ಸಾಮಾಜಿಕ ನ್ಯಾಯಕ್ಕೆ ಶಿವಾಜಿ ಕೊಡುಗೆ ಅನನ್ಯ: ಪ್ರೊ.ಎಚ್.ಬಿ.ಪಾಟೀಲ

0
31

ಕಲಬುರಗಿ: ಚತುರತೆ, ಸ್ನೇಹ ಸ್ವಭಾವ, ಕುಶಲ ಮಾತುಕತೆ, ಕಷ್ಟ ಸಂಹಿಷ್ಣತೆ, ಧರ್ಮ ಬಿರುತ್ವಗಳ ಮೂಲಕ ಭಾರತದಿಂದ ಮೊಗಲರನ್ನು ಹೊಡೆದೊಡಿಸಿ, ದೇಶದ ನಾಗರಿಕರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಛತ್ರಪತಿ ಶಿವಾಜಿ ಮಹಾರಾಜರು ಸಾಕಷ್ಟು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ಎಂ.ಎಂ.ಎನ್ ಟ್ಯೂಟೋರಿಯಲ್ಸ್‌ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ’ಛತ್ರಪತಿ ಶಿವಾಜಿ ಮಹಾರಾಜ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ನಮ್ಮ ದೇಶದ ಇತಿಹಾಸದಲ್ಲಿ ಅನೇಕ ರಾಜರಗಳು ಆಗಿ ಹೋಗಿದ್ದಾರೆ. ಆದರೆ, ಜ್ಯಾತ್ಯಾತೀತ, ಪರಧರ್ಮ ಸಂಹಿಷ್ಣತೆವುಳ್ಳ ಮೇರು ವ್ಯಕ್ತಿತ್ವ ಹೊಂದಿದ್ದ ಛತ್ರಪತಿ ಶಿವಾಜಿ ಅವರು, ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣುವ ಮೂಲಕ ಬಹಳ ವರ್ಷಗಳ ಹಿಂದೆಯೆ ಸ್ವರಾಜ್ಯದ ಪರಿಕಲ್ಪನೆಯನ್ನು ತಮ್ಮ ಆಡಳಿತದಲ್ಲಿ ಜಾರಿಗೆ ತಂದ ಮಹಾನ ನಾಯಕರಾಗಿದ್ದಾರೆಂದರು.

ಚಿಂತಕರಾದ ವೀರೇಶ ಬೋಳಶೆಟ್ಟಿ, ರಾಮದಾಸ ಪಾಟೀಲ ಮಾತನಾಡುತ್ತಾ, ಶಿವಾಜಿ ತಮ್ಮ ಆಡಳಿತದಲ್ಲಿ ಕೊನೆಯವರೆಗೂ ಜನಸೇವೆಯನ್ನು ಮಾಡುತ್ತಾ, ಪ್ರಜೆಗಳ ರಕ್ಷಕನಾಗಿ, ರಾಷ್ಟ್ರದ ರಕ್ಷಣೆಗಾಗಿ ಸಾಕಷ್ಟು ಪ್ರಯತ್ನಿಸಿದರು. ಎಲ್ಲಾ ಜಾತಿ, ಧರ್ಮ ದವರನ್ನು ತಮ್ಮ ಸೈನ್ಯದಲ್ಲಿ ನೇಮಿಸಿಕೊಂಡಿದರು. ಇದು ಅವರಲ್ಲಿರುವ ಸಮಾನತೆಯ ಸಂದೇಶವನ್ನು ತೋರಿಸುತ್ತದೆ. ಜನತೆಯ ನಿಜವಾದ ನಾಯಕನ ಬಳಿಯಲ್ಲಿ ದೇಶದ ಶ್ರೇಷ್ಠತೆಯ ವ್ಯಕ್ತಿಗಳನ್ನು ತನ್ನೆಡೆಗೆ ಆಕರ್ಷಿಸುವ ಯುವಶಕ್ತಿ ಬೇಕಾಗುತ್ತದೆಯೋ, ಅದು ಶಿವಾಜಿ ಹತ್ತಿರ ಅತೀ ದೊಡ್ಡ ಪ್ರಮಾಣದಲ್ಲಿತ್ತೆಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಎಸ್.ಪುರಾಣೆ, ಅಮರ ಜಿ.ಬಂಗರಗಿ, ಸೂರ್ಯಕಾಂತ ಸಾವಳಗಿ, ಚಂದ್ರಕಾಂತ ಕಟಕೆ, ದಿಲಿಪ ಬಕರೆ, ನಾಗರಾಜ ವಡ್ಡನಕೇರಿ, ಮಲ್ಲಿನಾಥ ಮುನ್ನಳ್ಳಿ, ಬಸವರಾಜ ಹೆಳವರ್, ನಾಗೇಂದ್ರಪ್ಪ ಕಲಶೆಟ್ಟಿ ಸೇರಿದಂತೆ ಸಂಸ್ಥೆ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here