ಸ್ಮಾರ್ಟ್ ಸಿಟಿಯತ್ತ ದಾಪುಗಾಲಿಟ್ಟಿರುವ ಕಲಬುರಗಿಯ ಡರ್ಟಿ ರಸ್ತೆಗಳು

0
23

ಕಲಬುರಗಿ: ಸ್ಮಾರ್ಟ್ ಸಿಟಿಯತ್ತ ದಾಪುಗಾಲಿಡುತ್ತಿರುವ ಕಲಬುರಗಿ ನಗರದಲ್ಲಿ ರಸ್ತೆಗಳು ಬಹಳಷ್ಟು ಡರ್ಟಿಯಾಗಿವೆ. ಇಲ್ಲಿನ ಮುಖ್ಯ ರಸ್ತೆಗಳಲ್ಲೇ ಹಲವು ತಗ್ಗುಗಳು ಬಿದ್ದಿದ್ದು, ದುರಸ್ತಿ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಯಥಾಸ್ಥಿತಿಗೆ ಬಂದು ಬಿಡುತ್ತಿವೆ. ನಗರಕ್ಕೆ ಮುಖ್ಯಮಂತ್ರಿ, ಮಂತ್ರಿ ಮಹೋದಯರು ಬಂದಾಗ ಮಾತ್ರಇಲ್ಲಿ ರಸ್ತೆಗಳು ಒಪ್ಪ ಓರಣಗೊಳ್ಳುತ್ತವೆ. ನಂತರ ಮತ್ತೆಅದೇ ಸ್ಥಿತಿಯಿಲ್ಲಿ ಮುಂದುವರಿಯುತ್ತಿರುವುದು ಈ ನಗರದ ಬಹು ದೊಡ್ಡದುರಂತಎಂದು ಹೇಳಬಹುದು.

ಈ ರಸ್ತೆಗಳ ಮೇಲೆ ಓಡಾಡುವ ವಾಹನ ಸವಾರರುರಸ್ತೆ ಮೇಲೆ ಪ್ರಯಾಣಿಸುತ್ತಿದ್ದರೆತಮ್ಮ ವಾಹನದಲ್ಲೇ ಕುಳಿತು ಡ್ಯಾನ್ಸ್ ಮಾಡಬೇಕಾದ ಪರಿಸ್ಥಿತಿ ಬಂದಿದೆ.ಅಂತೆಯೇ ಹದಗೆಟ್ಟಿರುವರಸ್ತೆಯಲ್ಲಿಓಡಾಡುವ ಸಾರ್ವಜನಿಕರು, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಲೇ ಸಾಗುವುದು ಸಾಮಾನ್ಯ ಸಂಗತಿಯಾಗಿದೆ.

Contact Your\'s Advertisement; 9902492681

ರಾಜಾಪುರದಿಂದ ಕಲಬುರಗಿ ನಗರ ಸಂಪರ್ಕಿಸುವ ಸುಮಾರುಎರಡು ಕಿ. ಮೀ. ರಸ್ತೆಯಂತೂತೀರಾ ಹದಗೆಟ್ಟು ಹೋಗಿದೆ. ಈ ರಸ್ತೆ ಕೇವಲ ಈಗ ಮಾತ್ರ ಹದಗೆಟ್ಟಿಲ್ಲ. ಇಲ್ಲಿರಸ್ತೆ ನಿರ್ಮಾಣ ಮಾಡಿದಾಗಿನಿಂದಇದೇ ಪರಿಸ್ಥಿತಿ ಮುಂದುವರಿದಿದೆ.ಈ ಬಾರಿ ಮಳೆ ಹೆಚ್ಚಾಗಿರುವುದರಿಂದರಸ್ತೆತುಂಬ ಗುಂಡಿಗಳು ನಿರ್ಮಾಣವಾಗಿದ್ದು, ಗುಂಡಿಗಳಲ್ಲೇ ರಸ್ತೆ ಹುಡುಕಾಡಬೇಕಾದ ಅನಿವಾರ್ಯತೆಉಂಟಾಗಿದೆ.ಸುತ್ತಲೂಜಾಲಿ ಕಂಟಿ, ದನಕರುಗಳ ಮಧ್ಯೆ ವಾಹನ ಸವಾರರು ಸಂಚರಿಸಬೇಕಾದ ಅನಿವಾರ್ಯತೆಉಂಟಾಗಿದೆ.

ಪ್ರತಿ ಸಲ ಅಲ್ಲಲ್ಲಿ ಮುರ್ಮು ಹಾಕಿ ಬಹಳವಾದರೆ ರಸ್ತೆಯ ಮೇಲೆ ಡಾಂಬರ್‍ಚೆಲ್ಲಿದಂತೆ ಮಾಡಿ ಹಣ ಲೂಟಿ ಮಾಡುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಾಹನ ಸವಾರರ ಸಂಕಟಅರ್ಥ ಮಾಡಿಕೊಳ್ಳಬೇಕಿದೆ.ಎದುರಿನಿಂದಯಾವುದಾದರೂಕಾರು, ಜೀಪುಗಳು ಬಂದರೆ ಸಾಕು ಫುಲ್‍ಟ್ರಾಫಿಕ್‍ಜಾಮ್ ಆಗಿ ಬಿಡುತ್ತದೆ.ದ್ವಿಚಕ್ರ ವಾಹನಗಳು ಕೂಡ ಸಂಚರಿಸಲಿಕ್ಕೆಅಯೋಗ್ಯವಾಗಿರುವ ಈ ರಸ್ತೆಯಲ್ಲಿ ಸವಾರರು ನಿತ್ಯ ನರ್ತನ ಮಾಡಲೇಬೇಕಾಗಿದೆ.

ನಗರದ ರಸ್ತೆಗಳನ್ನು ಅಂದ ಚೆಂದಗೊಳಿಸಿ ಅಗತ್ಯ ಮೂಲಸೌಕರ್ಯಒದಗಿಸುವ ಮೂಲಕ ಸ್ಮಾರ್ಟ್ ಸಿಟಿ ಎಂದು ಬೀಗಬೇಕಾಗಿರುವಇಲ್ಲಿನಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ರಸ್ತೆ ದುರಸ್ತಿ ಮಾಡಬೇಕು.ಇಲ್ಲದಿದ್ದಲ್ಲಿರಸ್ತೆ ಮಧ್ಯೆದಲ್ಲಿಗಿಡ ನೆಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ. -ಕಾಶಿನಾಥ ಬಿರಾದಾರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here