ಕಲಬುರಗಿ: ಈ ಬಾರಿಯ ಪಕ್ಷಮಾಸ ಸೇ 11 ರಿಂದ 25 ರ ವರೆಗೆ 15 ದಿನ ಗಳ ಕಾಲ ಪಿತೃಪಕ್ಷ ಸದ್ಭಕ್ತರ ಬಹು ದಿನಗಳ ಒತ್ತಾಯಕ್ಕೆ ಹಾಗೂ ಗುರುಗಳ ಪ್ರೇರಣೆಯಿಂದ ಪ್ರಥಮ ಬಾರಿಗೆ ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ್ ಸೇವಾ ಸಮಿತಿ ವತಿಯಿಂದ ಶುರು ಮಾಡಲಾಯಿತು.
ಕೊಡಂಬಲ್, ಆಳಂದ್, ಬೀದರ್, ಕಮಲಾಪುರ್, ಬೇರೆ ಹಳ್ಳಿಗಳಿಂದ ಸೇರಿದಂತೆ ವಿವಿಧ ಬಡಾವಣೆ ಗಳಿಂದ ಸದ್ಭಕ್ತರು ಬಂದು ಪಿತೃಪಕ್ಷ ದಲ್ಲಿ ಭಾಗವಹಿಸಿದರು.
ಭಾನುವಾರ ಸರ್ವ ಪಿತೃ ಅಮಾವಾಸ್ಯ ದಿನ ಸಮಾಪ್ತಿ ಗೊಂಡಿತು. ಒಂದು ದಿನವೂ ಬಿಡುವಿಲ್ಲದೇ ಜರುಗಿತು. ಸದ್ಭಕ್ತರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿ ಸಂತೃಪ್ತರಾದರು. ಸದ್ಭಕ್ತರು ಇದನ್ನು ಸದುಪಯೋಗ ಪಡೆದು ಕೊಂಡರು.
ಪಂಡಿತರಾದ ವಲ್ಲಭಾಚಾರ್ಯ, ಅನಂತಾಚಾರ್ಯ ಹಾಗೂ ನಾರಾಯಣಾಚಾರ್ಯ ಇವರುಗಳು ಪ್ರತಿ ದಿನ ಕಾರ್ಯಕ್ರಮ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅನಿಲ್ ಬಡದಾಳ್, ಜಿಲ್ಲಾ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ನರಹರಿ ಪಾಟೀಲ್, ಪವನ ಫಿರೋಜಾಬಾದ್, ಶಂಕರರಾವ ಕುಲಕರ್ಣಿ, ಪ್ರಮೋದ ದೇಸಾಯಿ, ನೀಲಲೋಹಿತ ಜೇವರ್ಗಿ, ಸಂಜು ಕುಲಕರ್ಣಿ, ಹಣಮಂತ ರಾವ ಗೊಟೂರ್, ಭೀಮಸೆನರಾವ, ಪ್ರಕಾಶ ಕುಮಸಿ, ಶಶಿಕಾಂತ ಸಾಗನೂರ, ಉಮಾಕಾಂತ ಕುಲಕರ್ಣಿ, ಪ್ರಕಾಶ ಕುಲಕರ್ಣಿ ಸೇರಿದಂತೆ ನೂರಾರು ಸದ್ಭಕ್ತರು ಭಾಗವಹಿಸಿದ್ದರು.