S.S. Tegnoor College: ಸ್ವಾಗತ, ಬಿಳ್ಕೋಡುಗೆ ಸಮಾರಂಭ

0
6

ಕಲಬುರಗಿ: ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಎಸ್ .ಎಸ್. ತೆಗನೂರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಸಹಾಯಕ ಪೋಲಿಸ್ ಆಯುಕ್ತ ದಿಪನ್ ಎಂ.ಎನ್ ಹಾಗೂ ಪರಮಪೂಜ್ಯ ಶ್ರೀ ಸಿದ್ದಲಿಂಗ ದೇವರು ರಾವೂರ ಮಠ ಇವರು ಉದ್ಘಟಿಸಿದರು. ಮೂಖ್ಯ ಅತಿಥಿಗಳಾಗಿ ಆಗಮಿಸಿದ ದಿಪನ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಸಿದ್ದತೆ ಸಲಕಕರಣೆ ಪರೀಕ್ಷಾ ಕ್ರಮ ಆಯ್ಕೆಯ ವಿಧಾನ ,ಶ್ರಮ, ಜ್ಞಾನ ಹಾಗೂ ಮಹತ್ವದ ಕುರಿತು ಮಕ್ಕಳಿಗೆ ಕಿವಿ ಮಾತು ಹೇಳಿದರು, ದಿವ್ಯ ಸಾನಿದ್ಯವಹಿಸಿ ಆಶೀರ್ವಾವಚನ ನೀಡಿದ ಶ್ರೀ ಸಿದ್ದಲಿಂಗಯ್ಯ ದೇವರು ಗುರುವಿನ ಜವಾಬ್ದಾರಿ ಮಹತ್ವ ಹಾಗೂ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಗುರುವಿನ ಪಾತ್ರ ಕುರಿತು ಮಕ್ಕಳಿಗೆ ತಿಳಿ ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಲ್ಲಿ ವಿಶೇಷ ಸಾಧನೆ ಗೈದಿರುವ ಆಯ್ಕೆ 05 ಶಿಕ್ಷಕರಿಗೆ “ ಅತ್ಯುತ್ತಮ ಶಿಕ್ಕಕ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಣವೀರ ಹರಸೂರ, ಸೋಮನಾಥ ರೆಡ್ಡಿ, ರಾಜಶೇಖರ ನಾಗಶೇಟ್ಟಿ, ಸಂಜಯ ರೇವಣಕರ್, ರಜನಿ. ಬಿ.ಎಸ್ ಇವರು ಪ್ರಶಸ್ತಿ ಪಡೆದು ಶಿಕ್ಷಕರಾಗಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಹಾಗೂ ಮೊದಲು ರ್ಯಾಂಕ್ ಪಡೆದ ಕಾಲೇಜು ವಿದ್ಯಾರ್ಥಿಗಳಾದ ಪ್ರೇರಣಾ ಮಣೂರೆ ಹಾಗೂ ನಾಗರತ್ನ ಬಸವರಾಜ ಇವರಿಗೆ ಸತ್ಕರಿಸಲಾಯಿತು.

ಅದೇ ರೀತಿ ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸಿದ್ದಾಂತ, ನಾಜ್ಮೀನ್, ಮಧುಶ್ರೀ ಹಾಗೂ ಶೊಯಬ ಅಖ್ತರ ಅವರನ್ನು ಸತ್ಕರಿಸಲಾಯಿತು. ಹಾಗೇ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಭಿμÉೀಕ ಅಫ್ಟಕರ, ಶ್ರೀದೇವಿ, ನಾರಾಯಣ ರಾಠೋಡ ಅವರಿಗೆ ಅತ್ಯತ್ತಮ ವಿದ್ಯಾರ್ಥಿಗಳೆಂದು ಸತ್ಕರಿಸಲಾಯಿತು. ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ನೆನಪಿನ ಕಾಣಿಕೆ ನೀಡಲಾಯಿತು.

ಸಂಸ್ಥೆಯ ಟ್ರಸ್ಟ ಹಾಗೂ ಕಾಲೇಜಿನ ಪ್ರಚಾರ್ಯರಾದ ಡಾ: ಜ್ಯೋತಿ ಖ ತೆಗನೂರ ಅವರು ವಾರ್ಷಿಕ ವರದಿ ವಾಚನ ಮಾಡಿ ಸಂಸ್ಥೆ ನಡೆದು ಬಂದ ಹಾದಿ ಹಾಗೂ ಸಾಧನೆಗಳನ್ನು ಸ್ಮರಿನಿಕೊಂಡರು. ಹಾಗೇ ಪ್ರಾದ್ಯಪಕಿ ಕು.ಸಂಗೀತಾ ಕಂತಿ ಸಂಸ್ಥೆಯ ಪರಿಚಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು, ಪ್ರಾದ್ಯಾಪಕರಾದ ರಮೇಶ ಬಡಿಗೇರ ಅಂತಿಮ ಪರಿಚಯ ಮತ್ತು ಸನ್ಮಾನ ಸಮಾರಂಭ ನಡೆಸಿಕೊಟ್ಟರು.
ಬಿಸಿಎಂ ಅಂತಿಮ ವರ್ಷದ ವಿದ್ಯಾರ್ಥಿ ವಿರೇಶ ಮರಪಳ್ಳಿ ತನ್ನ ಅನಿಸಿಕೆ ಹಂಚಿಕೊಂಡರು.

ಬಿಸಿಎ ವಿಭಾಗದ ವಿದ್ಯಾರ್ಥಿ ಜೇವನ ದೀಪಕ ಸ್ವಾಗತ ಭಾಷಣ ನಡೆಸಿಕೊಟ್ಟರು, ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಕೆ. ರಾಹುಲ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯ ಕ್ರಮ ಗಮನಸೆಳೆದವು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಎಸ್. ತೆಗನೂರ ಹಾಗೂ ಟ್ರಸ್ಟಿಗಳಾದ ಡಾ: ಆದಿತ್ಯ ಆರ್. ತೆಗನೂರ ಸೇರಿದಂತೆ ಕಾಲೇಜಿನ ಭೋಧಕ ಭೋಧಕೇತರ ಹಾಗೂ ವಿದ್ಯಾರ್ಥಿಗಳು ಪಾಲಕ ಪೆÇೀಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here