ಕಲಬುರಗಿ: ನಗರದ ಸಾರ್ವಜನಿಕಉದ್ಯಾನದಲ್ಲಿ ಬೆಳಗಿನ ಜಾವ ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮೂವರು ಸುಲಿಗೆಕೋರರು ಹಲ್ಲೆ ನಡೆಸಿ 6,500 ನಗದು ಮತ್ತು 15 ಸಾವಿರರೂ. ಮೌಲ್ಯದ ಮೊಬೈಲ್‍ದೋಚಿದಘಟನೆ ನಡೆದಿದೆ.
ನಗರದ ಮೋಮಿನ್‍ಪುರದಅಬ್ದುಲ್‍ಗಫಾರ್ ಮಹ್ಮದ್‍ಜಬ್ಬಾರ್‍ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್‍ದೋಚಲಾಗಿದೆ. ಅಬ್ದುಲ್‍ಗಫಾರ್ ಎಂದಿನಂತೆ ಮಂಗಳವಾರ ಬೆಳಗಿನ ಜಾವ ವಾಯು ವಿಹಾರ ಮುಗಿಸಿಕೊಂಡುಮನೆಗೆ ಹೊರಟಿದ್ದರು.
ಈ ವೇಳೆಗೆ ಅಲ್ಲಿಗೆ ಬಂದ ಮೂವರುಅಪರಿಚಿತರುಅವರನ್ನುತಡೆದುಅವಾಚ್ಯವಾಗಿ ಬೈಯ್ದು, ಚಾಕುವಿನಿಂದಎಡಗೈ ಮತ್ತಿತರಕಡೆತಿವಿದು ಗಾಯಗೊಳಿಸಿದ್ದಾರೆ. ನಂತರಅವರ ಬಳಿ ಇರುವ ಹಣ ಮತ್ತು ಮೊಬೈಲ್‍ದೋಚಿ ಪರಾರಿಯಾಗಿದ್ದಾರೆ. ಬ್ರಹ್ಮಪುರಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ತನಿಖೆ ನಡೆದಿದೆ.