ಸದಾಶಿವ ಆಯೋಗ ವರದಿಗೂ ನ್ಯಾಯ ಸಿಗಲಿ

0
251

ವಾಡಿ: ಒಳ ಮೀಸಲಾತಿ ವರ್ಗೀಕರಣದ ಬೇಡಿಕೆ ಎತ್ತಿ ಹಿಡಿದಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ತರಲು ಮುಂದಾಗಬೇಕು ಎಂದು ಮಾದಿಗ ಸಮುದಾಯದ ಯುವ ಮುಖಂಡ, ಸ್ಥಳೀಯ ಜಾಂಭವೀರ (ಮಾದಿಗ) ಸಮಾಜದ ಖಜಾಂಚಿ ಶರಣಪ್ಪಾ ಮರತೂರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೀಸಲಾತಿ ಸೌಲಭ್ಯ ಹೆಚ್ಚಿಸುವಲ್ಲಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂರಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹರ್ಷಿ ವಾಲ್ಮೀಕಿ ಗುರುಗಳ ಹೋರಾಟದ ಫಲವಾಗಿ ಪಜಾ ಮತ್ತು ಪಪಂ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ನ್ಯಾಯಮೂರ್ತಿ ನಾಗಮೋಹನದಾಸ ವರದಿ ಜಾರಿಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಕಳೆದ ಹಲವು ದಶಕದಿಂದ ಸದಾಶಿವ ಆಯೋಗ ವರದಿ ಜಾರಿ ಮಾಡುವ ಮೂಲಕ ಒಳ ಮೀಸಲಾತಿ ಪದ್ದತಿ ಜಾರಿಗೆ ತರುವಂತೆ ಮಾದಿಗ ಸಮುದಾಯ ನಿರಂತರ ಹೋರಾಟ ನಡೆಸುತ್ತಿದೆ. ಈ ಹಿಂದಿನ ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆಯನ್ನು ಕಡೆಗಣಿಸುತ್ತಲೇ ಬಂದಿವೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಒಂದು ಸಮುದಾಯಕ್ಕೆ ನ್ಯಾಯ ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ನಾಗಮೋಹನದಾಸ ವರದಿ ಜಾರಿ ಮಾಡಿದ ಬೆನ್ನಲ್ಲೇ ಬಿಜೆಪಿ ಸರ್ಕಾರ ಸದಾಶಿವ ಆಯೋಗ ವರದಿ ಜಾರಿ ಮಾಡಲಾಗುವುದು ಎಂದು ಹೇಳಿಕೆ ನೀಡಿದೆ. ಈ ರೀತಿಯ ಹೇಳಿಕೆಯಿಂದ ಮಾದಿಗ ಸಮುದಾಯ ಸಂತಸಗೊಳ್ಳುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ. ಅಸ್ಪøಶ್ಯರಲ್ಲೇ ಅಸ್ಪøಶ್ಯರಾಗಿ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿರುವ ಮಾದಿಗ ಜನಾಂಗ ಕಳೆದ ಹಲವು ದಶಕಗಳಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತವಾಗುತ್ತಿದೆ.

ಪ.ಜಾ ಮೀಸಲಾತಿ ಎಂಬುದು ಮಾದಿಗ ಸಮುದಾಯದ ಮೂಗಿಗೆ ತುಪ್ಪ ಲೇಪಿಸಿದಂತಾಗಿದೆ. ಸದಾಶಿವ ಆಯೋಗದ ವರದಿ ಜಾರಿಯಾದರೆ ಒಳ ಮೀಸಲಾತಿ ಸೌಲಭ್ಯ ಲಭ್ಯವಾಗುತ್ತದೆ. ಪರಿಣಾಮ ಬಿಜೆಪಿ ಸರ್ಕಾರ ತಕ್ಷಣವೇ ಸದಾಶಿವ ಆಯೋಗ ವರದಿ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here