ಶಹಾಭಾದ: ಮನುಷ್ಯ ಆರೋಗ್ಯವಂತವನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಚಿತ್ತಾಪೂರ ಬಿಜೆಪಿ ಅಧ್ಯಕ್ಷ ನೀಲಕಂಠರಾವ ಪಾಟೀಲ ಹೇಳಿದರು.
ಅವರು ಭಂಕೂರ ಗ್ರಾಮದಲ್ಲಿ ಪ್ರಧಾನಿ ಮೋದಿಯವರ ಜನ್ಮ ದಿನದ ನಿಮಿತ್ತ ಕಲಬುರಗಿಯ ಮೆಡಿಕೇರ್ ಆಸ್ಪತ್ರೆ ಹಾಗೂ ಬಿಜೆಪಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಎಲ್ಲದಕ್ಕಿಂತ ದೊಡ್ಡ ಭಾಗ್ಯ. ಇದರಿಂದ ಏನಾದರೂ ಮಾಡಲು ಸಾಧ್ಯ. ಸಮಾಜ ಎμÉ್ಟ ಅಧುನಿಕತೆಯಲ್ಲಿ ಬದಲಾದರು ಗ್ರಾಮೀಣ ಭಾಗದ ರೈತರು, ನಾಗರೀಕರು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡದೆ ಹಲವಾರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಂದರ್ಭವೇ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಎಲ್ಲರಿಗೂ ಆರೋಗ್ಯವೇ ಮುಖ್ಯವಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನು ಸಹ ಯಂತ್ರದಂತೆ ಶ್ರಮಿಸುತ್ತಿದ್ದು, ತನ್ನ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಕಡಿಮೆಯಾಗುತ್ತಿದೆ, ಸಣ್ಣ,ಪುಟ್ಟ, ಆರೋಗ್ಯದ ಸಮಸ್ಯೆ ಬಗ್ಗೆ ನಿರ್ಲಕ್ಷತನ ವಹಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಭಾರಿ ತೆರಬೇಕಾಗುತ್ತದೆ ಇದರಿಂದ ಗ್ರಾಮಕ್ಕೆ ವೈದ್ಯರು ಬಂದು ಉತ್ತಮ ಚಿಕಿತ್ಸೆ ನೀಡುತ್ತಿರುವುದರಿಂದ ಇಂಥಹ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಬಿಜೆಪಿ ಮುಖಂಡ ವಿಠ್ಠಲ್ ನಾಯಕ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಥಮ ಅದ್ಯತೆಯಾಗಿದೆ, ಆರೋಗ್ಯವಿದ್ದಲ್ಲಿ ಮಾತ್ರ ಮನುಷ್ಯನ ಕನಸ್ಸುಗಳು ನನಸಾಗಲು ಸಾಧ್ಯ. ಕಾಯಿಲೆ ಎಂಬುದು ಮನುಷ್ಯನಲ್ಲಿ ಪರಿಣಾಮಕಾರಿಯಾಗಿ ಬೆಳೆದು ಮಾನಸಿಕವಾಗಿ ಕುಬ್ಜನನ್ನಾಗಿ ಮಾಡಿ ಕೊನೆಗೆ ಸಾವಿನ ಸುಳಿಯಲ್ಲಿ ಸಿಲುಕಿಸುತ್ತದೆ, ಆದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಮನುಷ್ಯ ಆರೋಗ್ಯವಂತವನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ ಮಾತನಾಡಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬಹಳಷ್ಟು ಮಂದಿಗೆ ತಮಗೆ ಬಿಪಿ, ಮಧುಮೇಹ ಇರುವುದು ಗೊತ್ತೇ ಇರುವುದಿಲ್ಲ, ಇಂತಹವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗುತ್ತದೆ ಎಂದರು.
ಸುಮಾರು 200ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಿಕಿತ್ಸೆ ಪಡೆದರು. ಕಾರ್ಯಕ್ರಮದಲ್ಲಿ ಉಚಿತವಾಗಿ ಔಷಧಿ ವಿತರಿಸಲಾಯಿತು. ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರು ಚಿಕಿತ್ಸೆ ನೀಡಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಲ್ಲಾಲಿಂಗ ನಾಗೂರೆ, ಗೋಪಾಲ ರಾಠೋಡ, ಭರತ್ ಮುತ್ತಗಾ, ಮಲ್ಲಿಕಾರ್ಜುನ ಸಿರಗೊಂಡ, ಚಂದ್ರಕಾಂತ ಚನ್ನೂರ್, ಕ್ಷೇಮಲಿಂಗ ನರೋಣಾ, ವಿಜಯಕುಮಾರ ಬೆಳಗುಂಪಿ, ಗಂಗಾರಾಮ ರಾಠೋಡ ಸೇರಿದಂತೆ ಹಲವರು ಇದ್ದರು.