ಯಡ್ರಾಮಿ: 4.5 ಕೋಟಿ ವೆಚ್ಚದ ರಸ್ತೆ ಕಳಪೆ ಕಾಮಗಾರಿ ಆರೋಪ: ಜಿಲ್ಲಾಧಿಕಾರಿಗೆ ದೂರು

0
631

ಯಡ್ರಾಮಿ: ತಾಲ್ಲೂಕಿನ ಬಿಳವಾರ ಗ್ರಾಮದಿಂದ ಚಾಮನಾಳದ ನಡುವೆ ನಿರ್ಮಿಸುತ್ತಿರುವ ಡಾಂಬರ್ ರಸ್ತೆ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದ್ದುˌ ಡಾಂಬರ್ ಹಾಕಿದ ಮರುದಿನವೇ ಕಿತ್ತು ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೇವಲ 2.5 ಕಿಮೀ ರಸ್ತೆಗೆ ಅಪೆಂಡಿಕ್ಸ್ ಇ ಯೋಜನೆಯಡಿ 2ಕೋಟಿˌ ಎಸ್ಡಿಪಿ(ಸ್ಪೇಶಲ್ ಡೆವೆಲಪಮೆಂಟ್ ಪ್ಯಾಕೇಜ್) 2.5 ಸೇರಿ ಒಟ್ಟು 4.5 ಕೋಟಿಯಲ್ಲಿ ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ. ಹಣವೇನೋ ಭರ್ಜರಿಯಾಗಿ ಇಡಲಾಗಿದೆ ಆದರೆ ಗುಣಮಟ್ಟ ಮಾತ್ರ ಶೂನ್ಯ ಎನ್ನುವಂತಾಗಿದೆ. ಮಳೆಯಲ್ಲಿಯೇ ಕಾಮಗಾರಿ ನಡೆಯುತ್ತಿದೆ. ಹಿಂದಿನ ರಸ್ತೆಯನ್ನು ಅಗೆಯದೆ ಮೊದಲಿನ ರಸ್ತೆಯ ಮೇಲೆಯೆ ಡಾಂಬರ್ ಹಾಕಲಾಗುತ್ತಿದೆ.

Contact Your\'s Advertisement; 9902492681
ಅರ್ಧ ಕಿ.ಮೀ ರಸ್ತೆಯನ್ನು ಸಂಪೂರ್ಣವಾಗಿ ಕಳಪೆ ಮಾಡಿದ್ದಾರೆ. ಅದನ್ನು ಮತ್ತೊಮ್ಮೆ ನಾನೇ ಖುದ್ದು ಮುಂದೆ ನಿಂತು ಕಾಮಗಾರಿ ಮಾಡಿಸಿಕೊಳ್ಳುತ್ತೇನೆ- ಅರುಣಕುಮಾರ ವಡಗೇರಿˌ ಜೆಇ.
ಕೇವಲ 200 ಮೀಟರ್ ರಸ್ತೆ ಮಾತ್ರ ಕಳಪೆಯಾಗಿದ್ದು ನಾನು ಒಪ್ಪಿಕೊಳ್ಳುತ್ತೇನೆ. ಡಾಂಬರ್ ರಸ್ತೆ ಮಾಡುವ ಮಶಿನ್ ಸೆಟ್ ಆಗದೆ ಇರುವುದಕ್ಕೆ ಈ ರೀತಿಯಾಗಿದೆ. -ದೂಳೇಶ ಪಾಟೀಲ ನೆಲೋಗಿ, ಗುತ್ತಿಗೆದಾರ.

ಮುದೋಳ ಕ್ರಾಸ್ ದಿಂದ ಚಾಮನಾಳ ಕ್ರಾಸ್ ದವರೆಗೆ ಇರುವ 20 ಕಿಮೀ ದೂರವನ್ನು ತಾಸುಗಟ್ಟಲೇ ಪ್ರಯಾಣಿಸಬೇಕಿದೆ. ಈ ಭಾಗದ ಜನರು ಉತ್ತಮ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದರು. ಅಂತೆಯೇ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಮಾಡುತ್ತಲೇ ಹಾಗೆ ಕಿತ್ತುಕೊಂಡು ಹೋಗುತ್ತಿರುವುದು ಮಾತ್ರ ದುರಂತವೇ ಸರಿ.

ಈ ರಸ್ತೆ ರಾಜ್ಯ ಹೆದ್ದಾರಿಯಾಗಿರುವುದರಿಂದ ಹಲವು ವಾಹನಗಳು ಸಂಚರಿಸುತ್ತವೆ. ಬಳಬಟ್ಟಿˌ ಬಿಳವಾರˌ ಕಾಚೂರˌ ಮಂಗಳೂರುˌ ಅಂಬರಖೇಡˌ ಮಲ್ಲಾಬಾದˌ ಹಂಗರಗಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜನರು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ. ತಾಲ್ಲೂಕಿನ ಪ್ರಭಾವಿಗಳು ಈ ಗುತ್ತಿಗೆ ಪಡೆದುಕೊಂಡಿದ್ದರಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿಯ ಬಳಿ ಎಇಇˌ ಜೆಇ ಯಾರೂ ಇರುವುದಿಲ್ಲ. ಗುತ್ತಿಗೆದಾರ ಮಾಡಿರುವುದೇ ಅಂತಿಮ ಎನ್ನುವ ಹಾಗೆ ಆಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here