ಕೋಟೆ, ಕೂತ್ತಲೆಗಳು ಅಭಿವೃದ್ಧಿ ಪಡಿಸಿ: ಪ್ರಭಾಕರ ಜೋಶಿ

0
13

ಕಲಬುರಗಿ: ಇತಿಹಾಸಿಕ ಸ್ಥಳಗಳ ಅಭಿವೃದ್ಧಿ ಪಡಿಸಿ ಪ್ರವಾಸಿಗರ ತಾಣವಾಗಲಿ, ಅಲ್ಲದೇ ಈ ಭಾಗದ ನಾಗಾವಿ,ಬಹಿಮನಿ ಕೋಟೆ, ರಾಷ್ಷಕೂಟರ ಕೋಟೆ, ಕಾಳಗಿಯ ದಕ್ಷಿಣ ಕಾಶಿ,ಭಾಗವಾನ್ ಗೌತಮ ಬುದ್ಧರ ಸ್ಥಳವಾದ ಸನ್ನತಿ ಇವುಗಳ ಸ್ಥಳಗಳು ಅಭಿವೃದ್ಧಿ ಮಾಡಿ, ಪ್ರವಾಸಿಗರ ತಾಣವಾಗಬೇಕು ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

ನಗರದ ಶಹಾಬಜಾರ್ ಬಡಾವವಣೆಯ ಶಾರದಾ ಆಂಗ್ಲ ಮಾಧ್ಯಮದಲ್ಲಿ ನೆಹರು ಯುವ ಕೇಂದ್ರ ಮತ್ತು ಕಿರಣ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘದ ಆಶ್ರಯದಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿಶ್ವ ಪ್ರವಾಸೋದ್ಯಮ ದಿನವು ಅಂತರರಾಷ್ಟ್ರೀಯ ಸಮುದಾಯದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುವಲ್ಲಿ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ ಎಂದರು.

ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1979 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರಾರಂಭಿಸಿತು. ಇದರ ಆಚರಣೆಗಳು ಅಧಿಕೃತವಾಗಿ 1980 ರಲ್ಲಿ ಪ್ರಾರಂಭವಾಯಿತು. ಇದನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ ಏಕೆಂದರೆ ದಿನಾಂಕವು UNWTO ನ ಶಾಸನಗಳನ್ನು ಅಳವಡಿಸಿಕೊಂಡ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಂಘದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎನ್ ವೈಕೆ ಅಧಿಕಾರಿ ಹರ್ಷಲ್ ಸಿದ್ಧಾರ್ಥ ಕಳಸ್ಕರ್, ಕರವೇ ಜಿಲ್ಲಾಧ್ಯಕ್ಷ ಸಂತೋಷ ಚೌಧರಿ ಭಾಗವಹಿಸಿದ್ದರು. ಶಾಲೆಯ ಮುಖ್ಯಗುರುಗಳಾದ ಉದಯಕುಮಾರ್ ದಂಡೋತಿಕರ್ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here