- ಶತಾಯಷಿ 105ರಅಜ್ಜಿಗೆ ತಹಶಿಲ್ದಾರರಿಂದ ಸನ್ಮಾನ
ಕಲಬುರಗಿ: ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದಲ್ಲಿ 105 ವರ್ಷದ ಶತಾಯುಷಿ ಹಿರಿಯ ಅಜ್ಜಿ ಮೆಹಬೂಬ್ ಬೀ ಗಂಡ ಭಾಷಾಪಟೇಲ್ ಮಾಲಿ ಪಾಟೀಲ್ ಇವರನ್ನು ಜೇವರ್ಗಿ ತಹಸಿಲ್ದಾರರು ಸೇರಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸನ್ಮಾನ ಮಾಡುವ ಮೂಲಕ ಅತ್ಯಂತ ತಾಲೂಕಿನಲ್ಲಿನ ಅತ್ಯಂತ ಹಿರಿಯ ನಾಗರಿಕರು ಎಂದು ಗುರುತಿಸಿ ಕೇಂದ್ರ ಚುನಾವಣಾ ಆಯೋಗದ ವತಿಯಿಂದ ಪ್ರಮಾಣ ಪತ್ರವನ್ನು ನೀಡಿದರು.
ಇಂದಿನ ದಿನಮಾನಗಳಲ್ಲಿ 45 ವರ್ಷ ಬದುಕುವುದೇ ಕಷ್ಟವಾಗಿದೆ ಅದರಲ್ಲಿ 105 ವರ್ಷ ಬದುಕಿರುವುದು ಅತ್ಯಂತ ಅಪರೂಪದ ಸಂಗತಿ ಎಂದು ಹೇಳಿದರು.
ಅತ್ಯಂತ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗದಿಂದ ಕೊಡಮಾಡುವ ಹಿರಿಯ ನಾಗರಿಕರು ಪ್ರಮಾಣಪತ್ರವನ್ನು ನೀಡುವ ಮೂಲಕ ಕುಟುಂಬಸ್ಥರೊಂದಿಗೆ ಜೇವರ್ಗಿ ತಸಿಲ್ದಾರರು ಮಾತುಕತೆ ನಡೆಸಿದರು.
ತಾಲೂಕ ಕಂದಾಯ ಇಲಾಖೆ ಅಧಿಕಾರಿಗಳನ್ನು ಕುಟುಂಬಸ್ಥರು ಸಹ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ, ಟಿಪು ಜಮಾದಾರ್ ಮುಕುಬಲ್, ಪಟೇಲ್ ಕಾಚೂರ್ ,ಶರಣು ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಮಲ್ಲಿಕಾರ್ಜುನ್ ಹಾಗೂ ಹಿರಿಯರು ಕುಟುಂಬದ ಮುಖ್ಯಸ್ಥರು ವಕೀಲರಾದ ಭಾಷಾ ಪಟೇಲ್ ಯಾಳವಾರ್ ಆಮ್ ಆದ್ಮಿ ಪಕ್ಷದ ಜೇವರ್ಗಿ ವಿಧಾನಸಭಾ ಆಕಾಂಕ್ಷಿಗಳು, ಹಾಗೂ ಕುಟುಂಬದ ಮೆಹಬೂಬ್ ಪಟೇಲ್ ಬೋಸ್ಗಿ, ಅಬ್ದುಲ್ ಕರೀಂ ಕೂಡಿ, ವಿ.ಎಸ್.ಎಸ್ ಬ್ಯಾಂಕಿನ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ,ರಾಜಾಪಟೇಲ್ ಪೊಲೀಸ್ ಪಾಟೀಲ್ ,ವಜೀರ್ ಪಟೇಲ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಯ್ಯ ಗುತ್ತೇದಾರ್, ದೇವು ದೊರೆ, ಗುಂಡು ಕಂಬಾರ್, ರವಿ ನಾಯ್ಕೋಡಿ ,ರಾಮಣ್ಣ ಕಂಬಾರ್ ಮುಂತಾದವರು ಪಸ್ಥಿತರಿದ್ದರು.