M.N ದೇಸಾಯಿ ಕಾಲೇಜಿನಲ್ಲಿ ಪುನೀತ್ ರಾಜಕುಮಾರ್ ಪ್ರಥಮ ವರ್ಷದ ಪುಣ್ಯಸ್ಮರಣೆ

0
97

ಕಲಬುರಗಿ: ನಗರದ ಎಂ.ಎನ್ ದೇಸಾಯಿ ಪದವಿ ಕಾಲೇಜಿನಲ್ಲಿ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಕನ್ನಡದ ಕೋಷಾಧಿಪತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ  ಕಾಲೇಜಿನ ಕಾರ್ಯದರ್ಶಿ ಜಗನ್ನಾಥ ನಾಗೂರು, ವಿಎಂ ಹಿರೇಮಠ್, ಶೇರ್ ಅಲಿ, ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ 14 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಲಾ ಎರಡು ವಿದ್ಯಾರ್ಥಿಗಳನ್ನಕೂಡಿ ಒಂದು ತಂಡ ನಿರ್ಮಿಸಲಾಗಿತ್ತು.

ಕಾಲೇಜಿನ ವಿದ್ಯಾರ್ಥಿಗಳಾದ ನರಸಿಂಗ, ಸದಾನಂದ, ವಿಶಾಲ, ಅಕ್ಷಯಕುಮಾರ, ಬಸವರಾಜ, ಸುದೀಪ, ನಿರ್ಮಲಾ, ಬಸವರಾಜ, ಅನುಷಾ, ಶ್ರೀಶೈಲ್, ಸಚಿನ್, ಮೌಲಾಲಿ, ಸವಿತಾ, ಮಂಜುನಾಥ್ ಇವರು  ಕನ್ನಡದ ಕೋಶಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು.

Contact Your\'s Advertisement; 9902492681

ಈ ಮೇಲಿನ 7 ತಂಡಗಳಲ್ಲಿ ಪ್ರಥಮ್ ಬಹುಮಾನ ಪಡೆದ ಶ್ರೀಶೈಲ ಮತ್ತು ಅನುಷಾ ತಂಡಕ್ಕೆ ನೀಡಲಾಯಿತು.  ದ್ವಿತೀಯ ಬಹುಮಾನ ಸವಿತಾ ಮತ್ತು ಮಂಜುನಾಥ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಆನಂದತೀರ್ಥ ಜೋಷಿ ನಿರೂಪಿಸಿದರು. ಆಂಗ್ಲ ಭಾಷೆಯ ಪ್ರಾಧ್ಯಾಪಕರಾದ ಅಮರ್ ಹಾಗರಗಿ ಪ್ರಶ್ನೆಗಳ ಸಲಹೆಗಾರರಾಗಿ ಕುಳಿತಿದ್ದರು.

ಪ್ರಾಧ್ಯಾಪಕರಾದ ಅನುರಾಧಾ ಮದ್ರಿ,ಪ್ರಿಯಾಂಕಾ  ಕರ್ಣಿಕ ಹಾಟ್ ಸೀಟ್ ಪ್ರಶ್ನೆಗಳ ನಿರ್ವಹಣೆ ಮಾಡಿದರು. ಹಿನ್ನಲೆ ಸಂಗೀತವನ್ನು ಪ್ರಾಧ್ಯಾಪಕರಾದ ನಾಗರಾಜ್ ಪಟ್ಟನಕರ, ಅಶ್ವಿನಿ ಎಸ್ ಪಾಟೀಲ್, ವಿದ್ಯರ್ಥಿ ಹಣಮಂತ  ನಿರ್ವಹಿಸಿದರು. ತಾಂತ್ರಿಕ ಸಹಾಯವನ್ನು ಶ್ರೀಮತಿ ರಾಧಿಕಾ ಎನ್ ಗುತ್ತೇದಾರ್ ಹಾಗೂ ಮಂಜುನಾಥ್ ಬನ್ನುರ, ಅನ್ನಪೂರ್ಣ ಪಸಾರ ಸಹಾಯ ಮಾಡಿದರು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here