ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ: ಜೆ. ಕೆನಡಿ ಶಾಂತಕುಮಾರ್

0
17

ಕಲಬುರಗಿ: ಅಲ್ಪ ಸಂಖ್ಯಾತರಿಗೆ ಸರಕಾರ ನೀಡಿರುವ ವಿವಿಧ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೆ. ಕೆನಡಿ ಶಾಂತಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರದಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯ ಮೊದಲನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಯಡಿ ಕ್ರೈಸ್ತ ಸಮುದಾಯದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಮುದಾಯ ಭವನಗಳ ನಿರ್ಮಾಣ, ಚರ್ಚ್ ದುರಸ್ಥಿ ಮತ್ತು ನವೀಕರಣ, ಅನಾಥಾಲಯಗಳು ವೃದ್ಧಾಶ್ರಮ, ಕ್ರಿಶ್ಚಿಯನ್ ಸ್ಮಶಾನಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕೆಂದು ಅವರು ಹೇಳಿದರು.

Contact Your\'s Advertisement; 9902492681

ಪ್ರತಿ ಮದರಸಗಳಿಗೆ ಒಂದು ಬಾರಿ 10 ಲಕ್ಷ ರೂ ನೀಡಲಾಗುತ್ತದೆ. ಆ ಹಣದಿಂದ ಮುಸ್ಲಿಂ ಸಮುದಾಯದ ವಕ್ಪ್ ನೊಂದಾಯಿತ ಮದರಸಗಳಲ್ಲಿ ಆಟದ ಮೈದಾನ, ವಸತಿ ಸೌಲಭ್ಯ, ಬೋಧಕ ಮತ್ತು ಬೋದಕೇತರ ಸಿಬ್ಬಂದಿಗಳ ಕೊರತೆ, ಶಿಕ್ಷಣ ಹಾಗೂ ಕಂಪ್ಯೂಟರ್ ಜ್ಞಾನ, ಮುಂತಾದ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತರಾದ ಮದರಸಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ದಿಗೊಳಿಸಬೇಕೆಂದರು.

ಕರ್ನಾಟಕದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಅವರು ಸರಕಾರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.

ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ವಿಶೇಷ ಪ್ರೋತ್ಸಹ ಧನಗಳ ಸೇರಿದಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪುವ ರೀತಿಯಲ್ಲಿ ಜಿಲ್ಲೆಯ ಎಲ್ಲಾ ಮದರಸ, ಚರ್ಚ್‍ಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಮಾಹಿತಿ ಅಧಿಕಾರಿಗಳು ನೀಡಬೇಕು ಎಂದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧ್ಯಕ್ಷರಾದ ಭಕ್ತ ಮಾರ್ಕೆಂಡಯ್ಯ ಮಾತನಾಡಿ, ಕಲಬುರಗಿ, ಸೇಡಂ, ಚಿಂಚೋಳಿ, ಚಿತ್ತಾಪೂರ, ಜೇವರ್ಗಿ ಸೇರಿ ಒಟ್ಟು 30 ಚರ್ಚ್‍ಗಳ, 8 ಚರ್ಚ್‍ಗಳ ಕಂಪೌಂಡ್‍ಗೋಡೆ, ಸ್ಮಶಾನ ಆವರಣದ 1 ಗೋಡೆ ದುರಸ್ಥಿ ಈಗಾಗಲೇ ಮಾಡಿದ್ದೇವೆ ಶ್ರೇಯಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಕಾಶ ವೃದ್ದಾಶ್ರಮಗಳ 2 ಕ್ರಿಶ್ಚಿಯನ್ ವೃದ್ಧಾಶ್ರಮಗಳ ಅಭಿವೃಧಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಇಲಾಖೆಗೆ ಸರಿಯಾಗಿ ಸಮಯದಲ್ಲಿ ಫಂಡ್ ಬಿಡುಗಡೆಯಾಗುತ್ತಿಲ್ಲ ಇದರಿಂದ ಮಾಡಬೇಕಾದ ಕೆಲಸಗಳು ಪೂರ್ಣಗೊಳಿಸಲು ತೊಂದರೆ ಆಗುತ್ತಿದೆ. ಆದಷ್ಟು ಬೇಗ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.

ಅಖಿಲ ಭಾರತ ಕ್ರೈಸ್ತ ಮಹಾಸಭಾ ರಾಷ್ಟ್ರೀಯ ಉಪಾದ್ಯಕ್ಷ ಸಂಧ್ಯಾರಾಜ ಸಾಮುವೇಲ್ ಮಾತನಾಡಿ, ಸೇಡಂ, ಜೇವರ್ಗಿ, ಚಿತ್ತಾಪೂರ, ಆಳಂದ ಜಿಲ್ಲೆಗಳಲ್ಲಿ ಕ್ರೈಸ್ತರಿಗಾಗಿ ಪ್ರತ್ಯೇಕ ರುದ್ರಭೂಮಿ ಇಲ್ಲ. ಅವರಿಗೆ ಪ್ರತ್ಯೇಕ ರುದ್ರ ಭೂಮಿಯನ್ನು ಮಂಜೂರು ಮಾಡಿ ಮತ್ತು ಅಲ್ಪ ಸಂಖ್ಯಾತರ ಮಕ್ಕಳಿಗಾಗಿ ಕೆಎಎಸ್, ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 2 ವರ್ಷದಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಪ್ ಬೋರ್ಡ್‍ನ ಜಿಲ್ಲಾಧಿಕಾರಿ ಹಜರತ್ ಅಲಿ,ಜಿಲ್ಲಾ ಅಲ್ಪ ಸಂಖ್ಯಾತರ ಅಧೀಕ್ಷಕರು ಪುಷ್ಪಾ ಅಮರನಾಥ, ಅನಿತಾ ಎಸ್ ಮುನ್ನೂರ್ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯದ ಮುಂಖಡರು ಉಪಸ್ಥಿತರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here