ಸ್ವಚ್ಛತೆ ಕುರಿತು ಎಲ್ಲಾ ಗ್ರಾಮಗಳಲ್ಲಿ ಆಂದೋಲನದ, ಜನ ಜಾಗೃತಿ ಮೂಡಿಸಬೇಕು: ಡಾ.ಉಮೇಶ ಜಾಧವ

0
50

ಕಲಬುರಗಿ: ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಆಂದೋಲನದ ಮೂಲಕ ಜನ ಜಾಗೃತಿ ಮೂಡಿಸಬೇಕು ಮತ್ತು ಜನರೆ ಸ್ವಪ್ರೇರಿತ ರಾಗಿ ಮುಂದೆ ಬಂದು ಗ್ರಾಮ ಸ್ವಚ್ಛತೆ ಇಟ್ಟುಕೊಳ್ಳುವಂತೆ ಮಾಡಬೇಕೆಂದು ಕಲಬುರಗಿ ಜಿಲ್ಲೆಯ ಲೋಕ ಸಭಾ ಸದಸ್ಯರಾದ ಡಾ.ಉಮೇಶ ಜಾಧವ ರವರು ಹೇಳಿದರು.

ಇಂದು ಮಹಾಗಾಂವ್ ಗ್ರಾಮದಲ್ಲಿ ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ, ತಾಲೂಕು ಪಂಚಾಯತ ಕಮಲಾಪೂರು, ಹಾಗೂ ಗ್ರಾಮ ಪಂಚಾಯತ್ ಮಹಾಗಾಂವ್ ರವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಮತ್ತು ಜಲ ಜೀವನ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜರಗುತ್ತಿರುವ ಸೆಪ್ಟೆಂಬರ್ 15ನೇಅಕ್ಟೋಬರ್2022 ರಿಂದ 2ನೇ ಅಕ್ಟೋಬರ್ 2022 ರವರೆಗೆ ಸ್ವಚ್ಛತಾ ಹೀ ಸೇವಾ ಆಂದೋಲನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ರವರು ಸ್ವಚ್ಛತೆಗೆ ಅತ್ಯಂತ ಮಹತ್ವ ಕೊಟ್ಟಿದ್ದರು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕಗಳು ಸಹ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಕಷ್ಟು ಚಾಲನೆಯನ್ನು ಕೊಟ್ಟಿದೆ ಅಂದರು ಮುಂದಿನ ದಿನದಲ್ಲಿ ಎಲ್ಲ ಗ್ರಾಮಗಳಲ್ಲಿ ಬೃಹತ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಿ ಕಲಬುರಗಿ ಜಿಲ್ಲೆ ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಡಗಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ ಯೋಜನಾ ನಿದೇರ್ಶಕರಾದ ಜಗದೇವಪ್ಪ ಬಿ., ರವರು ಸರ್ವರಿಗೂ ಆಂದೋಲನದ ಪ್ರತಿಜ್ಞಾ ವಿಧಿ ಬೋದಿಸಿ ಎಲ್ಲರೂ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಗಾಂವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮನೀಷಾ ನಂದಕುಮಾರ, ವಹಿಸಿಕೊಂಡಿದ್ದರು, ವೇದಿಕೆ ಮೇಲೆ ಉಪಾಧ್ಯಕ್ಷರಾದ ರಜೀಯಬೇಗಂ, ತಾಲೂಕು ಪಂಚಾಯತ ಕಮಲಾಪೂರು ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೇಶ ಪಾಟೀಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲಬುರಗಿ ಉಪ ವಿಭಾಗ ಎ.ಇ.ಇ ಪ್ರವೀಣಕುಮಾರ, ಸಹಾಯಕ ನಿರ್ದೇಶಕ ಮಲ್ಲಿನಾಥ.ಮುಖ್ಯೋಪಾಧ್ಯಯರಾದ ಶಾಂತಲಿಂಗದ, ಎಸ್.ಬಿ.ಎಂ. ಸಮಾಲೋಚಕರಾದ ಗುರುಬಾಯಿ ಪಾಟೀಲ್, ಭಾಗಪ್ಪ ಮೋದಿ, ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ನರೇಶ ಹೊಸೂರ್ಕರ, ಹಣಮಂತ ಕಟ್ಟಿಮನಿ, ಅಮೀರ ಅಲಿ, ಶಿವಪುತ್ರಪ್ಪ, ಅನಿಲ್ ರವರು ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು, ಎನ್.ಆರ್.ಎಲ್, ಎಂ. ಘಟಕದ ತುಕರಾಮ್,ಎಂ.ಬಿ.ಕೆ. ಎಲ್.ಸಿ.ಆರ್. ಸದಸ್ಯರು, ಎಂ.ಜಿ.ಎನ್.ಆರ್.ಇ.ಜಿ.ಯ ಅಧಿಕಾರಿಗಳು ಹಾಗೂ ಕೂಲಿ ಕಾರ್ಮಿಕ ಸಂಘದ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರರಾದ ಚಂದ್ರಶೇಖರ ಪಾಟೀಲ್ ರವರ ಕುರಿತು ಹಿರಿಯ ಮುಖಂಡರಾದ ಚಂದ್ರಕಾಂತರ ರವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಾಥ ಹಮ್ಮಿಕೊಳ್ಳುವ ಮೂಲಕ ಗ್ರಾಮ ಸ್ವಚ್ಛತೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಸಾಯಿ ಸೇವಾ ಕಲಾ ತಂಡದ ಮುಖ್ಯಸ್ಥರಾದ ಗಂಗೂಬಾಯಿ ಮತ್ತು ಕಲಾವಿದರ ತಂಡದಿಂದ ಬೀದಿನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಜಲ ಜೀವನ ಮಿಷನ್ ಡಿಪಿಎಂ. ಡಾ.ರಾಜು ಕಂಬಳಿಮಠ ಕಾರ್ಯಕ್ರಮ ನಿರೂಪಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ರವರು ಸರ್ವರನ್ನು ಸ್ವಾಗತಿಸಿದರು, ಎಸ್.ಬಿ.ಎಂ. ಸಮಾಲೋಚಕರಾದ ಪಾಪರಡ್ಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here