ಸುರಪುರ:ನಗರದ ಉಸ್ತಾದ್ ಮಂಜಿಲ್‍ನ ಜೆಡಿಎಸ್ ಕಚೇರಿಯಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಜೆ.ಪಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮತ್ತಿತರೆ ಮುಖಂಡರು ಮಾತನಾಡಿ, ಜಯಪ್ರಕಾಶ ನಾರಾಯಣ ಅವರ ಹೋರಾಟ ಅವಿಸ್ಮರಣೀಯವಾದದು,ದೇಶದ ತುರ್ತು ಪರಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದವರನ್ನೆಲ್ಲ ಒಟ್ಟುಗೂಡಿಸಿ ನೇಗಿಲ ಹೊತ್ತ ರೈತನ ಚಿಹ್ನೆಯ ಅಡಿಯಲ್ಲಿ ಜನತಾ ಪಕ್ಷ ದಿಂದ ಪ್ರಥಮವಾಗಿ ದೇಶದಲ್ಲಿ ಪಕ್ಷ ಅಧಿಕಾರಕ್ಕೆ ತಂದು ಮುರಾರ್ಜಿ ದೇಸಾಯಿಯವರು ಪ್ರಧಾನ ಮಂತ್ರಿಯಾಗೊ ಉತ್ತಮ ಆಡಳಿತ ನೀಡಲು ಕಾರಣರಾದವರು ಎಂದರು.
ಇದೇ ಸಂದರ್ಭದಲ್ಲಿ ಕಕ್ಕೇರಾದ ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಶೌಕತ್ ಅಲಿ,ಶಾಂತು ದೊಡ್ಮನಿ,ಅಲ್ತಾಫ್ ಹುಸೇನ್,ಮಲ್ಲನಗೌಡ,ಝಾಕೀರ ಹುಸೇನ್,ಬಾಬಾ ರಂಗಂಪೇಟ ಸೇರಿದಂತೆ ಅನೇಕರಿದ್ದರು.