ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

0
72

ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬೀದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸಲಾಯಿತು.

ಒತ್ತಡದ ಜೀವನವೇ ಮಾನಸಿಕ ರೋಗಕ್ಕೆ ಮುಖ್ಯ ಕಾರಣವಾಗಿದೆ. ಇಂದು ನೂರರಲ್ಲಿ ಒಬ್ಬರು ಮಾನಸಿಕ ರೋಗಿಗಳು ಇದ್ದಾರೆ ಎಂದು ಗೊಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಸಾರ್ವಜನಿಕರನ್ನು ಕುರಿತು ಮಾತನಾಡುತ್ತಾ ಮಾನಸಿಕ ರೋಗದ ಲಕ್ಷಣಗಳು, ತಡೆಗಟ್ಟುವಿಕೆ, ತಾಲೂಕು ಮತ್ತು ಜಿಲ್ಲೆಗಳಲ್ಲಿ ಇದಕ್ಕೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಇದನ್ನು ಅಲಕ್ಷಿಸದೆ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ವಾಸಿ ಮಾಡಬಹುದಾಗಿದೆ. ಆಧುನಿಕ ಯುಗದಲ್ಲಿ ಮಾನಸಿಕ ರೋಗ ಹೆಚ್ಚುತ್ತಿದ್ದು ಅದಕ್ಕೆ ಯಾರು ಮೂಢನಂಬಿಕೆಗೆ ಗ್ರಾಮೀಣ ಪ್ರದೇಶದಲ್ಲಿ ಒಳಗಾಗದೆ ಸೂಕ್ತ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಆಯುಷ್ಯ ವೈದ್ಯಾಧಿಕಾರಿಗಳಾದ ಡಾ. ದೇವರಾಜ್ ಪ್ರಸಾದ್, ಡಾಕ್ಟರ್ ಜ್ಯೋತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಯ್ಯದ್ ಆಸ್ಮಿ, ಆರ್ ಕೆ ಎಸ್ ಕೆ ಆಪ್ತಸಮಾಲೋಚಕರಾದ ಸುಧಾಕರ್ ಎನ್, ಉಷಾ, ರಾಜು ಡಿ, ಅಂಜುಮ್, ಆಶಾ, ಮಲ್ಲಮ್ಮ, ಹಾಗೂ ವಿವಿಧ ಗ್ರಾಮದಿಂದ ಬಂದ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here