ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಮುಖಂಡರ ಸುದ್ದಿಗೋಷ್ಠಿ

0
37

ಸುರಪುರ: ನಮ್ಮ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಿಂದ ಈಬಾರಿ ೮೦ನೇ ವರ್ಷದ ನಾಡಹಬ್ಬ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸುಗೂರೇಶ ವಾರದ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ನಮ್ಮ ಕನ್ನಡ ಸಾಹಿತ್ಯ ಸಂಘವು ರಾಜ್ಯದ ಕೆಲವೇ ಕೆಲವು ಸ್ವಾತಂತ್ರ್ಯ ಪೂರ್ವದ ಸಾಹಿತ್ಯ ಸಂಘಗಳಲ್ಲಿ ನಮ್ಮದು ಒಂದು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಲ್ಲದೆ ೮೦ನೇ ನಾಡಹಬ್ಬವು ಇದೇ ಸಪ್ಟೆಂಬರ್ ೨೭ ರಿಂದ ಅಕ್ಟೋಬರ್ ೧ರ ವರೆಗೆ ನಡೆಯಲಿದೆ.ನಿತ್ಯವು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಮತ್ತು ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಸಂಘದ ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ ಮಾತನಾಡಿ,ಈಬಾರಿಯ ನಾಡಹಬ್ಬವು ೨೭ನೇ ತಾರೀಖು ಬೆಳಿಗ್ಗೆ ಭುವನೇಶ್ವರಿ ದೇವಿಯ ಪೂಜೆಯೊಂದಿಗೆ ಆರಂಭಗೊಳ್ಳಲಿದ್ದು,ಅಂದು ಸಂಜೆ ನಡೆಯುವ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಉದ್ಘಾಟಿಸಲಿದ್ದಾರೆ,ಸುಗೂರೇಶ ವಾರದ ಅಧ್ಯಕ್ಷತೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದ ಬಸವರಾಜ ಮಹಾಮನಿ,ಅತಿಥಿಗಳಾಗಿ ಡಾ:ಚಿ.ಸಿ.ಲಿಂಗಣ್ಣ ಭಾಗವಹಿಸಿ ಜನಪದರಲ್ಲಿ ಜೀವನ ಮೌಲ್ಯ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

೨೮ ರಂದು ಸಂಜೆ ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕಿನ ಅರಕೇರಾದ ಉಪನ್ಯಾಸಕ ಶಾಜೀದಲಿ ಭಾಗವಹಿಸಿ ಇಂದಿನ ಸಮಾಜದಲ್ಲಿ ಸಂತೃಪ್ತಿ ಕುಟುಂಬ ಎನ್ನುವ ವಿಷಯದ ಕುರಿತು ಮಾತನಾಡಲಿದ್ದು,ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್ ಅವರಿಗೆ ಸನ್ಮಾನಿಸಲಾಗುವುದು,ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಅಧ್ಯಕ್ಷತೆವಹಿಸಲಿದ್ದಾರೆ.೨೯ ರಂದು ಕಲಬುರ್ಗಿ ಸಾಹಿತಿ ಗವಿಸಿದ್ಧಪ್ಪ ಪಾಟೀಲ್,ಉಪನ್ಯಾಸಕಿ ಡಾ:ಜಯದೇವಿ ಗಾಯಕವಾಡ ಭಾಗವಹಿಸಿ ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ವಿಷಯದ ಕುರಿತು ಮಾತನಾಡಿಲಿದ್ದಾರೆ

.ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಕ್ಷೆತ್ರಶಿಕ್ಷಣಾಧಿಕಾರಿ ಮಹೇಶ ಪೂಜಾರ ಅಧ್ಯಕ್ಷತೆ ವಹಿಸುವರು.೩೦ ರಂದು ಸಂಜೆ ನಿವೃತ್ತ ಉಪನ್ಯಾಸಕ ಬಿ.ವಿ ಗುಳಬಾಳ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೊಳೂರಿನ ವಿರೂಪಾಕ್ಷಪ್ಪಗೌಡರ ಪಾತ್ರ ವಿಷಯದ ಕುರಿತು ಮಾತನಾಡುವರು.ಉದ್ಯಮಿ ಕಿಶೋರ ಚಂದ ಜೈನ್,ವೈದ್ಯಾಧಿಕಾರಿ ಡಾ:ಎಮ್.ಎಮ್ ಬೋಡೆ ಅವರಿಗೆ ಸನ್ಮಾನಿಸಲಾಗುವುದು,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕ-ಯಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಅಧ್ಯಕ್ಷತೆ ವಹಿಸಲಿದ್ದಾರೆ.ಅಕ್ಟೋಬರ್ ೧ ರಂದು ಸಂಜೆ ಕಲಬುರ್ಗಿಯರ ಪರಿಸರ ಮಿತ್ರ ಹಾಗೂ ಸಾಹಿತಿ ಪ.ಮಾನು ಸಗರ ಭಾಗವಹಿಸಿ ಕಾವ್ಯಕ್ಕಾಗಿ ಕಾವ್ಯ ವಿಷಯದ ಕುರಿತು ಮಾತನಾಡಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ನಿವೃತ್ತ ಸರಕಾರಿ ವೈದ್ಯಾಧಿಕಾರಿ ಹಾಗೂ ಲೇಖಕ ಸತ್ಯನಾರಾಯಣ ಅಲ್ದರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಗಾಗಿ ನಾಡಹಬ್ಬ ಸಮಿತಿಯನ್ನು ರಚಿಸಲಾಗಿದ್ದು,ಗೋವಿಂದರಾಜ ಶಹಾಪುರಕರ್ ಅಧ್ಯಕ್ಷರಾಗಿದ್ದು ಶರಣಬಸವ ಅರಕೇರಿ,ಈರಣ್ಣ ಉಕ್ಕಲಿ,ಸಾಹೇಬಗೌಡ ಕುಂಬಾರ,ರಘುರಾಂ ಕಡಬೂರ,ಬಸವರಾಜ ಯರಸಂ ಹಾಗೂ ರಾಮಭಟ್ಟ ರಾಜಜೋಷಿ ಸದಸ್ಯರಾಗಿದ್ದಾರೆ ಎಂದರು.ನಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸೋಮರಾಯ ಶಖಾಪುರ,ಯಂಕಣ್ಣ ಗದ್ವಾಲ,ಸೋಮಶೇಖರ ಶಾಬಾದಿ,ಪ್ರಕಾಶ ಅಲಬನೂರ,ಅಮರೇಶ ಕುಂಬಾರ,ರಘುರಾಂ ಕಡಬೂರ,ವೆಂಕಟೇಶ ಆವಂಟಿ,ಶರಣು ಅರಕೇರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here