ಕಲಬುರಗಿ: ಯಾವಾಗ ನಮ್ಮಲ್ಲಿ ಇವ ನಮ್ಮವ ಎಂಬ ಭಾವನೆ ಮೂಡುತ್ತದೆಯೋ ಆಗ ಪ್ರೀತಿ ಹುಟ್ಟುತ್ತದೆ. ಇದರಿಂದ ಕೆಟ್ಟ ಕೆಲಸ ಮಾಡಲು ಮನಸ್ಸು ಒಪ್ಪುವುದಿಲ್ಲ. ಯಾವಾಗ ನಮ್ಮಲ್ಲಿ ಇವ ನಮ್ಮವ ಎಂಬ ಭಾವನೆ ಬರುತ್ತದೆ ಯೋಆಗ ಪ್ರೀತಿ, ಕರುಣೆ, ಸ್ನೇಹ, ಸಂಬಂಧ ಅಂಕುರಿಸುತ್ತದೆ ಎಲ್ಲಿ ಪ್ರೀತಿಕರುಣೆ ಸ್ನೇಹ ಇರುತ್ತದೆಯೋ ಅಲ್ಲಿಕೆಟ್ಟಿದು ನಡೆಯುವದಿಲ್ಲ. ಒಳ್ಳೆಯದು ಮಾತ್ರ ಮನಸ್ಸಲ್ಲಿ ಮೂಡುತ್ತದೆ ಎಂದು ಖ್ಯಾತಕತೆಗಾರ ವಸುಧೇಂದ್ರ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದಕನ್ನಡಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯಅಕಾಡೆಮಿ ಹಾಗೂ ಇತರ ಸಾಹಿತ್ಯ ಪ್ರಶಸ್ತಿ ಪುರಸ್ಕತರಿಗೆ ಸನ್ಮಾನಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಅವರು, ಇಂದು ನಮ್ಮದೇಶದಲ್ಲಿಇವನಾರವಎನ್ನುವ ಭಾವನೆ ಹೆಚ್ಚಾಗಿದೆ. ಇವ ನಮ್ಮವಎಂದಾಗಅನ್ಯಭಾವ ಬೆಳೆಯುವದಿಲ್ಲ. ನೈತಿಕ ಭಾವ ಬೆಳೆಯುವತ್ತದೆ ಆಗ ದೇಶ ಪ್ರಗತಿ ಹೊಂದುತ್ತದೆ ಸಮಾಜ ಸುಧಾರಿಸುತ್ತದೆ.ಜನ ನೆಮ್ಮದಿಯಿಂದ ಬದುಕುತ್ತಾರೆಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ.ವಿಕ್ರಮ ವಿಸಾಜಿಅವರು ಮಾತನಾಡುತ್ತಾಕಲ್ಯಾಣಕರ್ನಾಟಕದ ಭಾಗದಯಾವುದೇ ಲೇಖಕನಿಗೆ ಅಥವಾಕೃತಿಗೆ ಪ್ರಶಸ್ತಿ ಬಂದರೆಅದಕ್ಕೆ ಮೊದಲು ಪೆÇ್ರೀತ್ಸಾಹಿಸಿ ಪುರಷ್ಕರಿಸುವುದು ಗುಲಬರ್ಗಾ ವಿಶ್ವವಿದ್ಯಾಲಯದಕನ್ನಡಅಧ್ಯಯನ ಸಂಸ್ಥೆ.ಪೆÇ್ರ.ಎಚ್.ಟಿ. ಪೆÇೀತೆಯವರ ಪೆÇ್ರೀತ್ಸಾಹ ಲೇಖಕರ ವಲಯಕ್ಕೆ ಸ್ಪೂರ್ತಿ ಪ್ರೇರಣೆಎಂದರು.ವಸುಧೇಂದ್ರಅವರು ಬಸವಣ್ಣನವರ ವಚನದ ಮೂಲಕ ನಮಗೆ ನಿಜವಾದಅರ್ಥ ಮತ್ತುರೂಪವನ್ನು ತಿಳಿಸಿಕೊಟ್ಟಿದ್ದಾರೆ ಎಂದರು.ಲೇಖಕ ಕೃತಿ ಬರೆಯುವಾಗ ಮಾತ್ರಅದುಅವನದು.ಬಿಡುಗಡೆಯಾದ ಮೇಲೆ ಅದುಕನ್ನಡ ಲೋಕದ ಆಸ್ತಿ ಎಂದು ಹೇಳಿದರು.ಪ್ರಶಸ್ತಿ ಪುರಸ್ಕøತರಾದಡಾ.ಚನ್ನಬಸವಯ್ಯ ಹಿರೇಮಠ, ಡಾ.ಚಂದ್ರಕಲಾ ಬಿದರಿ, ಡಾ.ಚಿ.ಸಿ. ನಿಂಗಣ್ಣಅನುಭವ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ ಕನ್ನಡಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ.ಎಚ್.ಟಿ. ಪೆÇೀತೆಯವರು ಮಾತನಾಡುತ್ತಇಂತಹ ಕಾರ್ಯಕ್ರಮಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗಲಿ, ಅವರು ಬರೆಯುವಂತಾಗಲಿ ಎಂಬುದು ನನ್ನಉದ್ದೇಶ. ಬಸವಣ್ಣನವರನ್ನುಅಂತರಾಷ್ಟ್ರೀಯ ಮಟ್ಟದವರೆಗೆಕೊಂಡೊಯ್ದರು ಬಸವಣ್ಣ, ಗಾಂಧಿ, ಅಂಬೇಡ್ಕರ್ ಹೊರ ದೇಶಗಳಲ್ಲಿ ಶಾಂತಿಯುತರಾಗಿದದ್ದಾರೆ.ಆದರೆ ಭಾರತದಲ್ಲಿ ಮಾತ್ರಅವರ ಹೆಸರುಕೆಡಿಸುವಅಶಾಂತಿ ಮೂಡಿಸುವ ಕೆಲಸ ನಡೆಯುತ್ತಿದೆ, ಇದು ನಿಲ್ಲಬೇಕುಎಂದು ತಿಳಿಸಿದರು.ಡಾ. ವಿಜುಯಕುಮಾರ ಬೀಳಗಿ ನಿರೂಪಿಸಿದರು, ಡಾ. ವಸಂತ ನಾಸಿ ಸ್ವಾಗತಿಸಿದರು, ಡಾ.ಶುಲಾಬಾಯಿ ವಂದಿಸಿದರು.