ಅ.3ರಂದು ಬೃಹತ್ ಪ್ರತಿಭಟನೆ: ವೀರಶೈವಜಂಗಮರಿಗೆ ಎಸ್.ಸಿ ಪ್ರಮಾಣ ಪತ್ರ ವಿರೋಧಿಸಿ ಹಾಗೂ ಜನಪ್ರತಿನಿಧಿಗಳ ಬೆಂಬಲದ ಹೇಳಿಕೆ ಖಂಡಿಸಿ ಕಲಬುರಗಿಯಲ್ಲಿ ಅ.3ರಂದು ನಕಲಿ ಬೇಡಜಂಗಮರ ವಿರೋಧಿ ವೇದಿಕೆಯಿಂದ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲಾಗುವುದು.ಅಂದು ನಿಜವಾದ ಬೇಡಜಂಗಮರು ಪ್ರತಿಭಟನೆಯಲ್ಲಿತಮ್ಮಕುಲದ ವೇಷ ಭೂಷಣದೊಂದಿಗೆ ಪಾಲ್ಗೊಳ್ಳಲಿದ್ದಾರೆ.ಜಗತ್ ವೃತ್ತದಿಂದಜಿಲ್ಲಾಧಿಕಾರಿಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು. -ಅರ್ಜುನ ಭದ್ರೆ
ಕಲಬುರಗಿ: ನಕಲಿ ಬೇಡಜಂಗಮರ ಎಸ್.ಸಿ. ಪ್ರಮಾಣ ಪತ್ರ ಹೋರಾಟಕ್ಕೆ ಬೆಂಬಲ ನೀಡುತ್ತಿರುವಜನಪ್ರತಿದಿನಿಧಿಗಳಿಗೆ ಮುಂದಿನ ಬಾರಿದಲಿತರು ಮತ ಹಾಕಬಾರದುಎಂದು ನಕಲಿ ಬೇಡಜಂಗಮರ ವಿರೋಧಿ ವೇದಿಕೆಯ ಸಂಚಾಲಕರಾದಅರ್ಜುನ ಭದ್ರೆ ಹಾಗೂ ಹಣಮಂತ ಬೋಧನಕರ್ ಮನವಿ ಮಾಡಿದರು.
ದಲಿತರ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಹಿರೇಮಠ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಇದಕ್ಕೆಜನಪ್ರತಿನಿಧಿಗಳನ್ನು ಮೋಸದಿಂದ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದುಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿಆಕ್ರೋಶ ವ್ಯಕ್ತಪಡಿಸಿದರು.
19ನೇ ಶತಮಾನದಆರಂಭದಿಂದಲೂದಲಿತರಿಗೆ, ಅಸ್ಪøಶ್ಯರಿಗೆ ಮೀಸಲಾತಿ ನೀಡಲಾಗುತ್ತಿದೆ.ಬ್ರಿಟಿಷ್ ಆಡಳಿತದ ಮೀಸಲಾತಿ, ಕೊಲ್ಲಾಪುರ ಸಂಸ್ಥಾನದ ಮೀಸಲಾತಿ, ಮೈಸೂರು ಸಂಸ್ಥಾನದ ಮೀಸಲಾತಿ, ಮದ್ರಾಸ್ ಸಂಸ್ಥಾನದಲ್ಲೂ ಮೀಸಲಾತಿ ನೀಡಲಾಗಿದೆ.ಆದರೆಇಲ್ಲೆಯೂ ಸಧ್ಯದ ವೀರಶೈವಜಂಗಮರಿಗೆ ಮೀಸಲಾತಿ ನೀಡಿಲ್ಲ. ತಲೆಯ ಮೇಲೆ ಬಂಗಾರದಕಿರೀಟ ಇಟ್ಟುಕೊಳ್ಳುವ, ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗುವ ಇವರಿಗೆ ಮೀಸಲಾತಿಯಾಕೆ ನೀಡಬೇಕು?ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿ ಹಲವರಿಗೆಗುರುಎಂದು ಕರೆಸುಕೊಳ್ಳುತ್ತಿರುವ ಇವರು, ಎಂದಿಗೂ ಸಾಮಾಜಿಕಅನ್ಯಾಯ ಅನುಭವಿಸಿಲ್ಲ. ಇವರು ಮಲ ಬಳಿದಿಲ್ಲ, ಇವರ ಮಕ್ಕಳು ದೇವಸ್ಥಾನಕ್ಕೆ ಹೋದಾಗದಂಡ ಹಾಕಿಲ್ಲ. ಇಂಥವರಿಗೆ ಸಾಮಾಜಿಕವಾಗಿ ಮೀಸಲಾತಿ ನೀಡಬಾರದು.ಇವರುಆರ್ಥಿಕವಾಗಿ ಹಿಂದುಳಿದರೆ ಸಧ್ಯ ಸರಕಾರ ನೀಡಿರುವಆರ್ಥಿಕ ಹಿಂದುಳಿದವರ ಮೀಸಲಾತಿ ಬಳಸಿಕೊಳ್ಳಿ ಎಂದು ಹೇಳಿದರು.ಸಂತೋಷ ಮೇಲಿನಮನಿ, ಸುಧಾಮಧನ್ನಿ, ಪಂಡಿತ ಶಿರವಾಟಿ ಇದ್ದರು.