ಕಾಫಿ ಪ್ರಿಯರಿಗಾಗಿ ‘ ಕಾಲ್ ಕಾಫಿ ವಾಲಾ’

0
21

ಬೆಂಗಳೂರು: ಕಾಫಿ ಎಂದರೆ ಮೂಗಿ ಹೊಳ್ಳೆಗಳು ಒಮ್ಮೆಲೇ ಅರಳಿ ಬಿಡುತ್ತವೆ. ತಲೆನೋವಾದಾಗ, ಬೇಜಾರಾದಾಗ, ಮಳೆ ಬಂದಾಗ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕಾಫಿಯನ್ನು ಸವಿಯುತ್ತೇವೆ. ಕಾಫಿ ಪ್ರಿಯರಿಗಾಗಿ ಕುಮಾರಸ್ವಾಮಿ ಲೇ ಔಟ್ ನಲ್ಲಿ ‘ಕಾಲ್ ಕಾಫಿ ವಾಲಾ’ ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಅನೇಕ ಬಗೆಯ ಫ್ಲೇವರ್ಡ್ ಕಾಫಿ ಡಿಕಾಕ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಕಾಲ್ ಕಾಫಿ ವಾಲಾದ ವ್ಯವಸ್ಥಾಪಕ ನಿರ್ದೇಶಕ ಅರ್ಪಿತಾ ಪಿ.ಎ, ಎಸ್ ಬಿ ಐ ರಿಜನಲ್ ಮ್ಯಾನೇಜರ್ ಪ್ರದೀಪ್ ಆರ್, ಎಸ್ ಬಿ ಐ ಮ್ಯಾನೇಜರ್ ರುಪ್ನ ಚಕ್ರವರ್ತಿ ಮತ್ತೀತರ ಗಣ್ಯರು ಉಪಸ್ಥಿತರಿದ್ದರು.

ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಫ್ಲೇವರ್ಡ್ ಡಿಕಾಕ್ಷನ್ ಗಳನ್ನು ಬಿಡುಗಡೆ ಮಾಡಿದ ಈ ಕಾಲ್ ಕಾಫಿ ವಾಲಾ ವಿಶೇಷತೆ ಏನೆಂದರೆ ಇಲ್ಲಿ ಕಾಫಿಯನ್ನು ಯಾವುದೇ ರೀತಿಯ ಪ್ಲಾಸ್ಟಿಕ್, ಪೇಪರ್ ಅಥವಾ ಸ್ಟಿಲ್ ಕಪ್ ನಲ್ಲಿ ಕೊಡುವುದಿಲ್ಲ. ಬದಲಿಗೆ ವೆಪರ್ಸ್ / ಬಿಸ್ಕೆಟ್ ರೀತಿಯ ಕಪ್ ನಲ್ಲಿ ಕಾಫಿಯನ್ನು ಕೊಡುತ್ತಾರೆ. ಕಾಫಿ ಕುಡಿದು ನಂತರ ಬಿಸ್ಕೆಟ್ ಅನ್ನು ತಿನ್ನಬಹುದು. ಹಾಗೇ ಈ ಬಿಸ್ಕೆಟ್ ಕಪ್ ನಲ್ಲಿ ಹತ್ತು ನಿಮಿಷಗಳ ಕಾಲ ಕಾಫಿ ತಣ್ಣಗಾಗುವುದಿಲ್ಲ ಹಾಗಾಗಿ ಬಿಸಿ ಬಿಸಿ ಕಾಫಿಯನ್ನು ಕುಡಿಯುತ್ತ ಕೊನೆಗೆ ಬಿಸ್ಕೆಟ್ ಸವಿಯಬಹುದು.

Contact Your\'s Advertisement; 9902492681

ಇಲ್ಲಿ ಕ್ಯಾರಮಲ್, ವೆನಿಲ್ಲಾ, ಚಾಕೊಲೆಟ್, ಹ್ಯಾಸಲ್ ನೆಟ್, ವಾಟರ್ ಮೆಲನ್, ಪ್ಲೇನ್ ಫ್ಲೇವರ್ ಗಳು ಲಭ್ಯವಿದ್ದು ಇದು ಕಾಫಿ ಪ್ರಿಯರ ನಾಲಿಗೆಯ ರುಚಿಯನ್ನು ತಣಿಸಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here