ಕಲಬುರಗಿ: 75ನೇ ವರ್ಷದ ಅಮೃತಮಹೋತ್ಸವ ಹಾಗೂ ಸೆ. 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಬ್ಬಾಯಿ ಆಗಮಿಸಲಿದ್ದಾರೆ ಎಂದು ಕಲ್ಯಾಣ ಕನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
17ರಂದು ಬೆಳಗ್ಗೆ 9 ಗಂಟೆಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿಧ್ವಜಾರೋಹಣ ನೆರವೇರಿಸುವರು.ಇದಕ್ಕೂ ಮುನ್ನ 8 ಗಂಟೆಗೆ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾಪ್ಣೆ ಮಾಡಲಿದ್ದಾರೆ.ಜಿಲ್ಲಾಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬಾ, ಯೋಜನಾ ಸಚಿವ ಮುನಿರತ್ನ ಮತ್ತಿತರರುಆಗಮಿಸಲಿದ್ದಾರೆಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11 ಗಂಟೆಗೆಎನ್.ವಿ. ಮೈದಾನದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಲ್ಯಾಣಕನಾಟಕ ಸಾರಿಗೆ ಸಂಸ್ಥೆ, ಶಾಲಾ ಕೋಣೆಗಳ ನಿರ್ಮಾಣ, ಪ.ಜಾ. ಮತ್ತು ಪ.ಪಂ. ಹಾಸ್ಟೆಲ್ ನಿರ್ಮಾಣ, ಪ್ರವಾಸೋದ್ಯಮಉತ್ತೇಜನ, ಮೂಲಸೌಕರ್ಯ ನಿರ್ಮಾಣ ಹಾಗೂ ಈ ಭಾಗದಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳಿಗಾಗಿ ಕಲ್ಯಣಕನಾಟಕ ಮಂಡಳಿಯಿಂದ ಸಿಎಂಅವರುಅಂದು 550 ಕೋಟಿರೂ. ಅನುದಾನಘೋಷಣೆ ಮಾಡಲಿದ್ದಾರೆಎಂದು ಹೇಳಿದರು.
ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿಆರೋಗ್ಯ ಶಿಬಿರ ಮತ್ತುಉದ್ಯೋಗ ಮೇಳ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.