ನೌಕರರಿಗೆ ಶೇ. 3.75 ರಷ್ಟು ತುಟ್ಟಿ ಭತ್ಯೆ ಬಿಡುಗಡೆ ಹರ್ಷ

0
9

ಶಹಾಬಾದ: ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿ ಕೇವಲ 24 ಗಂಟೆಗಳಲ್ಲಿ ಸರಕಾರಿ ನೌಕರರಿಗೆ ಜುಲೈ 1, 2022ರಿಂದ ಶೇ3.75 ರಷ್ಟು ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಿದ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕಾ ಅಧ್ಯಕ್ಷ ಈರಣ್ಣ ಕೆಂಭಾವಿ ಅಭಿನಂದಿಸಿ, ಹರ್ಷವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರಿ ನೌಕರರಿಗೆ ಶೇ. 3.75 ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಿ ಮೂಲ ವೇತನದ ಶೇ.27.25 ರಿಂದ ಶೇ. 31.00 ಹೆಚ್ಚಳ ಮಾಡಲಾಗಿದ್ದು, ಇದೇ ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಂಜೂರು ಮಾಡಿ ಸರಕಾರ ಆದೇಶ ಮಾಡಿದೆ.ಇದರಿಂದ ರಾಜ್ಯ 5.20 ಲಕ್ಷ ಸರಕಾರಿ ನೌಕರರು, ನಿಗಮ ಮಂಡಳಿ, ಅನುದಾನಿತ ಸಂಸ್ಥೆಗಳ ಸುಮಾರು 3 ಲಕ್ಷ ನೌಕರರು ಹಾಗೂ ಸುಮಾರು 4.5 ಲಕ್ಷ ನಿವೃತ್ತ ನೌಕರರಿಗೆ ಇದರಿಂದ ಅನುಕೂಲವಾಗಲಿದೆ.

Contact Your\'s Advertisement; 9902492681

ತುಟ್ಟಿ ಭತ್ಯೆ ಮಂಜೂರು ಮಾಡಲು ಅವಿರತವಾಗಿ ಶ್ರಮಿಸಿದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ವಿ.ಎಸ್.ಷಡಕ್ಷರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಧನ್ಯವಾದಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here