಲಪ್ಪ, ಉಪೇಂದ್ರ ಮತ್ತು ಹಲವು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಸುರೇಶ ಮಾಮಡಿ ಸ್ವಾಗತಿಸಿದರು,ಮಂಜುನಾಥ ಚಟ್ಟಿ ವಂದಿಸಿದರು.