ಕಲಬುರಗಿ: ಗುರುವಾರ ದೇಶದ್ಯಂತ ಎನ್ಐಎ ಪಿಎಫ್ಐ ಮುಖಂಡರ ಮನೆಯ ಮೇಲೆ ದಾಳಿ ನಡೆಸಿದ್ದು, ಕಲಬುರಗಿ ಪಿಎಫ್ಐ ಜಿಲ್ಲಾ ಅಧ್ಯಕ್ಷರಾದ ಶೇಕ್ ಎಜಾಜ್ ಅವರ ಬಂಧನ ಆಕ್ರಮವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ರೀಯಾಜ್ ಖತೀಬ್ ಹೇಳಿದ್ದಾರೆ.
ಶೇಕ್ ಎಜಾಜ್ ಅವರ ಮನೆಯ ಮೇಲೆ ಗುರುವಾರ ರಾತ್ರಿ 3 ಗಂಟೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ನಂತರ ಅವರನ್ನು ಬಂಧಿಸಿದೆ. ಈ ಕುರಿತು ಕುಟುಂಬಸ್ಥರಿಗೆ ಅರೇಸ್ಟ್ ಮೆಮೂ ನೀಡಿಲ್ಲ. ಎಜಾಜ್ ಅವರನ್ನು ಬಂಧಿಸಿ ಎಲ್ಲಿಟ್ಟಿಡಲಾಗುತ್ತಿದೆ ಎಂದು ತಿಳಿಸಿಲ್ಲ, ಬಂಧನದ ಕುರಿತು ಸೂಕ್ತ ಮಾಹಿತಿ ನೀಡದೇ ಪೊಲೀಸರು ಬಂದಿಸಿದ್ದಾರೆ. ಈ ಬಂಧನ ಸುಪ್ರೀಂ ಕೋರ್ಟ್ ಡಿ.ಕೆ ಬಾಸು ವರ್ಸ್ ಅವರ ಗೈಡಲೇನ್ಸ್ ನ್ನು ಎನ್ಐಎ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಎನ್ಐಎ ಸಂಸ್ಥೆ ಅಧಿಕಾರಿಗಳು ವಿಚಾರಣೆ ಹೆಸರಲ್ಲಿ ಎಜಾಜ್ ನಾಲ್ವರ ಕುಡುಕುಟುಂಬಸ್ಥರೆಲ್ಲರ 11 ಮುಬೈಲ್ ಗಳು ಜಪ್ತಿ ಮಾಡಿಕೊಂಡಿದ್ದಾರೆ. ಮಸಿದೆಗೆ ಸಂಬಂಧಿಸಿದಸ ದಾಖಲೆ ಮತ್ತು ಹಣ ಜಪ್ತಿ ಮಾಡಿಕೊಂಡಿದ್ದು, ಅವರ ಕುಟುಂಬದ ಮತ್ತು ಮನೆಯ ಆಸ್ತಿಯ ಪತ್ರಗಳು ಸೇರಿದಂತೆ ಎಜಾಜ್ ಅವರ ತಂದೆ ಅವರು ಬಡಾವಣೆಯ ಮಸಿದಿಯ ಕಮೀಟಿಯ ಸದಸ್ಯರಾಗಿದ್ದು, ಮಸಿದಿಯ ಹಣ ಸೇರಿಸಿ ಮದುವೆಗಾಗಿ ಇಟ್ಟಿರುವ 14 ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಿಂಸೆಗೆ ಪ್ರಚೂದನೆ ನೀಡುವಂತಹ ಅಸ್ತ್ರಗಳಾಗಲಿ ವಸ್ತುಗಳು ಇಟ್ಟಿರಲಿಲ್ಲ? ಕೇವಲ ಅವರು ಮುಸ್ಲಿಂ ಎನ್ನುವ ಮಾತ್ರಕ್ಕೆ ಅವರನ್ನು ಬಂಧಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತನಿಖಾ ಸಂಸ್ಥೆಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಇಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಎಜಾಜ್ ಅವರಂತ ಅಮಾಯಕ ಮತ್ತು ನಿಷ್ಠಾವಂತಹ ಸಮಾಜ ಸೇವಕರ ಬೆಂಬಲಕ್ಕೆ ನಾವೆಲ್ಲರು ನಿಲ್ಲಬೇಕೆಂದು ಮನವಿ ಮಾಡಿದರು.