ಸ್ವಂತ ಹಣದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ರಚಿಸಿದ ಶ್ರೀಮತಿ ಈರಮ್ಮ ಸಿ.ಆರ್.ಪಿ.

0
52

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕಲಬುರಗಿ ಜಿಲ್ಲೆಯ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ನಂದೂರ(ಕೆ) ಶಾಲೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಈರಮ್ಮ ಅವರು ತಮ್ಮ ಸ್ವಂತ ಹಣ ಹಾಗೂ ರಜೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರವನ್ನು ರಚನೆ ಮಾಡಿದ್ದಾರೆ.

ಇತ್ತೀಚಗೆ ಅದರ ಉಧ್ಘಾಟನೆಯನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಸವರಾಜ ಮಾಯಾಚಾರ್ಯ ನೆರವೇರಿಸಿ ಅವರು ಮಾತನಡುತ್ತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಗಳಲ್ಲಿ ಪ್ರತೀ ಕ್ಲಸ್ಟರ್ ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರಗಳು ಇವೆ. ಇಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಿದ್ದು ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು, ತರಗತಿ ಪ್ರಕ್ರಿಯೆಯ ನಾವಿನ್ಯತೆಗಳನ್ನು ಕಲಿಯುವ ಸ್ಥಳವಾಗಿಸಿಕೊಳ್ಳಲಾಗುತ್ತದೆ. ಇದನ್ನು ಅತ್ಯಂತ ಪ್ರಸಿದ್ಧವಾಗಿ ಸಮೂಹ ಸಂಪನ್ಮೂಲ ಕೇಂದ್ರ ಎಂದು ಕರೆಯಲಾಗುತ್ತದೆ.

Contact Your\'s Advertisement; 9902492681

ಈ ಕೇಂದ್ರಗಳು ಪ್ರಸ್ತುತ ಇಲಾಖೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಕ್ರಿಯಾಶೀಲವಾಗಿಲ್ಲ. ಕೆಲವು ಕಡೆಗೆ ಬಿಲ್ಡಿಂಗ್ ನ ಕೊರತೆ, ಇನ್ನು ಕೆಲವು ಕಡೆಗೆ ಸ್ಥಳದ ಕೊರತೆ, ತುಂಬಾ ದಿನಗಳಿಂದ ಕಟ್ಟಿರುವ ಸಂಪನ್ಮೂಲ ಕೇಂದ್ರಗಳು ಇದೀಗ ಹಾಳಾಗಿವೆ. ನಂದೂರ(ಕೆ) ಸಮೂಹ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಶ್ರೀಮತಿ ಈರಮ್ಮ ಅವರು ಇತ್ತೀಚಗೆ ಕಲಬುರಗಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರ ಮಾತುಗಳಿಂದ ಸ್ಪೂರ್ತಿ ಪಡೆದು ತಮ್ಮ ಸಮೂಹ ಸಂಪನ್ಮೂಲ ಕೇಂದ್ರವನ್ನು ಪುನಶ್ಚೇತನಗೊಳಿಸಲು ಸ್ವಂತ ಹಣ ಮತ್ತು ತಮ್ಮ ಯಜಮಾನರ ಸಹಾಯ ಪಡೆದು ಸಂಪನ್ಮೂಲ ಕೇಂದ್ರವನ್ನು ಕಟ್ಟುವಲ್ಲಿ ಯಶಸ್ವೀಯಾಗಿದ್ದಾರೆ.

ಈ ಸಂಪನ್ಮೂಲ ಕೇಂದ್ರ ರಚನೆ ಮಾಡಲು ಮನೆಯಲ್ಲಿ ಕೂಡಿಟ್ಟ ಸ್ವಂತ ಹಣ ಹಾಗೂ ಮನೆಯ ಯಜಮಾನರು ಚಿತ್ರಕಲಾ ಶಿಕ್ಷಕರ ಕಲೆಯನ್ನು ಬಳಸಿಕೊಂಡು ಕಳೆದ ಮೂರು ತಿಂಗಳಿಂದ ಸತತ ರಜೆ ದಿನಗಳಲ್ಲಿಯೂ ಕೆಲಸ ಮಾಡಿ ಅತ್ಯಂತ ಸುಂದರವಾದ ಸಮೂಹ ಸಂಪನ್ಮೂಲ ಕೇಂದ್ರವನ್ನು ರಚನೆ ಮಾಡಿದ್ದಾರೆ.

ಈ ಕೇಂದ್ರದಲ್ಲಿ ಸರಕಾರದ ಸುತ್ತೋಲೆಗಳು, ಗ್ರಂಥಾಲಯ ಪುಸ್ತಕಗಳು, ಶಿಕ್ಷಕರ ಕೈಪಿಡಿ, ಮಕ್ಕಳ ಕೈಪಿಡಿ, ಸರಕಾರದ ನಿಯಮಾವಳಿಗಳು, ಜ್ಞಾನವನ್ನು ಹೆಚ್ಚಿಸುವ ಆಟಗಳು, ಶಿಕ್ಷಕರ ತರಗತಿ ಪ್ರಕ್ರಿಯೆ ಸರಳಗೊಳಿಸುವ ಪುಸ್ತಕಗಳು, ಕ್ಲಸ್ಟರ್ ನ ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿದ್ದು ಶಿಕ್ಷಕರಿಗೆ ಸುಂದರ ಸಮೂಹ ಸಂಪನ್ಮೂಲ ಕೇಂದ್ರ ಇದಾಗಿದೆ. ಇಂತಹ ಮಹತ್ವದ ಕೆಲಸವನ್ನು ತಮ್ಮ ವೃತ್ತಿಯಾಚೆಗೆ ಯೋಚಿಸುವ ವ್ಯಕ್ತಿಯಿಂದ ಮಾತ್ರ ಸಾದ್ಯ. ಶ್ರೀಮತಿ ಈರಮ್ಮ ಅವರ ಕೆಲಸ ಅತ್ಯಂತ ಪ್ರಶಂಸನೀಯ. ಸಮೂಹ ಸಂಪನ್ಮೂಲ ಕೇಂದ್ರಗಳು ಬೇರೆ ಬೇರೆ ಕಾರಣಗಳಿಂದ ಅತ್ಯುತ್ತಮ ಸಂಪನ್ಮೂಲ ಕೇಂದ್ರಗಳಾಗಿ ಮರುಜೀವ ಪಡೆಯಬೇಕು. ಇಲ್ಲಿ ಶಿಕ್ಷಕರ ಸವಾಲುಗಳನ್ನು ಸರಳಗೊಳಿಸಿ ಪರಿಹಾರ ಕಂಡುಕೊಳ್ಳುವ ಕೇಂದ್ರವಾಗಲಿ ಎಂದ ಹೇಳಿದರು.

ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಶಿಕ್ಷಣ ಪ್ರೇಮಿ ಕೆ.ಎಂ.ವಿಶ್ವನಾಥ ಮರತೂರ, ಶ್ರೀಮತಿ ಈರಮ್ಮ ಅವರ ಕೆಲಸ ಅತ್ಯಂತ ಪ್ರಶಂಸನೀಯವಾಗಿದೆ. ನಾನು ಗಮನಿಸಿದಂತೆ, ಅವರು ತಮ್ಮ ಯಜಮಾನರೊಂದಿಗೆ ಭಾನುವಾರಗಳಂದು ಈ ಕೇಂದ್ರ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕೇಂದ್ರ ಇದೀಗ ಅತ್ಯಂತ ಹೆಚ್ಚು ಸಂಪನ್ಮೂಲ ಗಳಿಂದ ಕೂಡಿದೆ. ಶಿಕ್ಷಕರ ಸಮಾಲೋಚನೆಗಳ್ನು ಈ ಕೇಂದ್ರದಲ್ಲಿ ಮಾಡಲು ಅನೂಕೂಲವಾಗಿದೆ. ಈರಮ್ಮ ಅವರು ಸ್ವಂತ ಹಣವನ್ನು ಈ ಕೇಂದ್ರಕ್ಕೆ ಹಾಕಿ ರಚನೆ ಮಾಡಿರುವುದು ಪ್ರಶಂಸನೀಯ. ಈ ಗ್ರಾಮದ ಮುಖಂಡರು ಎಸ್.ಡಿ.ಎಂ.ಸಿ ಎಲ್ಲಾ ಪದಾಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಕಾಶ ರಾಠೋಡ್ ಈ ಕೇಂದ್ರ ಅತ್ಯಂತ ಸುಂದರವಾಗಿ ರಚಿಸಲಾಗಿದ್ದು, ಇದನ್ನು ರಚನೆ ಮಾಡಿವಲ್ಲಿನ ಸಿ.ಆರ್.ಪಿ. ಅವರ ಶ್ರಮ ಸಾರ್ಥಕವಾಗಿದೆ. ಈರಮ್ಮ ಅವರಿಗೆ ಅಭಿನಂದನೆಗಳು. ಈ ತರಹ ಎಲ್ಲಾ ಸಿ.ಆರ್.ಪಿ.ಗಳು ಅನುಸರಿಸಿ ಅನುಪಾಲನೆ ಮಾಡಿ ಶಿಕ್ಷಕರಿಗೆ ನೆರವಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ಲಸ್ಟರ್ ನ ವಿವಿಧ ಶಾಲೆಗಳಿಂದ ಮಕ್ಕಳ ಕಲಿಕಾ ಪ್ರದರ್ಶನ ಬಿಂಬಿಸುವ ಕಲಿಕಾಚೇತರಿಕೆ ಮೇಳ ಹಮ್ಮಿಕೊಂಡಿದ್ದರು. ಮೇಳದಲ್ಲಿ ಮಕ್ಕಳು ಅತ್ಯಂತ ಸ್ಪಟುವಾಗಿ ತಮ್ಮ ಕಲಿಕೆಯನ್ನು ಪ್ರದರ್ಶನ ಮಾಡಿದರು. ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಡಿ.ವೈ.ಪಿ.ಸಿ. ಚಂದ್ರಕಾಂತ ಪಾಟೀಲ, ಶಾಂತಪ್ಪ, ಇದ್ದರು. ಗ್ರಾಮದ ಮುಖಂಡರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯತ್ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ಸಿ.ಆರ್.ಪಿ. ಈರಮ್ಮ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here