ಕಲಬುರಗಿ/ ಜೇವರ್ಗಿ: ಜೇವರ್ಗಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯನ್ನು ದೃಷ್ಟಿಕೋನಲ್ಲಿಟ್ಟುಕೊಂಡು ತಯ್ಯಾರಿಗೆ ಶುರು ಮಾಡಿದೆ. ಸಾಕಷ್ಟು ಅನುದಾನ ಸರಕಾರದಿಂದ ವಿವಿಧ ಇಲಾಖೆಗಳಿಗೆ ತರುವುದರೊಂದಿಗೆ ಕ್ಷೇತ್ರದ ಪ್ರಗತಿಗೆ ಹಾಲಿ ಶಾಸಕರಾದ ಡಾ. ಅಜಯ್ ಸಿಂಗ್ ಶ್ರಮಿಸುತ್ತಿದ್ದರೆ, ಇತ್ತ ಪಕ್ಷದ ಪ್ರಮುಖ ಕಾರ್ಯಕರ್ತರ ತಂಡ ಅದಾಗಲೇ ತಮ್ಮ ಕಾರ್ಯಕರ್ತರ ಗುಂಪಿನೊಂದಿಗೆ ಕ್ಷೇತ್ರಾದ್ಯಂತ ಸಂಚರಿಸುತ್ತ ಬೂತ್ ಮಟ್ಟದಲ್ಲಿ ಮತದಾರರನ್ನು ಸಂಪರ್ಕಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಈಗಾಗಲೇ ಕಳೆದ 3 ದಿನದಿಂದ ಕೆಪಿಸಿಸಿ ಮಾಜಿ ಸದಸ್ಯರು, ಕಾಂಗ್ರೆಸ್ ಪ್ರಮುಖರಾಗಿರುವ ಹಣಮಂತ ಭೂಸನೂರ್ ಇವರ ನೇತತ್ವದಲ್ಲಿ ಅರಳಗುಂಡಗಿ ಜಿಪ ಕ್ಷೇತ್ರಾದ್ಯಂತ ಬೂತ್ ಮಟ್ಟದಲ್ಲಿ ಸಭೆಗಳು, ಚರ್ಚೆಗಳು ನಿರಂತರ ಸಾಗಿವೆ. ಇದಲ್ಲದೆ ಡಾ. ಅಜಯ್ ಸಿಂಗ್ ಅವರ ತವರೂರು ನೆಲೋಗಿ ಜಿಪಂ ಕ್ಷೇತ್ರಾದ್ಯಂತ ಬಸವರಾಜ ನಂದಿಗುಡಿ ಇವರ ಮುಖಂಡತ್ವದಲ್ಲಿ ಬೂತ್ ಮಟ್ಟದಲ್ಲಿ ಮತದಾರರ ಭೇಟಿ, ಮುಖಾಮುಖಿ ಸಾಗಿದೆ.
ಇದಕ್ಕಾಗಿ ಕಾರ್ಯಕರ್ತರು ಗುಂಪುಗಳನ್ನು ರಚಿಸಿಕೊಂಡು ಹಳ್ಳಿ ಸುತ್ತುತ್ತಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲಿ ಸಭೆಗಳು ಭರದಿಂದ ಸಾಗಿವೆ. ಯಾವುದೇ ಕಾರಣಕ್ಕೂ ಬೂತ್ ಮ್ಟದಲ್ಲಿ ತಮ್ಮ ಪಕ್ಷದ ಸಂಘಟನೆ ಗಟ್ಟಿಯಾಗಿ ಇರುವಂತೆಯೇ ಕಾರ್ಯಕ್ರಮ ರೂಪಿಸಿ ಸಂಚಾರ ಶುರು ಮಾಡಲಾಗಿದೆ ಎಂದು ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ಹಣಮಂತ ಭೂಸನೂರ್ ಹೇಳಿದ್ದಾರೆ.
ದಿ. ಧರಂಸಿಂಗ್ ಪ್ರತಿಷ್ಠಾನದಿಂದಲೂ ಸಾಕಷ್ಟು ಕೆಲಸಗಳು ಜೇವರ್ಗಿಯಲ್ಲಿ ಸಾಗಿವೆ. ತಾಯಿ ಮತ್ತು ಮಕ್ಕಳ ಯೋಗಕ್ಷೇಮಕ್ಕಾಗಿ ಆಸ್ಪತ್ರೆ ಕಾಮಗಾರಿ ಶುರುವಗಿದೆ. ಇದಲ್ಲದೆ ಧರಂಸಿಂಗ್ ಪ್ರತಿಷ್ಠಾನದಿಂದ ಜೇವರ್ಗಿ ಪಟ್ಟಣದಲ್ಲಿ ಬೃಹದಾಕಾರದ ಕಲ್ಯಾಣ ಮಂಟು ತಲೆ ಎತ್ತುತ್ತಿದ್ದು ಅದನ್ನು ಬಡವರ ಮದುವೆಗಳಿಗೆ ಉಚಿತ ನೀಡಲಾಗುತ್ತಿದೆ.
ಹೀಗೆ ಸರ್ಕಾರದ ಹಂತದಲ್ಲಿ ಹಣ ತಂದು ಹಾಗೂ ಪ್ರತಿಷ್ಠಾನದ ಮೂಲಕ ಈಗಿರುವ ಶಾಸಕರಾದ ಡಾ. ಅಜಯ್ ಸಂಗ್ ಅವರು ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಜನತೆಗೆ ಕೈಗೆತ್ತಿಕೊಂಡಿರುವ ಕಲ್ಯಾಣ ಯೋಜನೆಗಳ ಬಿರುಸಿನ ಪ್ರಾರ ಈ ಬೂತ್ ಮಟ್ಟದ ಸಭೆಗಳ ಮೂಲಕ ಕಾರ್ಯಕರ್ತರಾದ ನಾವೆಲ್ಲರು ಕೈಗೆತ್ತಿಕೊಂಡಿದ್ದಾಗಿ ಹಣಮಂತ ಭೂಸನೂರ್ ಹೇಳಿದ್ದಾರೆ.
ಅರಳಗುಂಡಗಿ, ನೆಲೋಗಿ ಮಾದರಿಯಲ್ಲೇ ಕೋಳಕೂರ ಜಿಪಂ ವ್ಯಪ್ತಿಯಲ್ಲಿ ರಾಜಶೇಖರ ಸಿರಿ ನೇತೃತ್ವದಲ್ಲಿಯೂ ಕೈ ಪಕ್ಷ ಸಂಘಟನೆಯ ಬಿರುಸಿನ ಕೆಲಸಗಳು ಸಾಗಿವೆ. ಅದೇ ರೀತಿ ಮಂದೇವಾಲ, ಜೇರಟಗಿ ಹಾಗೂ ಯಡ್ರಾಮಿ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಬೂತ್ ಮಟ್ಟದಲ್ಲಿ ಮತದಾರರ ಸಭೆಗಳನ್ನು ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗಿವೆ.