- ಸಮಾಜ ವಿಜ್ಞಾನ ಶಿಕ್ಷಕರ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಸಲಹೆ
ಕಲಬುರಗಿ: ಈ ಒಂದುಅಕಾಡೆಮಿಯುಉತ್ತಮ ಕೆಲಸ ಮಾಡುತ್ತಿದೆ. ಉತ್ತಮ ಶಿಕ್ಷಕರನ್ನು ಸಂಘಟಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಸಡುತ್ತಿದ್ದೀರಿ., ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಶಶಿಲ್ ಜಿ ನಮೋಶಿ ಹೇಳಿದರು.
ನಗರದಕನ್ನಡ ಭವನದಲ್ಲಿಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾಜ ವಿಜ್ಞಾನ ಶಿಕ್ಷಕರ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದಅವರು, ನಿಮ್ಮಎಲ್ಲಾ ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಂತು ಸ್ಪಂದಿಸುತ್ತೇನೆ. ನಿಮ್ಮಿಂದ ಈ ಪ್ರೀತಿ ಮತ್ತುಗೌರವ ಸಿಕ್ಕಿದೆ. ಇದನ್ನು ನಾನು ನಾನು ಮರೆಯುವುದಿಲ್ಲ. ನೀವು ಬಾವಿಯಲ್ಲಿ ಬಿದ್ದಾಗ ನಾನು ಅದಕ್ಕೆ ಸ್ವಲ್ಪ ಕೈ ಹಚ್ಚಿ ಮೆಲೆತ್ತುವ ಕೆಲಸ ಮಾಡಿದ್ದೇನೆ ಅಷ್ಟೇ! ಸರ್ಕಾರಿ ಶಿಕ್ಷಕರಿಗೆ ಸವಲತ್ತು ಸಿಗುವ ಹಾಗೆ ನಿಮಗೆ ಎಲ್ಲಾರೀತಿಯಿಂದಲೂ ಸವಲತ್ತು ಸಿಗಬೇಕು.ವಿದ್ಯಾರ್ಥಿಗಳ ಹಿತ ಬಯಸುವಲ್ಲಿ ಶಿಕ್ಷಕರು ಗಮನ ಕೊಡಬೇಕುಎಂದು ತಿಳಿಸಿದರು.
ಸಮಾಜ ವಿಜ್ಞಾನ ಶಿಕ್ಷಕರಾದ ನಾವು ಕೂಡ ವಿದ್ಯಾರ್ಥಿಗಳ ಪ್ರಗತಿಗೆ ಅಹರ್ನಿಶಿ ಶ್ರಮಿಸಬೇಕು. ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರು ಶಿಕ್ಷಕರ ಸಮಸ್ಯೆಗಳಿಗೆ ಸದ ಸ್ಪಂದಿಸುತ್ತಾರೆ. ಅವರ ಈ ಸಹಾಯವನ್ನು ನಮ್ಮಜೀವನದಲ್ಲಿಕೊನೆವರೆಗೂ ಮರೆಯಬಾರದು. -ಸಾಜಿದ್ ಅಲಿ, ರಾಜ್ಯಉಪಾಧ್ಯಕ್ಷ, ಸಮಾಜ ವಿಜ್ಞಾನ ಶಿಕ್ಷಕರ ಸಂಘ.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಶಿಕ್ಷಕರಾದವರು ಸದಾಕಾರ್ಯತತಪರತೆ ಮೆರೆಯಬೇಕುಎಂದರು.ಸಮಾಜ ವಿಜ್ಞಾನ ಶಿಕ್ಷಕರ ಸಂಘದರಾಜ್ಯಾಧ್ಯಕ್ಷ ಸಂತೋಷ ಜವಳಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್, ಉಪಾಧ್ಯಕ್ಷರಾದ ಸಾಜಿದ್ ಅಲಿ, ರಾಧಾ ಬಳ್ಳಾರಿ ವೇದಿಕೆಯಲ್ಲಿದ್ದರು.
ದೇವಿಂದ್ರ ನಿರೂಪಿಸಿದರು. ಸಂತೋಷಕಲಕೇರಿ, ಶ್ರೀಲತಾ ಸಜ್ಜನ್, ಫರ್ವಿನ್ ಬೇಗಂ ಸೇರಿದಂತೆರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.