ಕಲಬುರಗಿ: ನಾಡಹಬ್ಬದಲ್ಲಿ `ನಗೆ ದಸರಾ’ ಹಾಸ್ಯಭರಿತವಾದ ಕಾರ್ಯಕ್ರಮ

0
16

ಕಲಬುರಗಿ: ಪ್ರಸಿದ್ಧ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ, ಶರಣು ದೇಸಾಯಿ ಹಾಗೂ ಜ್ಯೂ.ಡಾ.ರಾಜಕುಮಾರ ಖ್ಯಾತಿಯ ಶಂಭುಲಿಂಗ ಬುಳ್ಳಾ ಅವರ ಮಾತುಗಳಿಗೆ ನಕ್ಕು ನಲಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರ ಮನಸ್ಸು ಉಲ್ಲಾಸಗೊಳಿಸಿದರು. ಜತೆಗೆ ಅನೇಕರ ಹೆಸರುಗಳನ್ನು ಉಲ್ಲೇಖಿಸಿ ಅವರ ಜೀವನದÀ ಸ್ವಾರಸ್ಯಕರ ಘಟನೆಗಳನ್ನು ಹೇಳುವ ಮೂಲಕ ಎಲ್ಲರನ್ನೂ ನಗೆ ಗಡಲಲ್ಲಿ ತೇಲಾಡಿಸಿದರು.
ಈ ಸನ್ನಿವೇಶ ಕಂಡು ಬಂದಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ `ನಾಡಹಬ್ಬ-2022′ ದಲ್ಲಿ `ನಗೆ ದಸರಾ’ ಎನ್ನುವ ಹಾಸ್ಯಭರಿತವಾದ ಕಾರ್ಯಕ್ರಮದಲ್ಲಿ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣಾ ದೊಡ್ಮನಿ, ಹಾಸ್ಯದಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವ ಜತೆಗೆ ಮನಸ್ಸನ್ನು ಕೂಡ ಉಲ್ಲಾಸಗೊಳಿಸಲು ಸಹಕಾರಿಯಾಗಲಿದೆ. ಹಾಸ್ಯದಲ್ಲಿ ಕೇವಲ ನಗು ಮಾತ್ರ ಇರುವುದಿಲ್ಲ. ಬದಲಾಗಿ ಜೀವನ ಪಾಠವೂ ಸಹ ಅಡಗಿರುತ್ತದೆ. ಅದನ್ನು ಸರಿಯಾಗಿ ತಿಳಿದುಕೊಂಡು ನಗುವಿನ ಜತೆಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಡಹಬ್ಬ ಆಚರಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದಂತಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮನುಷ್ಯನಿಗೆ ನೂರಾರು ಸಮಸ್ಯೆಗಳು ಬಂದರೂ ಅದನ್ನು ನಗುನಗುತ್ತಲೇ ಎದುರಿಸಬೇಕು. ನಗುತ್ತಾ ಇದ್ದರೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಡಿಹೆಚ್‍ಓ ಡಾ.ರಾಜಶೇಖರ ಮಾಲಿ, ಕಸಾಪ ಯಡ್ರಾಮಿ ಅಧ್ಯಕ್ಷ ನಾಗಪ್ಪ ಎಂ.ಸಜ್ಜನ್, ಆಳಂದ ಅಧ್ಯಕ್ಷ ಹಣಮಂತ ಶೇರಿ ಖಜೂರಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಸಿ.ಎಸ್.ಆನಂದ, ಶಕುಂತಲಾ ಪಾಟೀಲ ಜಾವಳಿ, ಎ.ಕೆ.ರಾಮೇಶ್ವರ, ಕೆ.ಎಸ್.ಬಂಧು, ಸಿ.ಎಸ್.ಮಾಲಿ ಪಾಟೀಲ, ನಾಗೇಂದ್ರಪ್ಪ ಮಾಡ್ಯಾಳೆ, ಸಂತೋಷ ಕುಂಬಾರ,ಸಿದ್ಧಲಿಂಗ ಬಾಳಿ, ಜಗದೀಶ ಮರಪಳ್ಳಿ, ಅರುಣ ಪಾಟೀಲ ಡಬರಾಬಾದ, ಶ್ರೀಕಾಂತ ಪಾಟೀಲ ದಿಕ್ಸಂಗಿ, ಡಾ.ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ರಾಜಶೇಖರ ಮರಪಳ್ಳಿ, ರವಿಕುಮಾರ ಶಹಾಪುರಕರ್, ರಾಜೇಂದ್ರ ಮಾಡಬೂಳ, ನಾಗಣ್ಣಾ ರಾಂಪೂರೆ, ಸಂತೋಷ ಕುಡಳ್ಳಿ, ಅಂಬುಜಾ ಶಿವರಾಯನಗೌಡ್ರು, ಎಂ.ಬಿ.ಬಿರಾದಾರ ಮರಗೋಳ, ಎಸ್.ಎಂ.ಪಟ್ಟಣಕರ್, ಹೆಚ್.ಎಸ್.ಬರಗಾಲಿ, ಸಂಗನಬಸವ ಪಾಟೀಲ ದಿಕ್ಸಂಗಿ, ವಿಶ್ವನಾಥ ತೊಟ್ನಳ್ಳಿ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಪ್ರಭವ ಪಟ್ಟಣಕರ್, ಮಲ್ಲಿಕಾಜುನ ಇಬ್ರಾಹಿಂಪುರ್, ಧರ್ಮಣ್ಣ ಧನ್ನಿ, ಗಿರಿಮಲ್ಲಪ್ಪ ವಳಸಂಗ, ರಮೇಶ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅಪ್ಪು ನೆನಪಿನಲ್ಲಿ ನಾಳೆ `ದಸರಾ ಪುನೀತೋತ್ಸವ’: ಕರುನಾಡಿನ ಪ್ರೀತಿಯ ಅಪ್ಪು ಎಂದೇ ಪ್ರಸಿದ್ಧಿ ಪಡೆದ ಪರೋಪಕಾರಿ ಖ್ಯಾತ ಚಿತ್ರನಟ ಪುನೀತ್ ರಾಜಕುಮಾರ ಅವರನ್ನು ಮತ್ತು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ `ನಾಡಹಬ್ಬ-2022′ ದ ಸಡಗರ-ಸಂಭ್ರಮದಲ್ಲಿ ಅ.2 ರಂದು ಸಂಜೆ 6.30 ಕ್ಕೆ ಕನ್ನಡ ಭವನದಲ್ಲಿ `ದಸರಾ ಪುನೀತೋತ್ಸವ’ ವಿಶೇಷ ಕಾರ್ಯಕ್ರಮ ಆಯೋಜಿಸಿ, ಅವರು ನಟಿಸಿದ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳ ಸಂಗೀತ ಕಲಾವಿದರಿಂದ ಪ್ರಸ್ತುತಪಡಿಸಲಿದ್ದು, ಜತೆಗೆ ಅನೇಕ ಸಾಹಿತ್ಯ ಪ್ರೇಮಿಗಳಿಂದ ನೇತ್ರದಾನದ ವಾಗ್ದಾನ ಮಾಡುವ ಮೂಲಕ ಮಾನವೀಯತೆ ಮೆರೆಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮೊ.ನಂ.98803 49025 ಗೆ ಸಂಪರ್ಕಿಸಬಹುದು. – ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಧ್ಯಕ್ಷರು, ಜಿಲ್ಲಾ ಕಸಾಪ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here