ಕಲಬುರಗಿ: ನಗರದ ಉದನೂರ್ ಹತ್ತಿರ ಕೆಎಸ್.ಆರ್.ಟಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಿಗ್ಗೆ ಸಂಭವಿಸಿದೆ.
ವಿಠಲ್ ಲಿಂಗಪ್ಪ ಹೂಗಾರ(35), ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ವಿಠಲ್ ಅವರು ಮೂಲತಃ ಅಫಜಲಪೂರ ತಾಲ್ಲೂಕಿನ ಕರಜಗಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದ್ದು, ಅಂಬಿಕಾ ನಗರ ಬಡಾವಣೆಯ ಅಂಬೇಡ್ಕರ್ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬಿಳಿಗ್ಗೆ ಉದನೂರ್ ರಸ್ತೆಯ ಹತ್ತಿರ ಬೈಕ್ ಮೇಲೆ ತೆರಳುತ್ತಿದ್ದಾಗ ಬಸ್ ಮತ್ತು ಬೈಕ್ ನಡುವ ಡಿಕ್ಕಿ ಸಂಭವಿಸಿ ವಿಠಲ್ ಅವರು ಸ್ಥಳಲ್ಲೇ ಸಾವನಪ್ಪಿದ್ದಾರೆಂದು ತಿಳಿದುಬಂದಿದ್ದು, ಕೆಎಸ್.ಆರ್.ಟಿ.ಸಿ ಸಂಸ್ಥೆಯ ಬಸ್ ಚಾಲಕನರ ಅಜಾಗೃಕತೆಯಿಂದ ಜಿಲ್ಲೆಯಲ್ಲಿ ಇದು ಮೂರನೇ ಘಟನೆಯಾಗಿದ್ದು, ಸಂಸ್ಥೆಯ ನಿರ್ಲಕ್ಷವೇ ಘಟನೆಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.