ಅನುದಾನಿತ ಶಾಲೆಗಳಿಗೆ ಬೇಟಿ ಮಾಡಿದ ತಹಸೀಲ್ದಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ತಂಡ

0
118

ಶಹಾಬಾದ:ನಗರದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಬೇಟಿ ನೀಡಿದ ತಹಸೀಲ್ದಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ತಂಡ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

ಪರಿಶೀಲನಾ ತಂಡದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ ಹಾಗೂ ಪಂಚಾಯತರಾಜ ಇಲಾಖೆಯ ಎಇಇ ಸಾಯಿಬಣ್ಣ ನಗರದ ಬಿವಿಎಮ್ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಎಸ್.ಜಿ.ವರ್ಮಾ ಹಿಂದಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಶಿವಯೋಗೇಶ್ವರ ಪ್ರೌಢಶಾಲೆ, ಕೂಡಲಸಂಗಮ ಪ್ರೌಢಶಾಲೆ, ಗಂಗಮ್ಮ ಪ್ರೌಢಶಾಲೆ, ಭಂಕೂರಿನ ಪ್ರಕಾಶ ಅಂಬೇಡ್ಕರ್ ಶಾಲೆಗೆ ಬೇಟಿ ನೀಡಿ ಪ್ರತಿಯೊಂದು ಕೋಣೆಗೆ ತೆರಳಿ ಪರಿಶೀಲನೆ ಮಾಡಿದರು.

Contact Your\'s Advertisement; 9902492681

ಶಾಲಾ ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿ, ಶಾಲಾ ನೊಂದಣಿ ವರ್ಷ, ನವೀಕರಣ ವರ್ಷ, ಶಾಲೆಯ ಅನುಮತಿ ಪಡೆದ ಆದೇಶ ಪ್ರತಿ, ನಡೆಯುತ್ತಿರುವ ತರಗತಿ, ಬೋಧನಾ ಮಾಧ್ಯಮ,ಮಾನ್ಯತೆ ಪಡೆದ ಕುರಿತ, ಕಟ್ಟಡ ಸುರಕ್ಷತೆ ಪಡೆದ ಪ್ರಮಾಣ ಪತ್ರ,ಅಗ್ನಿ ಸುರಕ್ಷತೆಯ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳಿಂದ ಸಮಾಪನಾ ಪತ್ರ ಪರಿಶೀಲಿಸಿದರಲ್ಲದೇ, ಶಾಲೆಯಲ್ಲಿನ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯೋಗಾಲಯ, ಗ್ರಂಥಾಲಯ, ಆಟೋಪಕರಣ ಹಾಗೂ ಆಟದ ಮೈದಾನವನ್ನು ವಿಕ್ಷೀಸಿದರು.

ಅಲ್ಲದೇ ಶಾಲಾ ಕೋಣೆಗಳಿಗೆ ತೆರಳಿ ಮಕ್ಕಳ ತಲೆ ಎಣಿಕೆ ಮಾಡಿದರು.ನಂತರ ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಶಾಲಾ ಕೋಣೆ, ಶೌಚಾಲಯದ ಸ್ವಚ್ಛತೆ ಕಾಪಾಡಬೇಕು.ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳಿ ಬರುವಂತೆ ಕ್ರಮಕೈಗೊಳ್ಳಲು ಈಗಾಗಲೇ ಹಲವು ಬಾರಿ ಸಭೆಯಲ್ಲಿ ತಿಳಿಸಲಾಗಿದೆ.ಒಂದು ವೇಳೆ ಕ್ರಮಕೈಗೊಳ್ಳದಿದ್ದರೇ ಮುಖ್ಯ ಗುರುಗಳೇ ಜವಾಬ್ದಾರಿಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಕಲಿಕಾ ಚೇತರಿಕೆ ಅಲ್ಲದೇ ಸಂಕಲಾತ್ಮಕ ಮೌಲ್ಯಮಾಪನವನ್ನು ಮಾಡಿ.ಸರಿಯಾದ ಸಮಯಕ್ಕೆ ಅಂಕಗಳ ಪಟ್ಟಿಯನ್ನು ಸಿದ್ಧಪಡಿಸಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಬೋಧನೆ ಮಾಡಲು ಕ್ರಮಕೈಗೊಳ್ಳಿ. ವಿಜ್ಞಾನ ಶಿಕ್ಷಕರು ಇನ್ಸಪೈರ್ ಅವಾರ್ಡಗೆ ಇಬ್ಬರು ಮಕ್ಕಳು ಮಕ್ಕಳನ್ನು ನೊಂದಾಯಿಸಿಕೊಳ್ಳುವುದು ಕಡ್ಡಾಯ.ಆದಷ್ಟು ಬೇಗ ನೊಂದಾಯಿಸಿ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಉತ್ತೀರ್ಣರಾಗಬೇಕು.ಅದಕ್ಕಾಗಿ ಎಲ್ಲಾ ರಿತೀಯ ಸಿದ್ಧತೆ ಶಿಕ್ಷಕರು ಮಾಡಬೇಕು. ಯಾವುದೇ ಕಾರಣಕ್ಕೂ ಇಲಾಖೆಯ ಸೂಚಿಸಿದ ಮಾಹಿತಿಯನ್ನು ಕಡೆಗಣಿಸದೇ ಸರಿಯಾದ ಮಾಹಿತಿಯನ್ನು ಒದಗಿಸಿ.ಅಲ್ಲದೇ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here