ಅ.15 ರಂದು 9 ಹೈಕು ಕೃತಿಗಳ ಜನಾರ್ಪಣೆ

0
50

ಕಲಬುರಗಿ, ಅ. 14- ಕರ್ನಾಟಕ ಹೈಕು ಪರಿಷತ್ತು ವತಿಯಿಂದ ಕರ್ನಾಟಕದ ವಿವಿಧ ಜಿಲ್ಲೆಗಳ ಕವಿಗಳು ಬರೆದ 9 ಹೈಕು ಸಂಕಲನಗಳ ಜನಾರ್ಪಣೆ ಸಮಾರಂಭವು ಅಕ್ಟೋಬರ್ 15 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಹೈಕು ಪರಿಷತ್ತಿನ ರೂವಾರಿ ಮತ್ತು ಲೇಖಕರೂ ಆಗಿರುವ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಇದೇ ಮೊದಲ ಬಾರಿಗೆ ಜಪಾನಿ ಕಾವ್ಯ ಹೈಕು ಪ್ರಕಾರದಲ್ಲಿ ಒಂದೇ ವೇದಿಕೆಯಡಿ 9 ಪುಸ್ತಕಗಳನ್ನು ಜನಾರ್ಪಣೆ ಆಗುತ್ತಿದ್ದು, ದಾಖಲೆಯ ಈ ಕಾರ್ಯಕ್ರಮವನ್ನು ಗುಲಬರ್ಗ ವಿಶ್ವವಿದ್ಯಾಲಯ ಕಲಬುರಗಿಯ ಕುಲಪತಿಗಳಾದ ಡಾ.ದಯಾನಂದ ಅಗಸರ ಅವರು ಉದ್ಘಾಟಿಸುವರು.

Contact Your\'s Advertisement; 9902492681

ಕನ್ನಡದಲ್ಲಿ ಹೈಕು ಕವಿಗಳೆಂದೇ ಪ್ರಖ್ಯಾತರಾದ ಕೊಪ್ಪಳದ ಹಿರಿಯ ಸಾಹಿತಿಗಳಾದ ಕೆ.ಬಿ.ಬ್ಯಾಳಿ ಅವರು 9 ಹೈಕು ಸಂಕಲನಗಳನ್ನು ಜನಾರ್ಪಣೆ ಮಾಡುವರು. ಇನ್ನೋರ್ವ ಹಿರಿಯ ಹೈಕು ಕವಿಗಳಾದ ರಾಯಚೂರಿನ ವೀರಹನುಮಾನ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.

ವಿಶಿಷ್ಟ ಮತ್ತು ವಿಭಿನ್ನವಾಗಿ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆಯ ವಿನ್ಯಾಸ ವಿಶೇಷವಾಗಿ ರೂಪಿಸಲಾಗಿದ್ದು, ಕಾರ್ಯಕ್ರಮವೂ ಸಹ ವಿಭಿನ್ನವಾಗಿ ಇರಲಿದೆ.

ಬಿಡುಗಡೆಯಾಗುವ 9 ಕೃತಿಗಳು : ಗುಲ್ಮೊಹರ್ (ವೀರಹನುಮಾನ್ ರಾಯಚೂರು), ಕರವೀರನ ಹಾಯ್ಕುಗಳು (ವೀರಪ್ಪ ನಿಂಗೋಜಿ ಕೊಪ್ಪಳ), ಹೊನ್ನಗರಿ (ಸಿದ್ದರಾಮ ಹೊನ್ಕಲ್ ಯಾದಗಿರಿ), ಮನೋಜ್ಞನ ಹೈಕುಗಳು (ಮಕರಂದ ಮನೋಜ್ ತುಮಕೂರು), ಭಾವಸ್ಫುರಣ (ಕೆ.ಸುನಂದಾ ವಿಜಯಪುರ), ಉಸಿರ ಗಂಧ ಸೋಕಿ (ಎ.ಎಸ್.ಮಕಾನದಾರ), ಸಾವಿರದ ಸಾಲುಗಳು (ಸಿದ್ದಲಿಂಗಪ್ಪ ಬೀಳಗಿ ಹುನಗುಂದ), ಮತ್ತು ಕಲಬುರಗಿ ಜಿಲ್ಲೆಯ ಮಡಿಲ ಮುತ್ತುಗಳು (ಶಿವಲೀಲಾ ಡೆಂಗಿ) ಹಾಗೂ ಬೆಳಕು ತಾಕಿದ ಬೆರಳು (ಮಹಿಪಾಲರೆಡ್ಡಿ ಮುನ್ನೂರ್) ಸೇರಿ 9 ಹೈಕು ಕೃತಿಗಳು ಬಿಡುಗಡೆಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here