ಕಾಳಜಿಗೆ ಇನ್ನೊಂದು ಹೆಸರು ಹೆಣ್ಣು: ಶಿವರಾಜ ಅಂಡಗಿ

0
478

ಕಲಬುರಗಿ: ಹೆಣ್ಣು ಜಗದ ಕಣ್ಣು ಅನ್ನುವಂತೆ ಜಗತ್ತಿನಲ್ಲಿ ಅತಿ ಹೆಚ್ಚು ಕಾಳಜಿ,ಕಕ್ಕಲತಿ ಮಮತೆ ಇರುವ ಜೀವ ಅದುವೆ ಹೆಣ್ಣು ಅಂತಹಾ ಮಮತಾ ಸಾಗರ ಉಳಿಕೊ೦ಡು,ಬೆಳೆಸುವುದು ನಮ್ಮ ನಮೆಲ್ಲರ ಕರ್ತವ್ಯ ಎಂದು ವಚನೂತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಅಭಿಪ್ರಾಯಪಟ್ಟರು.

ನಗರದ ಸಂತೋಷ ಕಾಲೊನಿಯ ಗಂಗಾ ಪರಮೇಶ್ವರಿ ಸಭಾಗ್ರಹದಲ್ಲಿ ನಡೆದ ಕುಪಸ ಕಾರ್ಯಕ್ರಮದಲ್ಲಿ ಹೆಣ್ಣು ಮಗು ಕುಮಾರಿ ಭೂಮಿಕಾ ಅವಳಿಗೆ ಸನ್ಮಾನಿಸುವ ಮೂಲಕ ಹೆಣ್ಣಿನ ಶ್ರೀ ಮಂತ( ಕುಪ್ಪಸ) ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹೆಣ್ಣುಮಕ್ಕಳು ದಿನಾಚರಣೆ ಆಚರಿಸಲಾಯಿತು.

Contact Your\'s Advertisement; 9902492681

ವೀರ ರಾಣಿ ಕಿತ್ತೂರು ಚೆನ್ನಮ್ಮ ಸ್ವತಂತ್ರ ಹೊರಾಟಗಾರ್ತಿ ಝಂಸಿರಾಣಿ ಲಕ್ಷ್ಮಿಬಾಯಿ,ಕಾನೂನು ಕ್ಷೇತ್ರದಲ್ಲಿನ ವ್ಹಿ ಎಸ್ ರಮಾದೇವಿ,ಸಂಗೀತದ ಗಂಗೂಬಾಯಿ ಹಾನಗಲ್, ವಿಜ್ಞಾನದ ಕಲ್ಪನಾ ಚಾವ್ಲಾ, ಶಿಲ್ಪಕಲೆ ಶಾಂತಲಾದೇವಿ, ವಚನಸಾಹಿತ್ಯದ ಅಕ್ಕಮಹಾದೇವಿ, ಗಣಿತದ, ಶಕುಂತಲಾ ದೇವಿ,ಪೂಲಿಸದ ಕಿರಣ ಬೇಡಿ,ಸಮಾಜಸೆವಾದ ಮದರ್ ತೆರೇಸಾ, ಕ್ರಿಡಾದ ಪಿ.ಟಿ ಉಷಾ,ಚಲನಚಿತ್ರದ ನರ್ಗಿಸ್ ದಾಸ್,ದಂತ ಸಾಧನೆ ಯಂತೆ ನಿನೂ ಕೂಡಾ ಕು.ಭೂಮಿಕಾ ಈ ಭೂಮಿ ಮೇಲೆ ಸಾಧನೆ ಮಾಡು ಎಂದು ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ದಂಪತಿಗಳಾದ ಪೂಜಾ ಪ್ರವೀಣ ಕುಮಾರ ಹುಡಗೆ,ಲಕ್ಷ್ಮಿ ಶರಣಪ್ಪ ಹುಡಗೆ ಹುಡಗೆ, ಮಹಾದೇವಿ  ಬಸವರಾಜ  ಮೈನಾಳೆ, ರೇಖಾ ಅಂಡಗಿ, ನ್ಯಾಯವಾದಿ ವಿನೊದಕುಮಾರ ಜನೇವರಿ,  ಬಸಮ್ಮ ಅಣ್ಣಾರಾವ ಹುಡಗೆ,ಶಾಂತಕುಮಾರ ಕೊನಗುತ್ತಿ,ಅನಿತಾ ಗುಡ್ಡಾ,ದೀಪಾಲಿ ಗುಡ್ಡಾ,ಮಹಾನಂದಾ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here