ಮಹಿಳೆಯರ ಘನತೆಯುತ ಬದುಕಿಗೆ ಮುನ್ನುಡಿ ಬರೆದವರು ಈಶ್ವರಚಂದ್ರ ವಿದ್ಯಾಸಾಗರ: ಲಂಡನಕರ್

0
26

ಶಹಾಬಾದ: ಪತಿಯ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಆಹುತಿ ನೀಡುತ್ತಿದ್ದ ಅಮಾನವೀಯ ಸತಿಸಹಗಮನ ಪದ್ದತಿ ವಿರುದ್ದ ಹೋರಾಟಕ್ಕಿಳಿದು ವಿಧವಾ ವಿವಾಹ ಕಾನೂನು ಜಾರಿಗಾಗಿ ಧ್ವನಿ ಎತ್ತಿ ಮಹಿಳೆಯರ ಘನತೆಯುತ ಬದುಕಿಗೆ ಮುನ್ನುಡಿ ಬರೆದವರು ಈಶ್ವರಚಂದ್ರ ವಿದ್ಯಾಸಾಗರ ಎಂದು ಕಲಬುರಗಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರಮೇಶ ಲಂಡನಕರ್ ಹೇಳಿದರು.

ಅವರು ಶನಿವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ನಗರದ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಕನ್ನಡ ಶಾಲೆಯಲ್ಲಿ ವಿದ್ಯಾಸಾಗರ ಅವರ 202ನೇ ಜನ್ಮ ವಾರ್ಷಿಕದ ಪ್ರಯುಕ್ತ ಆಯೋಜಿಸಿದ ಶಿಕ್ಷಣ ಉಳಿಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮÁತನಾಡಿದರು.

Contact Your\'s Advertisement; 9902492681

ಬ್ರಿಟಿಷರ ಕಾಲದಲ್ಲಿದ್ದಊಳಿಗಮಾನ್ಯ ಪದ್ಧತಿಯ ಮೌಢ್ಯಗಳು, ಕಂದಾಚಾರಗಳನ್ನು ಪ್ರಶ್ನಸಿದರು. ಜಾತಿ ಪದ್ಧತಿ, ಬಾಲ್ಯ ವಿವಾಹ, ಧರ್ಮಾಂಧತೆ ವಿರುದ್ಧ ಹೋರಾಡಿದವರು. ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ ಅವರು ಬಾಲಕಿಯರ ಶಿಕ್ಷಣಕ್ಕೆ ಶ್ರಮಿಸಿದರೆ, ಈಶ್ವರ ಚಂದ್ರ ವಿದ್ಯಾಸಾಗರ ಅವರು ವಿಧವಾ ಪುನರ್ವಿವಾಹದ ಹಕ್ಕಿಗಾಗಿ ಹೋರಾಡಿದರು. ಇಂದು ಸಮಾಜದ ಸಮಗ್ರ ಬೆಳವಣಿಗೆಗಾಗಿ ಪೂರಕವಾದ, ಧರ್ಮನಿರಪೇಕ್ಷ, ವೈಜ್ಷಾನಿಕ ಶಿಕ್ಷಣವನ್ನು ರೂಪಿಸಬೇಕಿದೆ ಎಂದರು. ತತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ವಿಶ್ವದ ಎಲ್ಲ ಬಗೆಯ ಜ್ಞಾನ ಪಡೆಯುವಂತಾಗಬೇಕು, ಇದಕ್ಕಾಗಿ ಶಿಕ್ಷಣ ಉಳಿಸಿ ಎಂಬ ಘೋಷವಾಕ್ಯವನ್ನು ಹಿಡಿದುಕೊಂಡು ಮುಂದೆ ಹೋಗೋಣ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಂಕರ ಸೋಮಯಾಜಿ ಮಾತನಾಡಿ, ಯಾರು ಸಮಾಜಕ್ಕಾಗಿ ಹೋರಾಡಿ ತಮ್ಮ ಜೀವನ ಹಾಗೂ ಪ್ರಾಣವನ್ನು ಅರ್ಪಿಸಿದರೋ ಅಂತಹ ಮಹಾನ್ ವ್ಯಕ್ತಿಗಳನ್ನು ನಾವು ಇಂದಿಗೂ ಕೂಡಾ ನೆನಪಿಸಿಕೊಳ್ಳುತ್ತೇವೆ. ಅಂತಹವರ ಸಾಲಿನಲ್ಲಿ ನಿಲ್ಲುವವರು ಈಶ್ವರಚಂದ್ರ ವಿದ್ಯಾಸಾಗರ. ಹೆಣ್ಣು ಮಕ್ಕಳ ಹಕ್ಕಿಗಾಗಿ ಅವರು ಇಡೀ ತಮ್ಮ ಜೀವಮಾನದಲ್ಲಿ ಹೋರಾಡಿದರು ಎಂದರು. ಪ್ರಾಸ್ತಾವಿಕವಾಗಿ ಶಿಕ್ಷಣ ಉಳಿಸಿ ಸಮಿತಿಯ ಸ್ಥಳೀಯ ಸದಸ್ಯರಾದ ಶಿವಕುಮಾರ ಕುಸಾಳೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳಾದ ರಾಮಣ್ಣ ಎಸ್. ಇಬ್ರಾಹಿಂಪೂರ ರವರು ವಹಿಸಿಕೊಂಡಿದ್ದರು.

ಶಿಕ್ಷಕಿ ನಾಗರತ್ನ ಇಂಗಿನಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಗುರುಲಿಂಗ ತುಂಗಳ ವಂದನಾರ್ಪಣೆ ಸಲ್ಲಿಸಿದರು. ಉಪನ್ಯಾಸಕ ಅಂಬ್ರೇಶ ಮಾವನೂರ ನಿರೂಪಿಸಿದರು. ಕಾರ್ಯಕ್ತಮದಲ್ಲಿ ಉಪಾನ್ಯಾಸಕರಾದ ಮಮತಾ ರಾಜಾಪೂರ, ಶಿವಶಂಕರ ಹೀರೇಮಠ, ಮಲ್ಲಿಕಾರ್ಜುನ ಇಂಗಿನ, ಪ್ರವೀಣ ರಾಜನ್, ಶಿಕ್ಷಕರಾದ ಗೌರಮ್ಮ, ಮೌನೇಶ ಸೋನಾರ, ಗುಂಡಮ್ಮ ಮಡಿವಾಳ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here