ಗುಣಮಟ್ಟದ ಶಿಕ್ಷಣದಿಂದಲೇ ಒಂದು ರಾಷ್ಟ್ರ ಶ್ರೀಮಂತವಾಗಲು ಸಾಧ್ಯ-ಸಿದ್ಧಲಿಂಗ ದೇವರು

0
23

ಶಹಾಬಾದ:ಒಂದು ರಾಷ್ಟ್ರ ಶ್ರೀಮಂತವಾಗಬೇಕಾದರೆ ಅದು ಅಲ್ಲಿನ ಸಂಪನ್ಮೂಲಗಳಿಂದಲ್ಲ. ಅಲ್ಲಿನ ಗುಣಮಟ್ಟದ ಶಿಕ್ಷಣದಿಂದ ಎಂದು ಮನಗಾಣಬೇಕೆಂದು ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಹೇಳಿದರು.

ಅವರು ಬುಧವಾರ ಭಂಕೂರ ಗ್ರಾಮದ ಗಾಯಕವಾಡ ಸಭಾಂಗಣದಲ್ಲಿ ಜಿಪಂ ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿತ್ತಾಪೂರ/ಶಹಾಬಾದ ವತಿಯಿಂದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಉತ್ತಮ ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಜ್ಞಾನದ ಬೆಳಕನ್ನು ನೀಡುವ ಶಿಕ್ಷಕ ವೃತ್ತಿ ಪವಿತ್ರವಾದುದು.ಅಷ್ಟೇ ಗೌರವಯುತವಾದುದು. ಶಿಕ್ಷಕ ವೃತ್ತಿ ಇರದಿದ್ದರೇ ಯಾವ ವೃತ್ತಿಗಳು ಇರುತ್ತಿರಲಿಲ್ಲ.ಒಂದು ದೇಶ ಶ್ರೀಮಂತವಾಗಬೇಕಾದರೆ ಅಲ್ಲಿನ ಗುಣಮಟ್ಟದ ಶಿಕ್ಷಣದಿಂದ.ದೇಶದ ಭವಿಷ್ಯ ನಿರ್ಮಾಣವಾಗಬೇಕಾದರೆ ಅದು ತರಗತಿ ಕೋಣೆಗಳಿಂದ. ಆ ಕೋಣೆಗಳಲ್ಲಿ ಕಲಿಸುವ ಶಿಕ್ಷಕರೇ ಅದಕ್ಕೆ ಅಡಿಪಾಯ.ತಂತ್ರಜ್ಞಾನ ಎಷ್ಟೇ ಬೆಳೆದರೂ, ಶಿಕ್ಷಕನಿಲ್ಲದೇ ಯವುದೇ ಯೋಜನೆಗಳು ಫಲಿಸುವುದಿಲ್ಲ.ಶಿಕ್ಷಕರು ಪರಿಸರಕ್ಕೆ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಅಪಡೆಟ್ ಆಗಬೇಕು.ವಿದ್ಯಾರ್ಥಿಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಆತ್ಮಸ್ಥೈರ್ಯ ಬೆಳೆಸಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಶಿಕ್ಷಕರು ಶ್ರಮವಹಿಸಬೇಕಿದೆ ಎಂದರು.

ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಮಾತನಾಡಿ, ಸರಕಾರ ಎಲ್ಲಾ ರಿತೀಯ ಸೌಲಭ್ಯಗಳನ್ನು ಶಿಕ್ಷಕರಿಗೆ ನೀಡುತ್ತಿದೆ.ಆದರೆ ಶಿಕ್ಷಕರು ಪಾರಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಸಂಬಳ ತಡವಾದರೆ ದಿಗಿಲು ಬಡೆಯುತ್ತದೆ.ಆದರೆ ಮಕ್ಕಳಿಗೆ ಗುಣಾತ್ಮಕತೆ ಇರದಿದ್ದರೂ ದಿಗಿಲು ಬಡಿದು ಅವರಿಗೆ ಒಳ್ಳೆಯ ಶಿಕ್ಷಣ ನೀಡುವತ್ತ ಮುಂದಾಗಬೇಕು.ಮಕ್ಕಳ ಕಲಿಕಾ ಪ್ರಗತಿ ಮಾಡುವುದೇ ಶಿಕ್ಷಕನ ಕರ್ತವ್ಯ. ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ಪ್ರಸ್ತುತ ತಾಂತ್ರಿ ಸೌಲಭ್ಯ ಅರಿತು ಮಕ್ಕಳಿಗಾಗಿ ಶ್ರಮಿಸಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಮಾತನಾಡಿದರು.ಈ ಸಂದರ್ಭದಲ್ಲಿ ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ಕ.ರಾ.ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೆದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿತ್ತಾಪೂರ ಅಧ್ಯಕ್ಷ ಬಸವರಾಜ ಬಳೊಂಡಗಿ, ಸ.ಪ್ರೌ.ಶಾ. ಗ್ರೇಡ್-1 ದೈ.ಶಿಕ ಸಂಘದ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಕ.ರಾ.ಪ್ರೌ.ಶಾ.ಸ.ಶಿ ಸಂಘದ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ್, ಅನುದಾನಿತ ಪ್ರೌ.ಶಾ.ಶಿ. ಹಾಗೂ ಶಿಕ್ಷಕೇತರ ಸಂಘದ ತಾಲೂಕಾಧ್ಯಕ್ಷ ಪ್ರವೀಣಕುಮಾರ ಹೇರೂರ,ಪ್ರ.ಕಾ ಗುರುಶಾಂತಪ್ಪ ನಾಟೇಕಾರ, ಅನುದಾನಿತ ಪ್ರಾ.ಶಾ.ಶಿ.ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಪ್ರ.ಕಾ ಸಂತೋಷ ಸಲಗರ ಸೇರಿದಂತೆ ಅನೇಕರು ಇದ್ದರು.

ಗಿರಿಮಲ್ಲಪ್ಪ ವಳಸಂಗ ಮತ್ತು ಉದಯಕುಮಾರ ಇಂಗಳೆ ನಿರೂಪಿಸಿದರು, ಮರೆಪ್ಪ ಭಜಂತ್ರಿ ಪ್ರಾರ್ಥಿಸಿದರು, ಚಿದಾನಂದ ಕುಡ್ಡನ್ ಪ್ರಾಸ್ತಾವಿಕ ನುಡಿದರು, ಶಿವಪುತ್ರ ಕರಣಿಕ್ ಸ್ವಾಗತಿಸಿದರು.

ಶಿಕ್ಷಕ ವೃತ್ತಿಯನ್ನು ಪೂಜ್ಯ ಭಾವನೆಯಿಂದ ಜನ ನೋಡುತ್ತಾರೆ.ಸಮಾಜ ಎಲ್ಲರನ್ನು ಒಂದು ರೀತಿಯಿಂದ ನೋಡಿದರೇ ಶಿಕ್ಷಕ ವೃತ್ತಿಯನ್ನು ಅತ್ಯಂತ ವಿಭಿನ್ನಾಗಿ ನೋಡುತ್ತದೆ. ಆದ್ದರಿಂದ ಸಮಾಜದ ನಿರೀಕ್ಷೆಯನ್ನು ಸುಳ್ಳು ಮಾಡಬಾರದು . ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು.ಅಲ್ಲದೇ ಕಾಲಕ್ಕೆ ಬದಲಾಗುವ ಮೂಲಕ ವೃತ್ತಿಗೌರವ ಎತ್ತಿಹಿಡಿಯಬೇಕಿದೆ- ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here