ಕಲಬುರಗಿ: ಬ್ರಾಹ್ಮಣರಾದ ನಾವುಗಳು ನಮ್ಮಕರ್ತವ್ಯವನ್ನು ನಾವು ಮರೆಯತ್ತಿದ್ದೇವೆ. ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವ ವಿಪ್ರ ಸಮಾಜ ಇಂದು ಸಮಾಜದಿಂದ ಕಡೆಗಣಿಸಲ್ಪಟ್ಟಿದೆ. ಇದಕ್ಕೆ ಏನು ಕಾರಣ ಎಂದು ಅರಿಯುವುದು ಅಗತ್ಯವಾಗಿದೆ. ಕೇವಲ ವೇಷಭೂಷಣಗಳಿಂದ ಬ್ರಾಹ್ಮಣನಾದರೆ ಸಾಲದು ನಡತೆಯಿಂದ ಬ್ರಾಹ್ಮಣರಾಗಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಕಮಿತಕರ್ ಸಭಾಭವನದಲ್ಲಿ ಬ್ರಾಹ್ಮಿನ್‍ಆರ್ಗನೈಜೇಷನ್‍ಆಫ್‍ಇಂಡಿಯಾ ಆಯೋಜಿಸಿದ್ದರಾಜ್ಯಮಟ್ಟದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮತನ ಕಳದುಕೊಂಡಿದ್ದಕ್ಕೆ ಇಂದು ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಸಮಾಜಕ್ಕೆ ನಾಲ್ಕು ವರ್ಣಗಳೂ ಅಗತ್ಯವಾಗಿವೆ. ಎಲ್ಲ ವರ್ಣದವರುತಮ್ಮತಮ್ಮಧರ್ಮವನ್ನು ಪರಿಪಾಲಿಸಬೇಕು. ಸ್ವ-ಧರ್ಮ ಪ್ರೀತಿಸಬೇಕು, ಅನ್ಯಧರ್ಮವನ್ನುಗೌರವಿಸಬೇಕು ಎಂದು ಕಿವಿ ಮಾತು ಹೇಳಿದರು.
‘ವಿಪ್ರತಿಗೆ ಮಂತ್ರವೇ ಶಕ್ತಿಯಾಗಬೇಕು’ ಪ್ರತಿಯೊಬ್ಬರೂ ಸಂಧ್ಯಾವಂದನೆ, ಗಾಯತ್ರಿ ಮಂತ್ರಜಪಕಡ್ಡಾಯವಾಗಿ ಮಾಡಬೇಕು. ವಿಪ್ರಸಮಾಜದಲ್ಲಿ ಒಳಪಂಗಡಗಳಿವೆ. ಎಲ್ಲ ಮತದವರುತಮ್ಮ ಸಂಪ್ರದಾಯವನ್ನುಆಚರಿಸಬೇಕು.ಬ್ರಾಹ್ಮಣ ಸಮಾಜದ ವಿಷಯ ಬಂದಾಗಎಲ್ಲರೂಒಗ್ಗಟ್ಟಾಗಬೇಕುಎಂದು ಸಮಾಜಕ್ಕೆ ಸಲಹೆ ನೀಡಿದರು.ಸಮ್ಮೇಳನಕ್ಕೂ ಮುಂಚೆ ನಗರದರಾಮಮಂದಿರದಿಂದ ಭವ್ಯ ಶೋಭಾಯಾತ್ರೆ ಭವ್ಯ ಮೆರವಣಿಗೆಯೊಂದಿಗೆಖಮಿತಕರ್‍ಕಲ್ಯಾಣ ಮಂಟಪಕ್ಕೆತಲುಪಿತು.
ಸಂಘದ ಸಂಸ್ಥಾಪಕಾಧ್ಯಕ್ಷ ಸುಕ್ಬೀರ ಶರ್ಮಾ, ರಾಜ್ಯಾಧ್ಯಕ್ಷರವೀಂದ್ರಕುಲಕರ್ಣಿ, ವೀರೇಶಕುಲಕರ್ಣಿ, ವಿನುತ್ ಜೋಶಿ, ಉದ್ಯಮಿಕೃಷ್ಣಾಜಿಕುಲಕರ್ಣಿ, ರಂಗನಾಥದೇಸಾಯಿ, ಡಾ. ಮಲ್ಹಾರಾವ ಮಲ್ಲೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷದಯಾಘನ್‍ದಾರವಾಡಕರ್, ರಾಘವೇಂದ್ರಕುಲಕರ್ಣಿ, ಪ್ರಶಾಂತ ಕೊರಳ್ಳಿ, ರವಿ ಲಾತೂರಕರ, ಅವಿನಾಷ ಕುಲಕರ್ಣಿ, ಮಲ್ಹಾರಾವ, ಸುಮಂಗಲಾ ಚಂಕ್ರವರ್ತಿ, ವೆಂಕಟೇಶಕುಲಕರ್ಣಿ, ಡಾ. ಪ್ರಹ್ಲಾದ ಬುರ್ಲಿ, ಡಾ.ಎಸ್.ಎಸ್. ಸಿದ್ಧಾಪುರಕರ್, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಸೇರಿ ಬ್ರಾಹ್ಮಣ ಸಮಾಜದ ಪ್ರಮುಖರುಇದ್ದರು.