ಕಾರಾಗೃಹದ ಬಂದಿ ನಿವಾಸಿಗಳಿಗೆ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗ

0
28

ಕಲಬುರಗಿ: ಜನ ಶಿಕ್ಷಣ ಸಂಸ್ಥಾನ್, ಗುಲಬರ್ಗಾ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಬಂದಿ ನಿವಾಸಿಗಳಲ್ಲಿ ಪತ್ರಿ ತಂಡಕ್ಕೆ 20 ಜನ ಶಿಭಿರಾರ್ಥಿಗಳನ್ನು ಆಯ್ಕೆ ಮಾಡಿ ಎಲೆಕ್ಟ್ರಿಶಿಯನ್, ಸಹಾಯಕ ಟೈಲರಿಂಗ್ ತರಬೇತಿಗಳ ಉದ್ಘಾಟನಾ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕೆ.ಬಿ.ಪಾಟೀಲ್ ಗೌ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಲಬುರಗಿರವರು “ಬಂದಿಗಳು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಸಂಜೀವಿನಿಯ ಕಾಯಕದ ಜ್ಯೋತಿ ಬೆಳೆಗಿಸುವುದರ” ಮೂಲಕ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ತರಬೇತಿಯ ಶಿಬಿರಾರ್ಥಿಗಳು ತರಬೇತಿಯನ್ನು ಪಡೆದು ಸಮಾಜ ಮುಖ್ಯ ವಾಹಿನಿಯಲ್ಲಿ ನೀವುಗಳು ಸ್ವಾವಲಂಭಿಯಾಗಿ ಬದುಕನ್ನು ನಡೆಸುವುದಕ್ಕೆ ಈ ತರಬೇತಿಗಳು ನಿಮಗೆ ಸಹಾಯ ಮಾಡುತ್ತವೆ. ಏಕೆಂದರೆ ಜೈಲಿನಿಂದ ಬಂದವರು ಎಂಬ ಭಾವನೆಯನ್ನು ಸಮಾನ್ಯವಾಗಿ ಜನರಲ್ಲಿ ಮನೆ ಮಾಡಿರುತ್ತದೆ. ಹಾಗಾಗಿ ಅವರು ನಿಮ್ಮನ್ನು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ. ಅದಕ್ಕೆ ತಾವುಗಳು ಕಾರಾಗೃಹದಲ್ಲಿ ನೀಡುವ ವೃತ್ತಿಪರ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಂಡು ಉತ್ತಮವಾಗಿ ಬದುಕನ್ನು ನಡೆಸಲು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಕೆ ಪಾಟೀಲ್ ಚೆರ್‍ಮನ್, ಜನ ಶಿಕ್ಷಣ ಸಂಸ್ಥಾನ್, ಗುಲಬರ್ಗಾರವರು ಮಾತನಾಡುತ್ತಾ, ನಮ್ಮ ಸಂಸ್ಥೆ ವತಿಯಿಂದ ಸಾಮನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ತರಬೇತಿಗಳನ್ನು ನೀಡುತ್ತೆವೆ. ಈ ಬಾರಿ ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿರುವ ಬಂದಿ ನಿವಾಸಿಗಳಿಗೆ ತರಬೇತಿಗಳನ್ನು ನೀಡುವುದಕ್ಕೆ ನಮ್ಮ ಸಂಸ್ಥೆಯು ಮುಂದಾಗಿದ್ದು, ಪ್ರಾರಂಭದಲ್ಲಿ ಪ್ರತಿ ತಂಡಕ್ಕೆ 20 ಶಿಬಿರಾರ್ಥಿಗಳಂತೆ ವಿವಿಧ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡುತ್ತೇವೆ. ನಿರಂತರವಾಗಿ ತರಬೇತಿಗಳನ್ನು ನೀಡುವ ಮುಖಾಂತರ ಬಂದಿ ನಿವಾಸಿಗಳು ತರಬೇತಿಯ ಲಾಭ ಪಡೆದು ಸ್ವಯಂ ಉದ್ಯೋಗದ ಮುಖಾಂತರ ತಮ್ಮ ಜೀವನದ ಕಾಯಕಲ್ಪವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯವಾಗುತ್ತದೆಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಪಿ. ರಂಗನಾಥ್, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿರವರು ಮಾತನಾಡುತ್ತಾ, ಕಾರಾಗೃಹದ ಬಂದಿ ನಿವಾಸಿಗಳ ಸುಧಾರಣೆಗೋಸ್ಕರ ಬಂದಿಗಳನ್ನು ವಿವಿಧ ರೀತಿಯ ಆಯಾಮಗಳಲ್ಲಿ ತೊಡಗಿಸಿ ಅವರು ಕಾರಾಗೃಹದಿಂದ ಬಿಡುಗಡೆ ಹೊಂದಿ ಸಮಾಜದಲ್ಲಿ ತೆಲೆ ಎತ್ತಿ ಬದುಕುವುದಕ್ಕೆ ಬೇಕಾದ ವಾತಾವರಣವನ್ನು ಕಾರಾಗೃಹದಲ್ಲಿ ನಿರ್ಮಾಣ ಮಾಡಿ ತರಬೇತಿಗಳನ್ನು ನೀಡಲಾಗುತ್ತಿದೆ. ಬಂದಿಗಳು ಉತ್ತಮ ವ್ಯಕ್ತಿಯಾಗಿ ಹೊರಗಡೆ ಹೋಗಿ ಮನಃ ಪರಿವರ್ತನೆಯೊಂದಿಗೆ ಕುಟುಂಬದವರೊಡನೆ ಸೇರಿ ಸ್ವಾವಲಂಬನೆ ಬದುಕನ್ನು ನಡೆಸಲು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಆಗಮಿಸಿದ ಗೌ. ಸುಶಾಂತ ಚೌಗಲೆ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಕಲಬುರಗಿರವರು ಭಾಗವಹಿಸಿದರು. ಅಥಿತಿಗಳಾಗಿ ಬಿ.ಎಂ. ಕೊಟ್ರೇಶ್, ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ, ಜನ ಶಿಕ್ಷಣ ಸಂಸ್ಥಾನ್ ಸಿಬ್ಬಂದಿಗಳು, ಜೈಲರ್ ವೃಂದದವರು ಭಾಗವಹಿಸಿದರು. ಸ್ವಾಗತ ಮತ್ತು ಪ್ರಾಸ್ತಾವಿಕವನ್ನು ವಿ. ಕೃಷ್ಣಮೂರ್ತಿ, ಸಹಾಯಕ ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದ ನಿರೂಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ನಾಗಾರಾಜ ಮುಲಗೆ ನೇರವೆರಿಸಿದರು. ವಂದಾರ್ಪಣೆಯನ್ನು ಸರೋಜ ಎಸ್.ಟಿ ಜೈಲರ್ ಇವರು ನಡೆಸಿಕೊಟ್ಟರು ಪ್ರಾರ್ಥನಾ ಗೀತೆಯನ್ನು ಶಿಕ್ಷಾ ಬಂದಿಯಿಂದ ಹಾಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here