- ಸುರಪುರ: ರಾಜಾ ವೆಂಕಟಪ್ಪ ನಾಯಕ ಅಭಿಮಾನಿ ಬಳಗದ ಕೊಡುಗೆ
ಸುರಪುರ: ಮತಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಿಗಾಗಿ ಇಲ್ಲಿಯ ರಾಜಾ ವೆಂಕಟಪ್ಪ ನಾಯಕ ಅಭಿಮಾನಿ ಬಳಗದಿಂದ ಉಚಿತ ತರಬೇತಿ ಕೊಡಿಸಲು ಮುಂದಾಗಿರುವ, ಕೆಎಎಎಸ್, ಪಿಎಸ್‍ಐ ಸೇರಿದಂತೆ ಸರಕಾರದ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳ ಆಯ್ಕೆಗೊಳಿಸಲು ನಗರದ ಶ್ರೀಪ್ರಭು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪರೀಕ್ಷಾರ್ಥಿಗಳಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಪ್ರಮಾಣ ಪತ್ರ ವಿತರಿಸಿದರು.
ಪ್ರಮಾಣ ಪತ್ರಗಳ ವಿತರಿಸಿ ಮಾತನಾಡಿದ ಆರ್.ವಿ.ನಾಯಕ ಅವರು,ಅಭಿಮಾನಿ ಬಳಗದ ವತಿಯಿಂದ ಈ ಭಾಗದ ಯುವಕರಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಯುವಕರಿಗೆ ಕೆಎಎಸ್, ಪಿಎಸ್‍ಐ, ಎಫ್‍ಡಿಎ ಸೇರಿದಂತೆ ವಿವಿಧ ಹುದ್ದೆಗಳಿಗೆ ಕೈಗೊಳ್ಳುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತಯಾರಿ ನಡೆಸಲು ಉಚಿತ ತರಬೇತಿ ನೀಡಲು ಸಲುವಾಗಿ ಈ ಪ್ರಯತ್ನ ಕೈಗೊಂಡಿರುವುದು ಉತ್ತಮ ಕಾರ್ಯ ಪ್ರವೇಶ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಧಾರವಾಡನ ಕೆಸಿಎಸ್ ಅಕಾಡೆಮಿ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ಪರೀಕ್ಷಾರ್ಥಿಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು ಹಾಗೂ ಉನ್ನತ ಹುದ್ದೆಗಳಿಗೆ ಆಯ್ಕೆಗೊಂಡು ಈ ಭಾಗಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಉತ್ತಿರ್ಣಗೊಂಡ 50 ಪರೀಕ್ಷಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಕಾಲೇಜಿನ ಪ್ರಾಂಶುಪಾಲ ಎಚ್.ಎಚ್. ಹೊಸಮನಿ, ಮುಖಂಡರಾದ ಮಲ್ಲಣ್ಣ ಸಾಹು ನರಸಿಂಗಪೇಟ, ಭೀಮರೆಡ್ಡಿ ಬೆಕಿನಾಳ, ದೇವಿಂದ್ರ ಮುದನೂರು, ಅಂಬು ದೇಸಾಯಿ ಹುಣಸಗಿ ಇತರರು ಉಪಸ್ಥಿತರಿದ್ದರು.