ಶಹಾಬಾದ:ತಾಲೂಕಿನ ಭಂಕೂರ ಗ್ರಾಮದಲ್ಲಿ ಬುಧವಾರದಂದು ನೂತನ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಂಕೂರ ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಗುರು.ಪಿ.ಹೆಚ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಅನೇಕ ಹುಟ್ಟುತ್ತಿವೆ ಅದರ ಜತೆಗೆ ಅನೇಕ ಸಂಸ್ಥೆಗಳು ಮುಚ್ಚಿ ಹೋಗಿವೆ.ಸಂಸ್ಥೆಗಳ ಕ್ರೀಯಾತ್ಮಕ ಚಟುವಟಿಕೆಗಳಿಲ್ಲದಿರುವುದೇ ಹಾಗೂ ಸಂಸ್ಥೆಯ ಪದಾಧಿಕಾರಿಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
ಗ್ರಾಮೀಣಾಭಿವೃದ್ಧಿ ಸಂಸ್ಥೆಗಳುಲಾಭ ಮಾಡಿಕೊಳ್ಳುವ ಸಂಸ್ಥೆಯಾಗದೇ, ಸೇವಾಮನೋಭಾವನೆಯ ಸಂಸ್ಥೆಯಾಗಿದೆ.ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಸರ್ಕಾರೇತರ ಸಂಸ್ಥೆ ಅಚ್ಚುಕಟ್ಟಾಗಿ ಮಾಡುತ್ತಿವೆ.ಆದ ಕಾರಣ ಸಂಸ್ಥೆಯ ಪದಾಧಿಕಾರಿಗಳು ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕೃಷಿ, ಕುರಿ ಸಾಕಣೆ ಯಂತಹ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದಾಗಿದೆ. ಮೊದಮೊದಲು ಸಂಸ್ಥೆ ಚೆನ್ನಾಗಿ ಕೆಲಸ ಮಾಡುತ್ತ ಸಾಗಿದರೆ ಸರ್ಕಾರದಿಂದ ಅನೇಕ ಯೋಜನೆಗಳನ್ನು ಪಡೆದು ಅನುಷ್ಠಾನಕ್ಕೆ ತರಬಹುದು.ಆ ನಿಟ್ಟಿನಲ್ಲಿ ಜ್ಞಾನವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಲಸ ಮಾಡಲಿ ಎಂದು ಶುಭ ಕೋರಿದರು.
ನಿವೃತ್ತ ಶಿಕ್ಷಕ ಹೆಚ್.ವಾಯ್.ರಡ್ಡೇರ್ ಮಾತನಾಡಿ, ಸರ್ಕಾರೇತರ ಸಂಸ್ಥೆಯಾದ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇಂದು ಕಣ್ಣು ತೆರೆದಿದೆ. ಹಂತಹಂತವಾಗಿ ಬೆಳೆಯಲಿ.ಗ್ರಾಮೀಣ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಕಾಣುತ್ತಿದ್ದೆವೆ.ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದು.ಅಲ್ಲದೇ ಹೆಣ್ಣು ಮಕ್ಕಳು ಸ್ವಾಲಂಬಿಯಾಗಲು ಹೊಲಿಗೆ,ಹಪ್ಪಳ ಮಾಡುವ ತರಬೇತಿಯನ್ನು ನೀಡಬಹುದು. ರಕ್ತದಾನಕ್ಕೆ ಪ್ರೋತ್ಸಾಹಿಸಬಹುದು.ಪರಿಸರ ಜಾಗೃತಿ ಮಾಡಬಹುದು.ಸಂಸ್ಥೆಯ ಬೆಳವಣಿಗೆಯಾಗಬೇಕಾದರೆ ಸಂಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಒಗ್ಗಟ್ಟು ಮುಖ್ಯ ಎಂದು ಹೇಳಿದರು.
ಶಿಕ್ಷಕ ಮಲ್ಲಿನಾಥ.ಜಿ.ಪಾಟೀಲ ಮಾತನಾಡಿದರು. ಗ್ರಾಪಂ ಸದಸ್ಯ ಶರಣಗೌಡ ದಳಪತಿ, ಬಸವ ಸಮಿತಿ ಪ್ರೌಢಶಾಲೆಯ ಮುಖ್ಯಗುರು ರಮೇಶ ಅಳ್ಳೋಳ್ಳಿ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ನೂತನ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿರೇಂದ್ರ.ಸಿ.ರಾಠೋಡ, ಕಾರ್ಯದರ್ಶಿ ಉತ್ತಮ.ಡಿ. ಚವ್ಹಾಣ, ಉಪಾಧ್ಯಕ್ಷ ಭಗವಂತ, ಖಜಾಂಚಿ ನಾಗೇಂದ್ರ ಚೆಂಗಟಿ, ಸದಸ್ಯರಾದ ಆನಂದ.ಎಂ.ರಾಠೋಡ, ಸುನೀಲಕುಮಾರ, ಮಧುಮತಿ.ಜೆ.ಚವ್ಹಾಣ ಸೇಇದಂತೆ ಅನೇಕರು ಇದ್ದರು.