ಮಹಾರಾಷ್ಟ್ರದ ಉಮರ್ಗಾದಲ್ಲಿ ಪೊಲೀಸರ ಮೇಲೆ ಗಾಂಜಾ ಗ್ಯಾಂಗ್ ದಾಳಿ

0
26

ಕಲಬುರಗಿ: ಅಕ್ರಮಗಾಂಜಾ ಮಾರಾಟ ಮಾಡುವಗ್ಯಾಂಗ್ ಪತ್ತೆ ಹಚ್ಚಲು ಹಾಗೂ ಅದರ ಮೂಲ ಬೇಧಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದ ಪೊಲೀಸ್‍ತಂಡದ ಮೇಲೆ ಗಾಂಜಾದಂಧೆಕೋರರು ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದಉಮರ್ಗಾತಾಲ್ಲೂಕಿನತರೂರಿಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ದಾಳಿಯಲ್ಲಿ ಕಲಬುರಗಿಜಿಲ್ಲಾಗ್ರಾಮೀಣಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರತಲೆ, ಮುಖ, ಹೊಟ್ಟೆ ಭಾಗದಲ್ಲಿಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಗತ್ಯ ಬಿದ್ದರೆಏರ್‍ಲಿಫ್ಟ್ ಮೂಲಕ ಅವರಿಗೆ ಹೆಚ್ಚಿನಚಿಕಿತ್ಸೆ ನೀಡುವಂತೆ ಗೃಹ ಸಚಿವಅರಗಜ್ಞಾನೇಂದ್ರಅವರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆಅವರ ಬ್ಲಡ್ ಪ್ಲಶರ್‍ನಲ್ಲಿ ಹೆಚ್ಚು ಕಮ್ಮಿಆಗುತ್ತಿರುವುದರಿಂದಇಲ್ಲಿಯೇಚಿಕಿತ್ಸೆಆಸ್ಪತ್ರೆಯ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಘಟನೆಯ ವಿವರ: ಕಳೆದ ಎರಡು ಮೂರು ದಿನಗಳ ಹಿಂದೆಗಾಂಜಾದಂಧೆಆರೋಪಿ ಸಂತೋಷಎಂಬಾತನನ್ನು ಪೊಲೀಸರು ಬಂಧಿಸಿದ್ದರು.ಆತ ನೀಡಿದ ಮಾಹಿತಿ ಮೇರೆಗೆ ಶುಕ್ರವಾರ ಮಧ್ಯಾಹ್ನ ಸಿಪಿಐ ಇಲ್ಲಾಳ ನೇತೃತ್ವದಲ್ಲಿ 10 ಜನರ ಪೊಲೀಸ್‍ತಂಡ ಮಹಾರಾಷ್ಟ್ರಕ್ಕೆ ತೆರಳಿತ್ತು.ಗಾಂಜಾ ಬೆಳೆಯುವ ಹೊಲಗಳಿಗೆ ದಾಳಿ ನಡೆಸಲು ಪೊಲೀಸರು ಮುಂದಾದಾಗ ಸುಮಾರು 30-40 ಗಾಂಜಾದಂಧೆಕೋರರು ಕಟ್ಟಿಗೆಗಳಿಂದ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ.ರಾತ್ರಿ ಸುಮಾರು 9.30ರ ವೇಳೆಗೆ ಪೊಲೀಸರ ಮೇಲೆ ದಾಳಿ ನಡೆದಿದ್ದು, ದಾಳಿ ನಡೆಯುತ್ತಿದ್ದಂತೆ ಸಿಪಿಐ ಇಲ್ಲಾಳ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎನ್ನಲಾಗಿದೆ.

ಆದರೂ ದಂಧೆಕೋರರು ಪೊಲಿಸರನ್ನೇಅಟ್ಟಾಡಿಸಿ ದಾಳಿ ನಡೆಸಿದ್ದಾರೆ. ಆಗ ಪೊಲೀಸರು ಪ್ರಾಣ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿಓಡಿದ್ದಾರೆ.ಗಂಬೀರವಾಗಿಗಾಯಗೊಂಡ ಶ್ರೀಮಂತ ಇಲ್ಲಾಳ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಶುಕ್ರವಾರ ಮಧ್ಯರಾತ್ರಿ 2.30ರ ಸುಮಾರಿಗೆದಾಖಲಿಸಲಾಗಿದೆ.ಜಿಲ್ಲಾಧಿಕಾರಿ, ಪೊಲೀಸ್‍ಕಮೀಷನರ್, ಎಸ್ಪಿ ಇಷಾ ಪಂಥ್‍ಆಸ್ಪತ್ರೆಗೆ ಭೇಟಿ ನೀಡಿಆರೋಗ್ಯ ವಿಚಾರಿಸಿದ್ದಾರೆ.

ಇಲ್ಲಾಳ ಆರೋಗ್ಯದಲ್ಲಿ ಚೇತರಿಕೆ: ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರಆರೋಗ್ಯದಲ್ಲಿಚೇತರಿಕೆಕಂಡು ಬಂದಿದೆಎಂದುಜಿಲ್ಲಾಧಿಕಾರಿಯಶ್ವಂತ ವಿ.ಗುರುಕರ್ ತಿಳಿಸಿದ್ದಾರೆ.ಖುದ್ದು ಎಸ್ಪಿ ಅವರೇಆಸ್ಪತ್ರೆಯಲ್ಲಿ ಹಾಜರಿದ್ದು, ಚಿಕಿತ್ಸೆಗೆಅಗತ್ಯಕ್ರಮ ಕೈಗೊಳ್ಳುತ್ತಿದ್ದಾರೆ.ಅವರಚಿಕಿತ್ಸೆಗೆ ಬೇಕಾದಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.ಇಲ್ಲಾಳ ಅವರಆರೋಗ್ಯ ಸುಧಾರಣೆಗೆಎಲ್ಲರೂ ಪ್ರಾರ್ಥಿಸೋಣಎಂದರು.

ನೆರವಿಗೆ ಸರ್ಕಾರಕ್ಕೆ ಮನವಿ: ತಮ್ಮತಂದೆಯವರಆರೋಗ್ಯ ಸ್ಥಿತಿ ಕುರಿತು ಈಗಲೇ ಏನನ್ನೂ ಹೇಳಲು ಬರುವುದಿಲ್ಲ ಎಂದುಆಸ್ಪತ್ರೆಯ ವೈದ್ಯರು ಹೇಳಿದ್ದು, ಸರ್ಕಾರತಮ್ಮಕುಟುಂಬದ ನೆರವಿಗೆ ಬರಬೇಕುಎಂದು ಶ್ರೀಮಂತ ಇಲ್ಲಾಳ ಪುತ್ರಕಿರಣಮನವಿ ಮಾಡಿದರು.ಈ ಕುರಿತುಆಸ್ಪತ್ರೆಎದುರು ಮಾಧ್ಯಮದವರೊಂದಿಗೆ ಮಾತನಾಡಿದಅವರು, ನಮ್ಮತಂದೆಕರ್ತವ್ಯದಲ್ಲಿದ್ದಾಗಲೇಅವರ ಮೇಲೆ ಅಟ್ಯಾಕ್‍ಆಗಿದೆ.ಅವರದೇಹದ ನಾನಾ ಕಡೆಗಂಭೀರವಾದ ಗಾಯಗಳಾಗಿವೆ. ಅಪಾಯಕಾರಿ ಸ್ಥಳದ ಕಡೆ ಕಳಿಸುವಾಗ ಹೆಚ್ಚಿನ ಸಿಬ್ಬಂದಿಯನ್ನು ಕಳಿಸಿದರೆ ಇಂದು ನಮ್ಮತಂದೆಗೆಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದುತಮ್ಮ ಗೋಳು ತೋಡಿಕೊಂಡರು.

ಪ್ರತಿಭಟನೆ: ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ಗಾಂಜಾ ಮಾಫಯಾ ದಾಳಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಯುವ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಕರ್ನಾಟಕ ಪ್ರದೇಶಕುರುಬರ ಸಂಘದಜಿಲ್ಲಾಧ್ಯಕ್ಷರಾದಂತಗುರುನಾಥ ಪೂಜಾರಿ, ರವಿಗೊಂಡಕಟ್ಟಿಮನಿ, ಮಲ್ಲಿಕಾರ್ಜುನ, ಪರಮೇಶ್ವರಆಲಗೂಡರವಿ ಪೂಜಾರಿ, ಪ್ರಕಾಶಕಾಚರೆ, ಶರಣು ಬೇಲೂರುಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here