ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು ಮುಂದಾಗಿ: ವರ್ಮಾ

0
66

ಶಹಾಬಾದ: ಚುನಾವಣೆಯಲ್ಲಿ ನಡೆಯುವ ಅಕ್ರಮ ತಡೆಯಲು ಮತದಾರರ ಗುರುತಿನ ಚೀಟಿಯನ್ನು (ಎಪಿಕ್) ಆಧಾರ್ ಜತೆ ಜೋಡಣೆ ಮಾಡುವ ಮೂಲಕ ಮತದಾರರ ಪಟ್ಟಿಯನ್ನು ಶುದ್ಧಿಕರಣಗೊಳಿಸಲು ಮುಂದಾಗಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಸೋಮವಾರ ನಗರಸಭೆಯಲ್ಲಿ ತಾಲೂಕಾಡಳಿತ ವತಿಯಿಂದ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜತೆ ಜೋಡಣೆ ಕುರಿತು ಬಿಎಲ್‍ಓ ಹಾಗೂ ನಗರಸಭೆ ಸದಸ್ಯರಿಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

ವೋಟರ್ ಐಡಿ-ಆಧಾರ್ ಲಿಂಕ್‍ಗೆ ಮತದಾರರು ಕಚೇರಿ ಅಲೆಯಬೇಕಿಲ್ಲ. ತಮ್ಮ ಬಳಿ ಇರುವ ಮೊಬೈಲ್ ಮೂಲಕ ಸುಲಭವಾಗಿ ಲಿಂಕ್ ಮಾಡಬಹುದು. ವೋಟರ್ಸ್ ಹೆಲ್ಪ್‍ಲೈನ್ ಆಪ್ ಮೂಲಕ ಮತದಾರರ ಚೀಟಿ ಆಧಾರ್ ಲಿಂಕ್ ಮಾಡಬಹುದು. ಆಪ್ ನಲ್ಲಿ ಫಾರ್ಮ -6ಬಿಯನ್ನು ಸೆಲೆಕ್ಟ್ ಮಾಡಿ ಫೆÇೀನ್ ನಂಬರ್ ಹಾಕಿ ನಂತರ ಆಧಾರ್ ನಂಬರ್ ಹಾಕಿದರೆ ಮತದಾರರ ಚೀಟಿಗೆ ಲಿಂಕ್ ಆಗುತ್ತದೆ. ಇದರ ಬಗ್ಗೆ ಮಾಹಿತಿಯೂ ಲಭ್ಯವಾಗುತ್ತದೆ. ಮತದಾರರ ಚೀಟಿಯನ್ನು ಆಧಾರ್‍ಗೆ ಜೋಡಣೆ ಮಾಡುವ ನಿಟ್ಟಿನಲ್ಲಿ ಸರಕಾರ ಆದೇಶ ನೀಡಿದೆ.

Contact Your\'s Advertisement; 9902492681

ತಾಲೂಕಿನ ಪ್ರತಿಯೊಬ್ಬ ಮತದಾರರೂ ತಮ್ಮ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸಬೇಕು. ಯುವಕರು ಮತ್ತು ಪ್ರಜ್ಞಾವಂತರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಲಿಂಕ್ ಮಾಡುವುದರ ಜತೆಗೆ ಸರಕಾರದ ಈ ಆದೇಶವನ್ನು ಸ್ವಯಂ ಪ್ರೇರಿತವಾಗಿ ಪಾಲಿಸುವ ಮೂಲಕ ಅನಧಿಕೃತ ಮತದಾರರ ಸಂಖ್ಯೆ ಕಡಿಮೆಗೊಳಿಸಲು ಸಹಕಾರಿಯಾಗಲಿದೆ.ಎಪಿಕ್- ಆಧಾರ್ ಜೋಡಣೆಯಿಂದ ಒಬ್ಬ ವ್ಯಕ್ತಿ ಹಲವೆಡೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವುದು ತಪ್ಪುತ್ತದೆ. ನಕಲಿ ಮತದಾನ ಮತ್ತು ಚುನಾವಣಾ ಅಕ್ರಮ ನೀತಿ ತಡೆಯಬಹುದು. ಒಬ್ಬ ವ್ಯಕ್ತಿ ಒಂದೇ ಆಧಾರ್ ಕಾರ್ಡ್ ಹೊಂದಿರುವುದರಿಂದ ಒಂದು ಬಾರಿ ಮಾತ್ರ ಮತದಾನ ಮಾಡಲು ಸಾಧ್ಯವಾಗಲಿದೆ.ಅಲ್ಲದೇ ಬಿಎಲ್‍ಓಗಳು ಪ್ರತಿ ಮನೆಮನೆಗೆ ತೆರಳಿ ಆಧಾರ ಲಿಂಕ್ ಮಾಡುವ ಮೂಲಕ ಪ್ರಗತಿ ಸಾಧನೆ ತೋರಬೇಕೆಂದು ಹೇಳಿದರಲ್ಲದೇ, 18 ವರ್ಷ ಪೂರೈಸಿದವರ ಹೊಸ ಸೇರ್ಪಡೆ ಹಾಗೂ ಹೊಸ ಡಿಜಿಟಲ್ ಗುರುತಿನ ಚೀಟಿ ಪಡೆಯಬೇಕೆಂದವರು ಪಡೆಯಬಹುದು ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ನಗರಸಭೆಯ ಆಯಾ ವಾರ್ಡಿನ ಸದಸ್ಯರು ತಮ್ಮ ವ್ಯಾಪ್ತಿಯ ಜನರಿಗೆ ಆಧಾರ ಲಿಂಕ್ ಮಾಡಲು ತಿಳಿಸಬೇಕು.ಅಲ್ಲದೇ ಬಿಎಲ್‍ಓಗಳು ಸ್ಥಳೀಯ ವಾರ್ಡ ಸದಸ್ಯರ ಗಮನಕ್ಕೆ ತಂದು ಅವರ ಸಹಕಾರ ಪಡೆದು ಪ್ರಗತಿ ತೋರಬೇಕೆಂದು ತಿಳಿಸಿದರು.

ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ, ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ನಗರಸಭೆಯ ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿಯರು ಸೇರಿದಂತೆ ಬಿಎಲ್‍ಓಗಳು ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here